Asianet Suvarna News Asianet Suvarna News

ಚಂದ್ರಯಾನ ಯಶಸ್ಸಿನ ಪ್ರಮುಖ 6 ರೂವಾರಿಗಳಿವರು

ಭಾರತದ ಚಂದ್ರಯಾನ-3 ಯಶಸ್ಸಿನ ಹಿಂದೆ ಅನೇಕ ರೂವಾರಿಗಳು ಇದ್ದಾರೆ. ಅವರಲ್ಲಿ ಹಲವರು ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ ಪ್ರಮುಖ ಪಾತ್ರ ವಹಿಸಿದವರ ಕೊಡುಗೆ ಏನು? ಅನೇಕ ವರ್ಷಗಳ ಕಾಲ ಚಂದ್ರಯಾನ ಯೋಜನೆಗೆ ಹೇಗೆ ಶ್ರಮಿಸಿದ್ದರು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ISRO chief somnath to Ramkrishna 6 Key persons to Chandrayaan3 Success akb
Author
First Published Aug 24, 2023, 6:58 AM IST

ಭಾರತದ ಚಂದ್ರಯಾನ-3 ಯಶಸ್ಸಿನ ಹಿಂದೆ ಅನೇಕ ರೂವಾರಿಗಳು ಇದ್ದಾರೆ. ಅವರಲ್ಲಿ ಹಲವರು ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ ಪ್ರಮುಖ ಪಾತ್ರ ವಹಿಸಿದವರ ಕೊಡುಗೆ ಏನು? ಅನೇಕ ವರ್ಷಗಳ ಕಾಲ ಚಂದ್ರಯಾನ ಯೋಜನೆಗೆ ಹೇಗೆ ಶ್ರಮಿಸಿದ್ದರು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಎಸ್‌. ಸೋಮನಾಥ್‌

ಎಸ್‌. ಸೋಮನಾಥ್‌ ಅವರು ಹಾಲಿ ಇಸ್ರೋ ಮುಖ್ಯಸ್ಥರು. ಮೂಲತಃ ಅವರು ಏರೋಸ್ಪೇಸ್‌ ಎಂಜಿನಿಯರ್‌. ಚಂದ್ರಯಾನ-3 ವ್ಯೋಮನೌಕೆಯನ್ನು ಗಗನಕ್ಕೆ ಹೊತ್ತೊಯ್ದ ವಾಹಕದ (ರಾಕೆಟ್‌) ವಿನ್ಯಾಸ ಮಾಡಿದವರಲ್ಲಿ ಇವರೂ ಒಬ್ಬರು. ಚಂದ್ರಯಾನ-3 ವ್ಯೋಮನೌಕೆಯು ಉಡಾವಣೆ ಆಗುವ ಮುನ್ನ ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿಕೊಂಡರು. ಬೆಂಗಳೂರಿನ ಪ್ರತಿಷ್ಠಿತ ಐಐಎಸ್ಸಿ ವಿದ್ಯಾರ್ಥಿಯಾಗಿರುವ ಅವರು ಸಂಸ್ಕೃತ ಮಾತನಾಡಬಲ್ಲರು ಮತ್ತು ‘ಯಾನಂ’ ಎಂಬ ಸಂಸ್ಕೃತ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರ ಹೆಸರು ಸೋಮನಾಥ ಎಂದರೆ ‘ಚಂದ್ರನ ಅಧಿಪತಿ’.

