ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಸಂಸದ

* ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಇತರೆ ನಾಯಕರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ?

ಮೋದಿ ಅವರ ಅತ್ಯುತ್ತಮ ಗುಣ ಎಂದರೆ ಅವರ ಉದ್ದೇಶ ಶುದ್ಧಿಯಾಗಿರುವುದು. ಅದು ಅವರ ಪ್ರತಿ ಹೆಜ್ಜೆಯಲ್ಲಿ, ಪ್ರತಿ ಮಾತಿನಲ್ಲಿ, ಪ್ರತಿ ಕೃತಿಯಲ್ಲಿ ಕಾಣುತ್ತದೆ. ನಮ್ಮ ಸಂಸ್ಕೃತದಲ್ಲಿ ಮಹಾತ್ಮ ಎಂದರೆ ಮನಸ್ಸು, ಮಾತು ಮತ್ತು ಕೃತಿ ಒಂದೇ ಇರುವವನು ಎಂದಿದೆ. ಯಾರಲ್ಲಿ ಮೂರು ಒಂದೇ ಇರುತ್ತದೆಯೋ ಅವರು ಮಹಾತ್ಮ. ಮೋದಿ ಅವರಲ್ಲಿ ಕಾಣುವುದು ಈ ಉದ್ದೇಶ ಶುದ್ದಿ. ಮೋದಿ ಅವರು ಏನು ಚಿಂತನೆ ಮಾಡುತ್ತಾರೋ, ಅದನ್ನು ಮಾತನಾಡುತ್ತಾರೆ. ಮಾತನಾಡುವುದನ್ನು ಅವರು ಕಾರ್ಯ ರೂಪಕ್ಕೆ ತರುತ್ತಾರೆ. ಫಾಲೋ ವಾಟ್‌ ಐ ಪ್ರೀಚ್‌ ಹಾಗೂ ಡೋಂಟ್‌ ಫಾಲೋ ವಾಟ್‌ ಐ ಪ್ರಾಕ್ಟೀಸ್‌ ಎಂಬ ಎರಡು ರೀತಿಯ ನಾಯಕರಿರುತ್ತಾರೆ. ಬಿಗ್‌ ಥಿಂಕಿಂಗ್‌ ಮತ್ತು ಆಟೆನ್ಷನ್‌ ಟು ಡಿಟೆಲ್ಸ್‌. ಮೋದಿ ಅವರು ಈ ಎರಡನ್ನು ಗಮನಿಸುವ ವಿಶೇಷ ನಾಯಕ. ಈ ರೀತಿ ಎರಡು ಗುಣ ಒಬ್ಬರಲ್ಲಿ ಇರುವುದು ತುಂಬಾ ಅಪರೂಪ. ಯಾವುದೇ ಒಬ್ಬ ಸಂಘಟಕ, ಸಿಇಓ, ವ್ಯವಸ್ಥಾಪಕರನ್ನು ಗಮನಿಸಿದರೆ ದೊಡ್ಡ ವಿಷನ್‌ (ದೃಷ್ಟಿಕೋನ) ನೀಡುತ್ತಾರೆ. ಅದು ಅವರ ತಾಕತ್ತು. ಆದರೆ ಅನುಷ್ಠಾನ ವಿಚಾರಕ್ಕೆ ಬಂದಾಗ ಅಟೆನ್ಷನ್‌ ಟು ಡಿಟೆಲ್ಸ್‌ ತೆಗೆದುಕೊಳ್ಳಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅವರೆಡನ್ನು ತೆಗೆದುಕೊಳ್ಳುತ್ತಾರೆ.\\

ಬಾಂಗ್ಲಾ ವಲಸಿಗರನ್ನು ಗುರುತಿಸಲು ರಾಜ್ಯಕ್ಕೂ NRC ವಿಸ್ತರಿಸಿ: ತೇಜಸ್ವಿ!

* ಸಂಸದರ ಸಭೆಯನ್ನು ಪ್ರಧಾನಿ ಮೋದಿ ಅವರು ಸ್ಕೂಲ್‌ ಹೆಡ್‌ ಮಾಸ್ಟರ್‌ ತೆಗೆದುಕೊಳ್ಳುತ್ತಾರೆ ಎಂಬ ಮಾತಿದೆ?

