ರೈಲ್ವೇ ಪ್ರಯಾಣಿಕರಿಗೆ ಟಿಕೆಟ್ ಶಾಕ್ , IRCTC ಬುಕಿಂಗ್ ತಾತ್ಕಾಲಿಕ ಸ್ಥಗಿತ!

ರೈಲ್ವೈ ಪ್ರಯಾಣಿಕರು ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಾಗದೆ ಪರದಾಡಿದ್ದಾರೆ.  IRCTC ವೆಬ್‌ಸೈಟ್ ಹಾಗೂ ಆ್ಯಪ್ ಡೌನ್ ಆಗಿದೆ. ಇದರ ಪರಿಣಾಮ ಟಿಕೆಟ್ ಬುಕಿಂಗ್ ಸ್ಥಗಿತಗೊಂಡಿದೆ. 

Irctc server down tatkal ticket booking temporarily face outage ckm

ನವದೆಹಲಿ(ಡಿ.26) ಕ್ರಿಸ್ಮಸ್ ಹಬ್ಬ ಮುಗಿಸಿ ಇದೀಗ ಹೊಸ ವರ್ಷಾಚರಣೆಗೆ ಸಜ್ಜಾಗುತ್ತಿರು ರೈಲ್ವೇ ಪ್ರಯಾಣಿಕರಿಗೆ ಶಾಕ್ ಎದುರಾಗಿದೆ. ಭಾರತೀಯ ರೈಲ್ವೇಯ ತತ್ಕಾಲ್ ಟಿಕೆಟ್ ಬುಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ದೇಶಾದ್ಯಂದ IRCTC ಸರ್ವರ್ ಡೌನ್ ಆಗಿರುವ ಕಾರಣ ಪ್ರಯಾಣಿಕರು ತ್ವರಿತ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯವಾಗದೇ ಪರದಾಡಿದ್ದಾರೆ. ಮುಂದಿನ 1 ಗಂಟೆಗಳ ಕಾಲ ಯಾವುದೇ ಟಿಕೆಟ್ ಬುಕಿಂಗ್ ವ್ಯವಸ್ಥೆ ಇರುವುದಿಲ್ಲ ಎಂದು ಭಾರತೀಯ ರೈಲ್ವೇ ಸ್ಪಷ್ಟಪಡಿಸಿದೆ.

ದೇಶಾದ್ಯಂತ ಭಾರತೀಯ ರೈಲ್ವೇ ಇಲಾಖೆಯ IRCTC ಸರ್ವರ್ ಡೌನ್ ಆಗಿದೆ. ಪ್ರಯಾಣಿಕರು ಇಂದು ಬೆಳಗ್ಗೆಯಿಂದ ದೂರು ನೀಡುತ್ತಿದ್ದಾರೆ. ಟಿಕೆಟ್ ಬುಕಿಂಗ್ ಸಾಧ್ಯವಾಗುತ್ತಿಲ್ಲ. ರಜೆ ಮುಗಿಸಿ ಮತ್ತೆ ಕಚೇರಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಹಲವು ಪ್ರಯಾಣಿಕರು ಸೋಶಿಯಲ್ ಮೀಡಿಯಾ ಮೂಲಕ ರೈಲ್ವೇ ಇಲಾಖೆ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಪ್ರಯಾಣಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ರೈಲ್ವೇ ಇಲಾಖೆ ಸ್ಪಷ್ಟನೆ ನೀಡಿದೆ. IRCTC ವೆಬ್‌ಸೈಟ್ ಬ್ಯಾಕೆಂಡ್ ನಿರ್ವಹಣಾ ಕಾರ್ಯಗಳು ನಡೆಯುತ್ತಿದೆ. ಹೀಗಾಗಿ  ಕನಿಷ್ಠ ಮುಂದಿನ 1 ಗಂಟೆ ರೈಲ್ವೇ ಟಿಕೆಟ್ ಬುಕಿಂಗ್ ವ್ಯವಸ್ಥೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತೀಯ ರೈಲ್ವೇಯ 1036 ಹುದ್ದೆಗೆ ನೇಮಕಾತಿ ಆರಂಭ, ಅರ್ಜಿ ಸಲ್ಲಿಕೆ ಹೇಗೆ?

