ಹಿಂದೂ ದೇವರುಗಳನ್ನು ಅವಹೇಳನ ಮಾಡಿದ ಕಾರಣಕ್ಕೆ ಪುಣೆಯ ಸಿಂಬಿಯಾಸಿಸ್‌ ಕಾಲೇಜು ಶಿಕ್ಷಕರೊಬ್ಬರನ್ನು ಗುರುವಾರ ಬಂಧಿಸಲಾಗಿದೆ ಹಾಗೂ ಅಮಾನತು ಮಾಡಲಾಗಿದೆ

ಪುಣೆ: ಹಿಂದೂ ದೇವರುಗಳನ್ನು ಅವಹೇಳನ ಮಾಡಿದ ಕಾರಣಕ್ಕೆ ಪುಣೆಯ ಸಿಂಬಿಯಾಸಿಸ್‌ ಕಾಲೇಜು ಶಿಕ್ಷಕರೊಬ್ಬರನ್ನು ಗುರುವಾರ ಬಂಧಿಸಲಾಗಿದೆ ಹಾಗೂ ಅಮಾನತು ಮಾಡಲಾಗಿದೆ. ಅಶೋಕ್‌ ದೋಲೆ ಎಂಬ ಶಿಕ್ಷಕ ಪಾಠ ಮಾಡುವ ಸಮಯದಲ್ಲಿ, ಹಿಂದೂಗಳಲ್ಲಿ ಹೆಚ್ಚು ದೇವರು ಇರುವುದರಿಂದಲೇ ರಕ್ಷಣೆಗೆ ಯಾರನ್ನು ಕರೆಯಬೇಕೆಂದು ಗೊತ್ತಾಗದೇ ಸಾವಿಗೀಡಾಗುತ್ತಿದ್ದಾರೆ ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಕಾಲೇಜಿನ ಎದುರು ಪ್ರತಿಭಟನೆಯನ್ನೂ ನಡೆಸಿತ್ತು. ಕಾಲೇಜು ಆಡಳಿತ ಮಂಡಳಿ ಅಶೋಕ್‌ ಅವರನ್ನು ಅಮಾನತು ಮಾಡಿದೆ. ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಅಡಿ ಪ್ರಕರಣ ದಾಖಲಿಸಿದ್ದಾರೆ.


ಮುಂಬೈನಲ್ಲೂ ಉಡುಪಿ ರೀತಿ ಹಿಜಾಬ್ ವಿವಾದ, ಕಾಲೇಜಲ್ಲಿ ಬುರ್ಖಾಗೆ ಬ್ರೇಕ್‌