ಪ್ರಧಾನಿ ನರೇಂದ್ರ ಮೋದಿಗೂ ಬೇರೆ ಪಕ್ಷಕ್ಕೂ ಸಾಕಾಷ್ಟುವ್ಯತ್ಯಾಸ ಇದೆ ಎನ್ನುವುದಕ್ಕೆ ಸಂಸದರ ಸಭೆ ಒಂದು ಉದಾಹರಣೆ. ಅಧಿವೇಶನದ ವೇಳೆ ಪ್ರತಿ ಮಂಗಳವಾರ ಬಿಜೆಪಿ ಸಂಸದರ ಸಭೆ ನಡೆಸಲಾಗುತ್ತದೆ. ಬೆಳಗ್ಗೆ 9.30ರಿಂದ 10.30ರವರೆಗೆ ಒಂದು ತಾಸುಗಳ ಕಾಲ ಸಭೆ ನಡೆಸುತ್ತಾರೆ. ಸಭೆ ಬೆಳಗ್ಗೆ 9.30ಕ್ಕೆ ನಿಗದಿಯಾದರೆ, 9.25ಕ್ಕೆ ಸಭೆಗೆ ಹಾಜರಾಗಿರುತ್ತಾರೆ. ಹೆಡ್‌ ಮಾಸ್ಟರ್‌ ರೀತಿಯಲ್ಲಿ ಸಭೆ ತೆಗೆದುಕೊಳ್ಳುತ್ತಾರೆ ಎಂಬ ವ್ಯಾಖ್ಯಾನ ತಪ್ಪು. ಅದು ಸರಿಯಲ್ಲ. ಜವಾಬ್ದಾರಿಯುತ ತಂದೆ ಕುಟುಂಬದ ಸದಸ್ಯರನ್ನು ಸೇರಿಸಿ ಮನೆ ಸಭೆಯಂತೆ ನಡೆಸುತ್ತಾರೆ ಎಂಬುದು ಸರಿಯಾದ ವ್ಯಾಖ್ಯಾನ. ಸಭೆಯಲ್ಲಿ ಸಂಸದರಿಗೆ ಆರೋಗ್ಯ, ಕುಟುಂಬಕ್ಕೆ ಸಮಯ ನೀಡುವುದು, ಮಕ್ಕಳ ಕಡೆ ಗಮನ ಕೊಡುವುದು, ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವ ಕುರಿತು ಸಲಹೆ ನೀಡುತ್ತಾರೆ. ಅಲ್ಲಿ ಸಂವೇದನೆ ಶೀಲತೆ ಇರುತ್ತದೆ. ಸಾಮಾಜಿಕ ಸೇವಾ ಮನೋಭಾವದ ರಾಜಕೀಯ ಎಷ್ಟುಮುಖ್ಯ ಎಂಬುದನ್ನು ಜ್ಞಾಪಿಸುತ್ತಾರೆ. ವಿಷನ್‌ ಜತೆಗೆ ಲಾಸ್ಟ್‌ ಅಟೆನ್ಷನ್‌ ಟು ಡಿಟೈಲ್ಸ್‌ ಅನ್ನು ಸಭೆಯಲ್ಲಿ ತೆಗೆದುಕೊಳ್ಳುತ್ತಾರೆ. ಸಂಸದರು ಸಭೆಯಲ್ಲಿದ್ದಾಗ ಎಷ್ಟೋ ಸಲ ಕಾರ್ಯಕರ್ತರು ಜೀವನ ಪರ್ಯಂತ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದಾಗ ಕುಟುಂಬದ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಮಗಳು, ಮಗ ಯಾವ ತರಗತಿಯನ್ನು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಆಸೆ-ಆಕಾಂಕ್ಷೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಾರೆ. ಅದು ಸಣ್ಣ ಅಟೆನ್ಷನ್‌ ಟು ಡಿಟೈಲ್ಸ್‌. ಯಾವುದೇ ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೆ ಸಣ್ಣ ಸಣ್ಣ ವಿವರಣೆಗೂ ಹೋಗುತ್ತಾರೆ. ತಾಮ್ರವನ್ನು ಆಗಾಗ ತೊಳೆದರೆ ಮಾತ್ರ ಹೊಳಪಿನಿಂದ ಇರುತ್ತದೆ. ಮೋದಿ ಅದನ್ನು ಮಾಡುತ್ತಾರೆ.