ಎಸ್‌. ಉನ್ನಿಕೃಷ್ಣನ್‌ ನಾಯರ್‌

(Unnikrishnan Nair) ಅವರು ಭಾರತದ ರಾಕೆಟ್ರಿ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅವರು ಬಾಹ್ಯಾಕಾಶ ಇಂಜಿನಿಯರ್‌ ಆಗಿದ್ದು, ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಭಾರತದ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ಬೆಂಗಳೂರಿನ ಐಐಎಸ್ಸಿ ವಿದ್ಯಾರ್ಥಿ, ಅವರು ‘ಹ್ಯೂಮನ್‌ ಸ್ಪೇಸ್‌ ಸೆಂಟರ್‌’ನ ಮೊದಲ ನಿರ್ದೇಶಕರಾಗಿದ್ದರು ಮತ್ತು ಗಗನಯಾನ ಕಾರ್ಯಕ್ರಮಕ್ಕಾಗಿ ಅನೇಕ ನಿರ್ಣಾಯಕ ಮಿಷನ್‌ಗಳ ನೇತೃತ್ವ ವಹಿಸಿದ್ದರು. ಅವರ ನೇತೃತ್ವದಲ್ಲಿ ಲಾಂಚ್‌ ವೆಹಿಕಲ್ ಮಾರ್ಕ್-3, ಶೇ.100ರಷ್ಟುಯಶಸ್ಸಿನ ದಾಖಲೆಯನ್ನು ಹೊಂದಿದೆ. ಅವರು ಸಣ್ಣ ಕಥೆಗಳನ್ನೂ ಬರೆಯುತ್ತಾರೆ.

ವೀರಮುತ್ತುವೇಲ್‌

ಚಂದ್ರಯಾನ-3 ಮಿಷನ್‌ನ ಯೋಜನಾ ನಿರ್ದೇಶಕರಾದ ವೀರಮುತ್ತುವೇಲ್‌ (Veeramuthuvel) ಅವರು ಕಳೆದ ನಾಲ್ಕು ವರ್ಷಗಳಿಂದ ಚಂದ್ರಯಾನ ಯೋಜನೆಯಲ್ಲಿ ಅವಿರತ ಕೆಲಸ ಮಾಡಿದ್ದಾರೆ. ಅವರು ಚೆನ್ನೈನಲ್ಲಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಚಂದ್ರಯಾನ-2 ಮತ್ತು ಮಂಗಳಯಾನ ಮಿಷನ್‌ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 2019 ರಲ್ಲಿ ವಿಫಲವಾದ ವಿಕ್ರಮ… ಲ್ಯಾಂಡರ್‌ ತಯಾರಿಕೆಯಲ್ಲೂ ಅವರು ಮುಂಚೂಣಿಯಲ್ಲಿದ್ದರು ಹಾಗೂ ಲ್ಯಾಂಡರ್‌ ತಯಾರಿಕೆಯಲ್ಲಿ ಸಾಕಷ್ಟುಅನುಭವ ಸಂಪಾದಿಸಿದರು. ಇದೇ ಜ್ಞಾನವು ಜ್ಞಾನವು ಹೆಚ್ಚು ದೃಢವಾದ ಚಂದ್ರಯಾನ-3 ಮಿಷನ್‌ ರೂಪುಗೊಳ್ಳಲು ಕಾರಣವಾಗಿದೆ.


ಕಲ್ಪನಾ ಕೆ.

ಬೆಂಗಳೂರಿನ ಯು.ಆರ್‌.ರಾವ್‌ ಉಪಗ್ರಹ ಕೇಂದ್ರದ ಚಂದ್ರಯಾನ-3 ಉಪ ಯೋಜನಾ ನಿರ್ದೇಶಕಿ, ವಿಜ್ಞಾನಿ ಕೆ. ಕಲ್ಪನಾ ( Kalpana K.)ಅವರು ಕೋವಿಡ್‌ ಸಾಂಕ್ರಾಮಿಕದ ಕಷ್ಟಗಳ ನಡುವೆಯೂ ಚಂದ್ರಯಾನ-3 ತಂಡವನ್ನು ಕೆಲಸ ಮಾಡುತ್ತಿದ್ದರು. ಭಾರತದ ಉಪಗ್ರಹಗಳನ್ನು ತಯಾರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಎಂಜಿನಿಯರ್‌ ಕಲ್ಪನಾ ಅವರು ಚಂದ್ರಯಾನ-2 ಮತ್ತು ಮಂಗಳಯಾನ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದರು.

