ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಕೊಠಡಿಗೆ ಹೊಸ ಹೆಸರು ಐಪಿಎಸ್‌ ಅಧಿಕಾರಿ ಕರ್ನಾಟಕ ಮೂಲದ ದಿ. ಡಾ. ಕೆ.ಮಧುಕರ್‌ ಶೆಟ್ಟಿಅವರ ಹೆಸರು ಇಡುವಂತೆ ಸೂಚನೆ ಗೃಹ ಸಚಿವಾಲಯ ಸುತ್ತೋಲೆಯಲ್ಲಿ ಆದೇಶ

ನವದೆಹಲಿ (ಮೇ.13):  ಹೈದ್ರಾಬಾದ್‌ನಲ್ಲಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಕೊಠಡಿಯೊಂದಕ್ಕೆ ಐಪಿಎಸ್‌ ಅಧಿಕಾರಿ ಕರ್ನಾಟಕ ಮೂಲದ ದಿ. ಡಾ. ಕೆ.ಮಧುಕರ್‌ ಶೆಟ್ಟಿಅವರ ಹೆಸರು ಇಡುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.

ಕಟ್ಟಡದಲ್ಲಿ ಮುಖ್ಯ ಬೋಧನಾ ಕೊಠಡಿಗೆ ಹೆಸರಿಡುವಂತೆ ಗೃಹ ಸಚಿವಾಲಯ ಸುತ್ತೋಲೆಯಲ್ಲಿ ಸೂಚಿಸಿದೆ. ಐಪಿಎಸ್‌ ತರಬೇತಿ ನಿರತರಿಗೆ ಮಧುಕರ್‌ ಶೆಟ್ಟಿರೋಲ್‌ ಮಾಡೆಲ್‌ ಆಗಿದ್ದವರು. ಜೊತೆಗೆ ವೃತ್ತಿಗೆ ಅವರು ತೋರುತ್ತಿದ್ದ ಬದ್ಧತೆ ಮತ್ತು ನಿಷ್ಠೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಪ್ರಾಮಾಣಿಕ ಅಧಿಕಾರಿಯ ಹೆಮ್ಮೆಯ ಸತ್ಯಗಳು: ಇದು ಸಿಂಹದ ಹೆಜ್ಜೆ...! .

ಕರ್ತವ್ಯದ ಅವಧಿಯಲ್ಲೇ ಮಧುಕರ್‌ ಶೆಟ್ಟಿಅವರು ಹೈದ್ರಾಬಾದ್‌ನ ಆಸ್ಪತ್ರೆಯೊಂದಲ್ಲಿ 2018ರ ಡಿ.28ರಂದು ಎಚ್‌1ಎನ್‌1 ಸೋಂಕಿಗೆ ಬಲಿಯಾಗಿದ್ದರು.