* ಮೋದಿ ಅವರು ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರಲ್ಲ?

ಹೌದು. ಆಯುಷ್‌ಮ್ಯಾನ್‌ ಭಾರತ್‌ ಸೇರಿ ಇತರೆ ತೆಗೆದುಕೊಂಡಿರುವ ಯಾವುದೇ ಯೋಜನೆಗಳು ಗಜಗಾತ್ರ ಯೋಜನೆಗಳಾಗಿವೆ. ವಿಷನ್‌ ಇರುವ ಯೋಜನೆಗಳು ಆತ್ಮನಿರ್ಭರ್‌ ಭಾರತ್‌, 20 ಲಕ್ಷ ಕೋಟಿ ರು. ಪ್ಯಾಕೇಜ್‌ ಘೋಷಣೆ ಹೀಗೆ ದೊಡ್ಡ ವಿಷನ್‌ಗಳನ್ನು ಹೊಂದಿರುತ್ತಾರೆ. ಸಣ್ಣ ಕನಸಿನ ಸಣ್ಣ ಯೋಜನೆಯ ವ್ಯಕ್ತಿಯಲ್ಲ. ದೊಡ್ಡಕನಸಿನ ಮತ್ತು ದೊಡ್ಡ ಆಲೋಚನೆಗಳ, ದೊಡ್ಡ ಯೋಜನೆಗಳ ಚಿಂತಕ. ಮೋದಿ ಅವರು ಮೂರು ‘ಎಸ್‌’ ಪರಿಕ್ಪಲನೆಯಡಿ ಕೆಲಸ ಮಾಡುತ್ತಿದ್ದಾರೆ. ಅವು ಸ್ಪೀಡ್‌, ಸ್ಕೇಲ್‌ ಮತ್ತು ಸ್ಕಿಲ್‌.

ತೇಜಸ್ವಿ ಸೂರ್ಯ ಬಗ್ಗೆ ತಮಿಳು ಖ್ಯಾತ ನಟ ಮೆಚ್ಚುಗೆ

* ಭಾರತವಷ್ಟೇ ಅಲ್ಲದೆ, ಜಗತ್ತಿನ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವ ಮೋದಿ ಅವರ ಯಶಸ್ಸಿನ ಗುಟ್ಟೇನು?