ಎಂ. ವನಿತಾ 

ಬೆಂಗಳೂರಿನ ಯು.ಆರ್‌. ರಾವ್‌ ಉಪಗ್ರಹ ಕೇಂದ್ರದ ಉಪ ನಿರ್ದೇಶಕಿ ಎಂ. ವನಿತಾ (  M. Vanitha)ಅವರು ಚಂದ್ರಯಾನ-2 ಮಿಷನ್‌ಗೆ ಯೋಜನಾ ನಿರ್ದೇಶಕರಾಗಿದ್ದರು. ಎಲೆಕ್ಟ್ರಾನಿಕ್ಸ್‌ ಸಿಸ್ಟಮ್ಸ್ ಇಂಜಿನಿಯರ್‌ ಆಗಿರುವ ಅವರು ಚಂದ್ರನ ಕಾರ್ಯಾಚರಣೆಯನ್ನು ಮುನ್ನಡೆಸಿದ ಭಾರತದ ಮೊದಲ ಮಹಿಳೆಯಾಗಿದ್ದಾರೆ. ಚಂದ್ರಯಾನ-2 ಕುರಿತ ಆವರ ಜ್ಞಾನವನ್ನು ಚಂದ್ರಯಾನ-3 ರೂಪಿಸಿದ ತಂಡ ಸಮರ್ಥವಾಗಿ ಬಳಸಿಕೊಂಡಿದೆ. ವನಿತಾ ಅವರಿಗೆ ತೋಟಗಾರಿಕೆ ಎಂದರೆ ಬಲು ಇಷ್ಟ.

ಎಂ. ಶಂಕರನ್‌ 

ಬೆಂಗಳೂರಿನ ಯು.ಆರ್‌. ರಾವ್‌ ಉಪಗ್ರಹ ಕೇಂದ್ರದ ನಿರ್ದೇಶಕ ಎಂ. ಶಂಕರನ್‌ ( M. Sankaran) ಅವರನ್ನು ಇಸ್ರೋದ ಶಕ್ತಿಕೇಂದ್ರ ಎಂದು ಪರಿಗಣಿಸಲಾಗಿದೆ. ಏಕೆಂದರೆ ಅವರು ಉಪಗ್ರಹಗಳಿಗೆ ವಿದ್ಯುತ್‌ ಒದಗಿಸುವ ನವೀನ ವಿದ್ಯುತ್‌ ವ್ಯವಸ್ಥೆಗಳು ಮತ್ತು ಸೌರ ಸರಣಿಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉಪಗ್ರಹಗಳನ್ನು ತಯಾರಿಸುವಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಅವರ ಸಹಿ ಚಂದ್ರಯಾನ-1, ಮಂಗಳಯಾನ ಮತ್ತು ಚಂದ್ರಯಾನ-2 ಉಪಗ್ರಹಗಳ ಮೇಲೆ ಇತ್ತು. ಚಂದ್ರಯಾನ-3 ಉಪಗ್ರಹವು ಸಾಕಷ್ಟುಬಿಸಿ ಮತ್ತು ಶೀತ-ಪರೀಕ್ಷೆಗೆ ಒಳಗಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅವರ ಕೆಲಸವಾಗಿತ್ತು ಮತ್ತು ಲ್ಯಾಂಡರ್‌ನ ಶಕ್ತಿಯನ್ನು ಪರೀಕ್ಷಿಸಲು ಚಂದ್ರನ ಮೇಲ್ಮೈ ಪ್ರತಿಕೃತಿಯನ್ನು ರಚಿಸಲು ಅವರು ಸಹಾಯ ಮಾಡಿದರು. ಅವರು ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ವಿ. ನಾರಾಯಣನ್‌

