ಹೆಚ್ಚಿದ ಯುದ್ಧ ಭೀತಿ: ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಎಚ್ಚರದಿಂದಿರಲೂ ಸೂಚನೆ
ಇರಾನ್ ಮತ್ತು ಹಮಾಸ್ ಉಗ್ರರಿಂದ ದಾಳಿಯ ಸಾಧ್ಯತೆ ಇರುವ ಕಾರಣ ಮಿತ್ರ ರಾಷ್ಟ್ರ ಇಸ್ರೇಲ್‌ಗೆ ನೆರವು ನೀಡಲು ಮಧ್ಯಪ್ರಾಚ್ಯಕ್ಕೆ ತನ್ನ ಮತ್ತಷ್ಟು ಯುದ್ಧನೌಕೆ, ಕ್ಷಿಪಣಿ ತಡೆ ವ್ಯವಸ್ಥೆ ಸೇರಿದಂತೆ ರಕ್ಷಣಾ ತಂಡವನ್ನು ರವಾನಿಸಲು ಅಮೆರಿಕ ನಿರ್ಧರಿಸಿದೆ.
ಟೆಲ್‌ಅವೀವ್: ಇರಾನ್ ಮತ್ತು ಹಮಾಸ್ ಉಗ್ರರಿಂದ ದಾಳಿಯ ಸಾಧ್ಯತೆ ಇರುವ ಕಾರಣ ಮಿತ್ರ ರಾಷ್ಟ್ರ ಇಸ್ರೇಲ್‌ಗೆ ನೆರವು ನೀಡಲು ಮಧ್ಯಪ್ರಾಚ್ಯಕ್ಕೆ ತನ್ನ ಮತ್ತಷ್ಟು ಯುದ್ಧನೌಕೆ, ಕ್ಷಿಪಣಿ ತಡೆ ವ್ಯವಸ್ಥೆ ಸೇರಿದಂತೆ ರಕ್ಷಣಾ ತಂಡವನ್ನು ರವಾನಿಸಲು ಅಮೆರಿಕ ನಿರ್ಧರಿಸಿದೆ.
ಹಮಾಸ್ ನಾಯಕ ಇಸ್ಮಾಯಿಲ್ ಹನಿಯನನ್ನು ಇಸ್ರೇಲ್, ಇರಾನ್‌ನಲ್ಲಿ ಹತ್ಯೆಗೈದ ಬಳಿಕ ಎರಡೂ ದೇಶಗಳು ಇಸ್ರೇಲ್ ಮೇಲೆ ಪ್ರತೀಕಾರದ ಕ್ರಮ ಘೋಷಣೆ ಮಾಡಿವೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯಕ್ಕೆ ಹೆಚ್ಚುವರಿ ಯುದ್ಧನೌಕೆ, ಖಂಡಾಂತರ ಕ್ಷಿಪಣಿ ತಡೆ ವ್ಯವಸ್ಥೆ ಹೊಂದಿರುವ ನೌಕೆ, ಡ್ರೋನ್, ಡಿಸ್ಟ್ರಾಯರ್‌ಗಳನ್ನು ರವಾನಿಸುವ ಘೋಷಣೆ ಮಾಡಿದೆ.
ಗುರುವಾರಇಸ್ರೇಲ್ ಪ್ರಧಾನಿಬೆಂಜಮಿನ್ ನೆತನ್ಯಾಹು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆ ಮಾತನಾಡಿದ ಬೆನ್ನಲ್ಲೇ ಅಮೆರಿಕ ಹೆಚ್ಚುವರಿ ಸೇನೆ ನಿಯೋಜನೆ ಘೋಷಿಸಿದೆ.
ಇರಾನ್ ರಾಜಧಾನಿ ತೆಹರಾನ್‌ನಲ್ಲಿ 2 ತಿಂಗಳ ಮೊದಲೇ ಇರಿಸಿದ್ದ ಬಾಂಬ್‌ನಿಂದ ಹಮಾಸ್ ಚೀಫ್ ಹತ್ಯೆ!
ಮಿನಿ ಕ್ಷಿಪಣಿ ಸಿಡಿಸಿ ಹನಿಯೆ ಹತ್ಯೆ: ಇರಾನ್
ಜೆರುಸಲೆಂ: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆನನ್ನು 7 ಕೆಜಿ ಸಿಡಿತಲೆ ಹೊಂದಿದ್ದ ಚಿಕ್ಕ ಕ್ಷಿಪಣಿ ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಇರಾನ್ ಸೇನೆ ಶನಿವಾರ ಹೇಳಿದೆ. ಮೊನ್ನೆ ಹನಿಯನನ್ನು ತೆಹ್ರಾನ್‌ನಲ್ಲಿ ಆತ ತಂಗಿದ್ದ ಅತಿಥಿ ಗೃಹದಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕ ಸಿಡಿಸಿ ಹತ್ಯೆ ಮಾಡಲಾಗಿತ್ತು ಎಂದು ವರದಿಯಾಗಿತ್ತು. ಆದರೆ ಇದನ್ನು ತಳ್ಳಿಹಾಕಿದ ಇರಾನ್, 'ಕ್ರಿಮಿನಲ್' ಅಮೆರಿಕ ಸರ್ಕಾರದ ಬೆಂಬಲದೊಂದಿಗೆ ಇಸ್ರೇಲ್ ದಾಳಿ ನಡೆಸಿದೆ. ಇದಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ ಎಂದಿದೆ.
ಎಚ್ಚರದಿಂದ ಇರಿ: ಭಾರತೀಯರಿಗೆ ಸೂಚನೆ
ನವದೆಹಲಿ: ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರು ಎಚ್ಚರಿಕೆಯಿಂದ ಇರಬೇಕು. ಭದ್ರತಾ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದು ಭಾರತ ಸರ್ಕಾರ ಸಲಹೆ ನೀಡಿದೆ. ಬೈರೂತ್‌ನಲ್ಲಿರುವ ಭಾರತೀಯ ಕಚೇರಿ, ಮುಂದಿನ ಆದೇಶದವರೆಗೂ ಲೆಬನಾನ್‌ಗೆ ಪ್ರಯಾಣ ಕೈಗೊಳ್ಳದಂತೆ ಸೂಚಿಸಿದ ಬೆನ್ನಲ್ಲೇ ಈ ಸಲಹೆ ಹೊರಬಿದ್ದಿದೆ. ಈಗಾಗಲೇ ಏರಿಂಡಿಯಾ ಕೂಡಾ ಆ.8ರವರೆಗೆ ಟೆಲ್ ಅವಿವ್‌ಗೆ ಯಾವುದೇ ವಿಮಾನ ಸಂಚಾರ ಇರುವುದಿಲ್ಲ ಎಂದು ಪ್ರಕಟಣೆ ನೀಡಿದೆ.
Israel–Hamas war: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಇರಾನ್‌ನಲ್ಲಿ ಹತ್ಯೆ