ಬಿಗ್‌ ಪಿಕ್ಚರ್‌ ವಿಷನ್‌, ಮೈಕ್ರೋ ಅಟೆನ್ಷನ್‌ ಪ್ಲಾನಿಂಗ್‌ ಆ್ಯಂಡ್‌ ಎಕ್ಸಿಕ್ಯೂಷನ್‌. ಈ ಎರಡು ಮೋದಿಯ ಅತ್ಯುತ್ತಮ ಗುಣ. ಮೂರನೇಯದು ಮಾನವೀಯ ಸಂವೇದನೆ. ಪ್ರಸಕ್ತ ಕೋವಿಡ್‌ ಸಂಕಷ್ಟದ ವೇಳೆ ಬಿಜೆಪಿ, ಸಂಘ ಪರಿವಾರದ 80 ವರ್ಷ ಹಿರಿಯ ಕಾರ್ಯಕರ್ತರಿಗೆ ಕರೆ ಮಾಡಿ ಹೇಗಿದ್ದೀರಿ ಎಂದು ಮಾತನಾಡಿದರು. ಅಲ್ಲದೇ, ದೇಶದಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿಗಳು, ಸಂಸದರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಮಂಗಳವಾರ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಆರೋಗ್ಯದ ಬಗ್ಗೆ ಸಲಹೆ ನೀಡುತ್ತಾರೆ. ಈ ಮೂರು ಗುಣಗಳು ಮೋದಿ ಅವರನ್ನು ವಿಭಿನ್ನವಾಗಿ ನಿಲ್ಲಿಸುತ್ತದೆ. ಇನ್ನು ನಾಲ್ಕನೇಯದು ನೈತಿಕ ನಾಯಕತ್ವ ಮೋದಿ ಅವರ ದೊಡ್ಡ ಶಕ್ತಿ. ನಾಯಕತ್ವಕ್ಕೆ ಶಕ್ತಿ ಬರುವುದು ಮತದಿಂದ, ಅಲಂಕರಿಸುವ ಸ್ಥಾನದಿಂದಲ್ಲ. ನೈತಿಕ ನಾಯಕತ್ವದಿಂದ ಎಂಬುದನ್ನು ತೋರಿಸಿದ್ದಾರೆ. ಐದನೇಯದು ಪ್ರಪಂಚದಲ್ಲಿ ಭಾರತ ಪರಿಣಾಮಕಾರಿಯಾಗಿ ಪರಿಣಾಮ ಬೀರಬೇಕು ಎಂಬ ಉದ್ದೇಶ. ಆರನೇ ಅತ್ಯುತ್ತಮ ಗುಣ ಆಡಳಿತದಲ್ಲಿ ತಂತ್ರಜ್ಞಾನದ ಶಕ್ತಿ ಏನೆಂಬುದನ್ನು ಅರ್ಥ ಮಾಡಿಸಿದರು. ಸ್ವಾತಂತ್ರ್ಯ ಭಾರತದಲ್ಲಿ ಲಭಿಸಿದ ನಾಯಕರಲ್ಲಿ ನರೇಂದ್ರ ಮೋದಿ ತಂತ್ರಜ್ಞಾನ ಮೇಲೆ ಸದ್ಬಳಕೆಗೆ ಹೆಚ್ಚು ಒತ್ತು ನೀಡಿದರು. ತಂತ್ರಜ್ಞಾನವನ್ನು ಆಡಳಿತಕ್ಕೆ ಯಾವ ರೀತಿಯಲ್ಲಿ ಬಳಸಬೇಕು ಎಂಬುದನ್ನು ತೋರಿಸಿದರು.

* ನರೇಂದ್ರ ಮೋದಿ ಅವರ ಮೊದಲ ಐದು ವರ್ಷ ಆಡಳಿತಾವಧಿಗೂ, ಈಗಿನ ಆಡಳಿತಾವಧಿಗೂ ಏನು ಅನಿಸುತ್ತದೆ?