ರೈಲ್ವೇ ಗ್ರಾಹಕರ ವೇದಿಕೆ: 14646, 08044647999, 08035734999

ರೈಲ್ವೇ ಇಮೇಲ್ ವಿಳಾಸ: etickets@irctc.co.in

ನಿರ್ವಹಣಾ ಕಾರ್ಯಗಳು ಚಾಲ್ತಿಯಲ್ಲಿದೆ. ಇದರಿಂದ ಪ್ರಯಾಣಿಕರು ಟಿಕೆಟ್ ಬುಕಿಂಗ್ ಕೆಲ ಕಾಲದ ಬಳಿಕ ಪ್ರಯತ್ನಿಸಿ ಎಂದು ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ. ಇತ್ತೀಚೆಗಷ್ಟೇ ಇದೇ ರೀತಿ ನಿರ್ವಹಣೆಯಿಂದ ಟಿಕೆಟ್ ಬುಕಿಂಗ್ ಮೇಲೆ ಪರಿಣಾಮ ಬೀರಿತ್ತು. ಡಿಸೆಂಬರ್ ತಿಂಗಲ್ಲಿ ಇದೀಗ ಎರಡನೇ ಬಾರಿಗೆ ಈ ರೀತಿ ಸಮಸ್ಯೆಯಾಗುತ್ತಿದೆ. ಡಿಸೆಂಬರ್ ತಿಂಗಳ ಆರಂಭದಲ್ಲೂ ಸರ್ವರ್ ಡೌನ್ ಹಾಗೂ ನಿರ್ವಹಣಾ ವ್ಯವಸ್ಥೆಯಿಂದ ಟಿಕೆಟ್ ಬುಕಿಂಗ್ ಕೆಲ ಕಾಲ ಸ್ಥಗಿತಗೊಂಡಿತ್ತು. ಆದರೆ ಕೆಲ ಗಂಟೆಗಳ ಬಳಿ ಎಲ್ಲವೂ ಸರಿಯಾಗಿತ್ತು. ಇದೀಗ ಮತ್ತೆ ನಿರ್ವಹಣಾ ಸಮಸ್ಯೆಯಿಂದ ಪ್ರಯಾಣಿಕರು ಪರದಾಡುವಂತಾಗಿದ್ದಾರೆ. ಈ ರೀತಿಯ ನಿರ್ವಹಣೆ ಪೂರ್ವನಿಯೋಜಿತವಾಗಿದ್ದರೂ ಪ್ರಯಾಣಕರಿಗೆ ರೈಲ್ವೇ ಇಲಾಖೆ ಯಾವುದೇ ಸೂಚನೆ ನೀಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

ಭಾರತೀಯ ರೈಲ್ವೇ ವೆಬ್ ಸೈಟ್ ಹಾಗೂ ಆ್ಯಪ್ ಡೌನ್ ಆಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲೂ ಪರಿಣಾಮ ಬೀರಿದೆ. ತತ್ಕಾಲ್ ಟಿಕೆಟ್ ಸ್ಥಗಿತದಿಂದ ಭಾರತೀಯ ರೈಲ್ವೇ ಷೇರುಗಳು ಶೇಕಡಾ 1ರಷ್ಟು ಕುಸಿತ ಕಂಡಿದೆ. ಇತ್ತ ಕಳೆದ ಒಂದು ವಾರದಲ್ಲಿ ರೈಲ್ವೇ ಇಲಾಖೆ ಷೇರುಗಳು ಶೇಕಡಾ 4 ರಷ್ಟು ಕುಸಿತ ಕಂಡಿದೆ. 

ಈ ರೈಲು ನಿಲ್ದಾಣದಿಂದ ದೇಶದ ಎಲ್ಲಾ ಭಾಗಕ್ಕೂ ಇದೆ ಟ್ರೈನ್, ದಿನದ 24 ಗಂಟೆಯೂ ಸೇವೆ ಲಭ್ಯ!

ಹಲವು ಪ್ರಯಾಣಿಕರು ಭಾರತೀಯ ರೈಲ್ವೇ ಇಲಾಖೆ ವೆಬ್‌ಸೈಟ್ ಪ್ರತಿ ಬಾರಿ ಈ ಸಮಸ್ಯೆಗೆ ತುತ್ತಾಗುತ್ತಿದೆ ಎಂದಿದ್ದಾರೆ. ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ರೈಲ್ವೇ ಇಲಾಖೆಯ IRCTC ವೆಬ್‌ಸೈಟ್ ಸರ್ವರ್ ಡೌನ್ ಆಗುತ್ತಿದೆ. ಹಲವು ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬೇಕು. ಈ ರೀತಿ ಪ್ರಯಾಣಿಕರಿಗೆ ಯಾವುದೇ ಸೂಚನೆ ನೀಡಿದೆ ಮತ್ತಷ್ಟು ಸಮಸ್ಯೆಗೆ ತಳ್ಳಬೇಡಿ ಎಂದು ಪ್ರಯಾಣಿಕರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಕಳೆದ 1 ಗಂಟೆಯಿಂದ IRCTC ವೆಬ್‌ಸೈಟ್, ಆ್ಯಪ್ ಒಪನ್ ಆಗುತ್ತಿಲ್ಲ. ಸಮಸ್ಯೆ ಕುರಿತು ದೂರು ನೀಡಿದರೆ ಉತ್ತರವೂ ಇಲ್ಲ. ಇದು ಯಾವ ರೀತಿಯ ಸೇವೆ ಎಂದು ಹಲವರು ಪ್ರಶ್ನಿಸಿದ್ದಾರೆ. ಮತ್ತಷ್ಟು ಮಂದಿ ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ.ಆದರೆ ಭಾರತೀಯ ರೈಲ್ವೇ ಇಲಾಖೆಗೆ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಕ್ರಾಶ್ ಮಾಡದೆ,ಸರ್ವರ್ ಡೌನ್ ಮಾಡಂತೆ ಇಡಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
 

Latest Videos
Follow Us:
Download App:
  • android
  • ios