ಜೂನ್ 21 ಅಂತರಾಷ್ಟ್ರೀಯ ಯೋಗ ದಿನ ಆಚರಣೆ 7ನೇ ಯೋಗ ದಿನಾಚರಣೆಯನ್ನುದ್ದೇಶಿಸಿ ಮೋದಿ ಭಾಷಣ ಬೆಳಗ್ಗೆ 6.30ಕ್ಕೆ ಪ್ರಧಾನಿ ಮೋದಿಯಿಂದ ಯೋಗ ಫಾರ್ ವೆಲ್ನೆಸ್ ಕುರಿತು ಭಾಷಣ

ನವದೆಹಲಿ(ಜೂ.20): ಅತ್ಯುತ್ತಮ ಆರೋಗ್ಯ, ರೋಗ ರುಜಿನಗಳಿಂದ ದೂರವಿರಲು, ದೀರ್ಘಾಯುಷ್ಯಕ್ಕೆ ಯೋಗ ಪ್ರಮುಖ ಮದ್ದು ಅನ್ನೋದು ವೈಜ್ಞಾನಿಕವಾಗಿ ಸಾಬೀತಾಗಿದೆ. ವಿಶ್ವಕ್ಕೆ ಭಾರತ ನೀಡಿದ ಕೊಡುಗೆಗಳಲ್ಲಿ ಯೋಗ ಪ್ರಮುಖವಾಗಿದೆ. ಪ್ರತಿ ವರ್ಷ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಗುತ್ತಿದೆ. ಇದೀಗ 7ನೇ ವರ್ಷದ ಯೋಗದಿನಾಚರಣೆ ಪ್ರಯುಕ್ತ ನಾಳೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ.

ಬೆಂಗ್ಳೂರಿನಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ತಯಾರಿ.

ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗಭ್ಯಾಸ ಅತ್ಯುತ್ತಮ ಜೂನ್ 21, 2021ರ ಬೆಳಗ್ಗೆ 6.30ಕ್ಕೆ ಯೋಗ ಫಾರ್ ವೆಲ್ನೆಸ್ ಕುರಿತು ದೇಶವನ್ನುದ್ದೇಶಿ ಭಾಷಣ ಮಾಡಲಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Scroll to load tweet…

ಇದು 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಾಗಿದೆ. ನರೇಂದ್ರ ಮೋದಿ ನೇತೃತ್ವದ ಮೋದಿ ಸರ್ಕಾರ ಪ್ರಯತ್ನದಿಂದ 2015ರ ಜೂನ್ 21 ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ನವದೆಹಲಿಯ ರಾಜಪಥದಲ್ಲಿ ನಡೆದ ಈ ಕಾರ್ಯಕ್ರಮ ಎರಡು ಗಿನ್ನಿಸ್ ದಾಖಲೆ ಬರೆದಿತ್ತು. ಮೊದಲನೆಯದು, ರಾಜಪಥದಲ್ಲಿ ಆಯೋಜಿಸಿದ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಲ್ಲಿ ಪ್ರಧಾನಿ ಮೋದಿ ಜೊತೆ ಬರೋಬ್ಬರಿ 35,985 ಮಂದಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದ್ದರು. ಇನ್ನು ಎರಡನೆ ದಾಖಲೆ, 84 ದೇಶಗಳು ಏಕಕಾಲದಲ್ಲಿ ಯೋಗಭ್ಯಾಸ ಮಾಡೋ ಮೂಲಕ ಯೋಗ ದಿನಾಚರಣೆ ಆಚರಿಸಿತ್ತು.

ಕೋವಿಡ್ ಸೋಂಕಿತರಿಗೆ ಯೋಗ, ಪ್ರಾಣಾಯಾಮ ಮೂಲಕ ಆತ್ಮಬಲ ತುಂಬುವ ಯೋಗ ಮಾಸ್ಟರ್

2016ರಲ್ಲಿ ಚಂಢಿಘಡಲ್ಲಿ ಯೋಗದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆ 30,000 ಮಂದಿ ಪಾಲ್ಗೊಂಡಿದ್ದರು. ಇನ್ನು ಲಖನೌದಲ್ಲಿ 2017ರ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ 51,000 ಮಂದಿ ಪಾಲ್ಗೊಂಡಿದ್ದರು. 

2018ರಲ್ಲಿ ಡೆಹ್ರಡೂನ್‌ನಲ್ಲಿ ಮೋದಿ ಯೋಗದಿನಾಚರಣೆ ಕಾರ್ಯಕ್ರಮ ನಡೆದಿತ್ತು. 2019ರಲ್ಲಿ ರಾಂಚಿಯಲ್ಲಿ ನಡೆದಿತ್ತು. 2020ರಲ್ಲಿ ಕೊರೋನಾ ವೈರಸ್ ಕಾರಣ ವರ್ಚುವಲ್ ಮೂಲಕ ಯೋಗದಿನಾಚರಣೆ ಕಾರ್ಯಕ್ರಮ ನಡೆದಿತ್ತು. ಇದೀಗ ಎರಡನೇ ಬಾರಿಗೆ ವರ್ಚುವಲ್ ಕಾರ್ಯಕ್ರಮ ನಡೆಯುತ್ತಿದೆ.