ಪ್ರಧಾನಿ ಮೋದಿ ಅವರಿಗೆ 5 ಅಥವಾ 10 ವರ್ಷ ಎಂಬ ಯೋಜನೆ ಇಲ್ಲ. ಸಂಪೂರ್ಣ ಭಾರತದ ಪುನರ್‌ ನಿರ್ಮಾಣದ ಗುರಿ ಅವರ ಮುಂದಿದೆ. ಎ ಪೊಲಿಟಿಷಿಯನ್‌ ಥಿಂಕ್ಸ್‌ ಒನ್‌ ಎಲೆಕ್ಷನ್‌ ಟು ನೆಕ್ಸ್ಟ್‌, ಎ ಸ್ಟೇಟ್ಸ್‌ಮೆನ್‌ ಥಿಂಕ್‌ ಆಫ್‌ ಜನರೇಷನ್‌, ಎ ವಿಷನರಿ ಥಿಂಕ್‌ ಆಫ್‌ ಆ ಸೆಂಚ್ಯುರಿ ಎಂದು ಸ್ವಾಮಿ ರಂಗನಾಥನ್‌ ಅವರು ಪುಸ್ತಕದಲ್ಲಿ ಬರೆಯುತ್ತಾರೆ. ಮೋದಿ ಅವರು ಸೆಂಚ್ಯುರಿ ನೋಡುತ್ತಿರುವ ವ್ಯಕ್ತಿ. ಮೊದಲ ವರ್ಷದ ಅವಧಿಯಲ್ಲಿ ಬ್ಯಾಂಕ್‌ ಖಾತೆ ಪ್ರಾರಂಭಿಸಿ ಎಂದು ಹೇಳಿ ಜನ್‌ಧನ್‌ ಖಾತೆ, ಆಧಾರ್‌ ಕಾರ್ಡ್‌, ಮೊಬೈಲ್‌ ಫೋನ್‌ ತೆಗೆದುಕೊಳ್ಳುವಂತೆ ಹೇಳಿದರು. ಜನಧನ್‌ ಖಾತೆ ಮಾಡಿದ್ದರಿಂದ ಅದನ್ನು ಆಧಾರ್‌, ಮೊಬೈಲ್‌ಗೆ ಲಿಂಕ್‌ ಮಾಡಿದರು. ಇದರಿಂದ ಕೊರೋನಾ ಸಮಯದಲ್ಲಿ 56 ಕೋಟಿ ರು. ಜನರ ಖಾತೆಗೆ ಹಣ ವರ್ಗ ಮಾಡಲು ಸಾಧ್ಯವಾಯಿತು. ಆಡಳಿತಕ್ಕೆ ಬಂದ ಮೊದಲ ಐದು ವರ್ಷದಲ್ಲಿ ಜನ್‌ಧನ್‌, ನೋಟು ಅಮಾನೀಕರಣ, ಜಿಎಸ್‌ಟಿಯಂತಹ ಹಲವು ಸುಧಾರಣೆಗಳನ್ನು ತಂದರು. ಕಳೆದೊಂದು ವರ್ಷದಲ್ಲಿ ಕಾಶ್ಮೀರದ ವಿಶೇಷ ಅಧಿಕಾರವನ್ನು ತೆಗೆದು ಹಾಕಿದರು. ಸಿಎಎ ಜಾರಿ ತೀರ್ಮಾನ ಕೈಗೊಂಡರು. ಆರ್ಥಿಕತೆಯನ್ನು ಬದಲಿಸಿದರು. ಎಪಿಎಂಸಿ ಕಾಯ್ದೆ ತೆಗೆದು ಹಾಕಿದರು. ಮೋದಿ ಅವರು ಇಂದು-ನಾಳೆಯ ಬಗ್ಗೆ ಚಿಂತನೆ ಮಾಡುತ್ತಿಲ್ಲ, ಬದಲಿಗೆ ಮುಂದಿನ 25 ವರ್ಷದ ಯೋಚನೆಯನ್ನು ಮಾಡಿಕೊಂಡು ಮುನ್ನುಗ್ಗುತ್ತಿದ್ದಾರೆ.

ಮಾತಲ್ಲೇ ಮೋಡಿ ಮಾಡುವ ತೇಜಸ್ವಿ!

* ರಾಜ್ಯದಿಂದ 25 ಸಂಸದರು ಪ್ರತಿನಿಧಿಸುತ್ತಿದ್ದರೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯಕ್ಕೆ ಸಿಗಬೇಕಾದ ಅನುದಾನ, ಅನುಕೂಲ ಲಭ್ಯವಾಗುತ್ತಿಲ್ಲ ಎಂಬ ಆರೋಪಗಳಿವೆ?