ತಿರುವನಂತಪುರದ ಲಿಕ್ವಿಡ್‌ ಪ್ರೊಪಲ್ಷನ್‌ ಸಿಸ್ಟಮ್ಸ್‌ ಸೆಂಟರ್‌ ನಿರ್ದೇಶಕ ವಿ. ನಾರಾಯಣನ್‌ (V. Narayanan)ಅವರು ಲಿಕ್ವಿಡ್‌ ಪೊ›ಪಲ್ಷನ್‌ ಎಂಜಿನ್‌ಗಳಲ್ಲಿ ಪರಿಣಿತರಾಗಿರುವ ಅವರು ವಿಕ್ರಂ ಲ್ಯಾಂಡರ್‌ ಕಕ್ಷೆ ತಗ್ಗಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಉಪಕರಣಗಳ ಸೃಷ್ಟಿಕರ್ತರು. ಖರಗ್‌ಪುರ ಐಐಟಿಯ ಹಳೆಯ ವಿದ್ಯಾರ್ಥಿ ಆಗಿರುವ ಅವರು ಮತ್ತು ಕ್ರಯೋಜೆನಿಕ್‌ ಎಂಜಿನ್‌ಗಳಲ್ಲಿ ಪರಿಣಿತರಾಗಿದ್ದಾರೆ. ಚಂದ್ರಯಾನ-3 ಅನ್ನು ಉಡಾವಣೆ ಮಾಡಿದ ಲಾಂಚ್‌ ವೆಹಿಕಲ… ಮಾರ್ಕ್-3 ಸೇರಿದಂತೆ ಇಸ್ರೋ ತಯಾರಿಸಿದ ಹೆಚ್ಚಿನ ರಾಕೆಟ್‌ಗಳಲ್ಲಿ ಅವರ ವೈಯಕ್ತಿಕ ಕೊಡುಗೆ ಇದೆ.

ಬಿ.ಎಂ. ರಾಮಕೃಷ್ಣ,

ಇಸ್ರೋ ಟೆಲಿಮೆಟ್ರಿ ಟ್ರಾಕಿಂಗ್‌ ಮತ್ತು ಕಮಾಂಡ್‌ ನೆಟ್‌ವರ್ಕ್ (ಇಸ್ಟ್ರಾಕ್‌) ನಿರ್ದೇಶಕರಾದ ಬಿ.ಎಂ. ರಾಮಕೃಷ್ಣ (B.M. Ramakrishna) ಅವರು ಚಂದ್ರಯಾನ ಉಪಗ್ರಹಕ್ಕೆ ಕಮಾಂಡ್‌ಗಳನ್ನು ಕಳಿಸುವ ಹಿಂದಿನ ಪ್ರಮುಖ ರೂವಾರಿ. ಬೆಂಗಳೂರಿನಲ್ಲಿ ಸ್ಥಾಪಿತವಾದ ಭಾರತದ ಅತಿದೊಡ್ಡ ಡಿಶ್‌ ಅ್ಯಂಟೆನಾ ಮೂಲಕ ಚಂದ್ರಯಾನ ಉಪಗ್ರಹಕ್ಕೆ ಕಮಾಂಡ್‌ ಕಳಿಸಲಾಗುತ್ತದೆ ಹಾಗೂ ಅದರಂತೆ ಉಪಗ್ರಹ ಹಾಗೂ ವಿಕ್ರಂ ಲ್ಯಾಂಡರ್‌ ಕೆಲಸ ಮಾಡುತ್ತದೆ. ಬೆಂಗಳೂರಿನ ಇಸ್ಟ್ರಾಕ್‌ ಕೇಂದ್ರದಿಂದಲೇ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್‌ ಚಂದ್ರಸ್ಪರ್ಶ ಮಾಡುವುದನ್ನು ವಿಜ್ಞಾನಿಗಳು ನೇರಪ್ರಸಾರದಲ್ಲಿ ವೀಕ್ಷಿಸಿದರು.

ISRO chief somnath to Ramkrishna 6 Key persons to Chandrayaan3 Success akb

Follow Us:
Download App:
  • android
  • ios