ಕೇಂದ್ರದಿಂದ ಅದು ಸಿಕ್ಕಿಲ್ಲ, ಇದು ಸಿಕ್ಕಿಲ್ಲ ಎನ್ನುವುದು ಕಾಂಗ್ರೆಸ್‌ನ ಆರೋಪವಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಸಂಪೂರ್ಣ ಸಹಕಾರ ಇದೆ. ಕರ್ನಾಟಕ ರಾಜ್ಯವು ಭಾರತಕ್ಕೆ ಬಹಳ ಮುಖ್ಯವಾಗಿದೆ. ಕೇಂದ್ರದಲ್ಲಿ ಮೋದಿ ಇರಲಿ ಅಥವಾ ಬೇರೆ ಪಕ್ಷದ ನಾಯಕರೇ ಇರಲಿ. ಯಾರೇ ಪ್ರಧಾನಿ ಇದ್ದರೂ ರಾಜ್ಯವನ್ನು ನಿರ್ಲಕ್ಷಿಸಿ ರಾಷ್ಟ್ರ ರಾಜಕಾರಣ ಮಾಡಲು ಸಾಧ್ಯವಿಲ್ಲ. ಇದು ಮೊದಲು ಅರ್ಥ ಮಾಡಿಕೊಳ್ಳಬೇಕು. ದೇಶದ ಆರ್ಥಿಕತೆಗೆ ರಾಜ್ಯದ ಕೊಡುಗೆ ಮಹತ್ತರವಾದುದಾಗಿದೆ. ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ ಮೊದಲ 3ನೇ ಸ್ಥಾನದಲ್ಲಿದೆ. ಹೆಚ್ಚು ತೆರಿಗೆ ಪಾವತಿ, ರಫ್ತಿನಲ್ಲಿ ರಾಜ್ಯದ ಕೊಡುಗೆ ಹೆಚ್ಚಿದೆ. ಹೀಗಾಗಿ ಯಾರು ನಿರ್ಲಕ್ಷಿಸಲು ಸಾಧ್ಯವಿಲ್ಲ. ಮೋದಿ ಮಾತ್ರವಲ್ಲ, ಈ ಹಿಂದಿನ ಯಾವ ಪ್ರಧಾನಿಗಳು ರಾಜ್ಯವನ್ನು ನಿರ್ಲಕ್ಷಿಸಿಲ್ಲ. ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಮತ್ತು ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರದ ಯೋಜನೆಗಳು ರಾಜ್ಯಕ್ಕೆ ಎಷ್ಟುಬಂದಿವೆ? ಅನುದಾನ ಎಷ್ಟುಬಂದಿದೆ ಎಂಬುದನ್ನು ದಾಖಲೆ ಸಮೇತ ಹೇಳಲಿ. ಮೋದಿ ಸರ್ಕಾರ ಹೆಚ್ಚು ಅನುದಾನ ನೀಡಿಲ್ಲ ಎಂಬುದನ್ನು ಸಾಬೀತು ಪಡಿಸಿದರೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಬಹುದು. ಇಲ್ಲವಾದರೆ ಆರೋಪಗಳು ಆಧಾರರಹಿತವಾಗಿರುತ್ತವೆ. ದಾಖಲೆ ಸಮೇತ ಹೇಳಿದರೆ ನಾವು ಉತ್ತರ ನೀಡುತ್ತೇವೆ.

* ಕೇಂದ್ರದಿಂದ ಮುಂದಿನ ನಾಲ್ಕು ವರ್ಷಗಳ ಆಡಳಿತದಲ್ಲಿ ಏನನ್ನು ನಿರೀಕ್ಷಿಸಬಹುದು?

ವಿಶ್ವಕ್ಕೆ ಭಾರತ ಪರಿಣಾಮಕಾರಿಯಾಗಿ ತಮ್ಮದೇ ಛಾಪು ಮೂಡಿಸಬೇಕು ಎಂಬ ಮಹತ್ವಾಕಾಂಕ್ಷಿಯಿಂದ ನರೇಂದ್ರ ಮೋದಿ ಅವರು ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಬಡತನ ನಿರ್ಮೂಲನ ಮಾಡಬೇಕು. ಭಾರತ ಶ್ರೀಮಂತ ರಾಷ್ಟ್ರವಾಗಬೇಕು ಎಂಬ ಪರಿಕಲ್ಪನೆ ಇದೆ. ಅಂದರೆ ಭಾರತೀಯರು ಶ್ರೀಮಂತರಾಗಬೇಕು. ರೈತರ, ಶ್ರಮಿಕರ ಆದಾಯ ದುಪಟ್ಟು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಮುಂದಿನ ದಿನದಲ್ಲಿ ಭಾರತ ಅಗ್ರಮಾನ್ಯವಾಗಿ ನಿಲ್ಲಲಿದೆ. 70 ವರ್ಷದಿಂದ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಪರಿಹರಿಸಿ ಸಬಲವಾದ ಸರ್ಕಾರಿ ಆಡಳಿತ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಲಾಗಿದೆ. ಪ್ರತಿ ಕ್ಷೇತ್ರದಲ್ಲಿಯೂ ಆಮೂಲಾಗ್ರ ಬದಲಾವಣೆ ತಂದು ನಾಲ್ಕು ವರ್ಷಗಳಲ್ಲಿ ಹೊಸ ಭಾರತ ನಿರ್ಮಾಣವಾಗಲಿದೆ.