ಸರ್ಕಾರಿ ದಾಖಲೆಗಳಲ್ಲಿ ‘ಇಂಡಿಯಾ’ ಬದಲು ‘ಭಾರತ’?
ಇದರರ್ಥ ಈ ಹಿಂದಿನ ಕಡತಗಳಲ್ಲಿನ ‘ಇಂಡಿಯಾ’ ಪದ ಅಳಿಸಿ ‘ಭಾರತ’ ಎಂದು ಬದಲಿಸುವುದಿಲ್ಲ. ಹೊಸ ದಾಖಲೆಗಳಲ್ಲಿ ಮಾತ್ರ ‘ಭಾರತ’ ಪದ ಇರಲಿದೆ.
ನವದೆಹಲಿ(ಸೆ.08): ‘ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಬದಲಿಸಲಾಗುತ್ತದೆ ಎಂಬ ಸುದ್ದಿಗಳ ನಡುವೆಯೇ, ಯೋಜನೆಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಹ್ವಾನಗಳು ಹಾಗೂ ಇತರ ಅಧಿಕೃತ ದಾಖಲೆಗಳಲ್ಲಿ ಶೀಘ್ರ ‘ಭಾರತ್’ ಎಂಬ ಹೆಸರು ಕಾಣಿಸಿಕೊಳ್ಳಲು ಪ್ರಾರಂಭಿಸಬಹುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದು ಪೂರ್ವಾನ್ವಯವಲ್ಲ. ಇನ್ನು ಮೇಲೆ ಸಿದ್ಧವಾಗುವ ದಾಖಲೆಗಳಲ್ಲಿ ಮಾತ್ರ ‘ಭಾರತ್’ ಎಂದು ಇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದರರ್ಥ ಈ ಹಿಂದಿನ ಕಡತಗಳಲ್ಲಿನ ‘ಇಂಡಿಯಾ’ ಪದ ಅಳಿಸಿ ‘ಭಾರತ’ ಎಂದು ಬದಲಿಸುವುದಿಲ್ಲ. ಹೊಸ ದಾಖಲೆಗಳಲ್ಲಿ ಮಾತ್ರ ‘ಭಾರತ’ ಪದ ಇರಲಿದೆ.
ಅಯೋಗ್ಯರ ಬಗ್ಗೆ ಹೆಚ್ಚು ಮಾತಾಡಬಾರದು: ನಟ ಪ್ರಕಾಶ್ ರಾಜ್ ವಿರುದ್ಧ ಹರಿಹಾಯ್ದ ಈಶ್ವರಪ್ಪ
‘ಮೇಕ್ ಇನ್ ಇಂಡಿಯಾ’, ‘ಸ್ಟಾರ್ಟಪ್ ಇಂಡಿಯಾ’ ಎಂಬ ಯೋಜನೆಗಳ ಹೆಸರು ಬದಲಾವಣೆ ಬಗ್ಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ‘ಸಂವಿಧಾನದಲ್ಲಿ ಭಾರತ ಹಾಗೂ ಇಂಡಿಯಾ- ಎರಡೂ ಪದಗಳಿಗೆ ಮಾನ್ಯತೆ ಇದೆ. ಹೀಗಾಗಿ ಹಳೆಯ ಹೆಸರಿಗೆ ಸಮಸ್ಯೆ ಇಲ್ಲ. ಅಲ್ಲದೆ ಪೂರ್ವಾನ್ವಯ ಆಗುವಂತೆ ಯಾವುದೇ ಯೋಜನೆಗಳ ಹೆಸರು ಬದಲಿಸಬೇಕು ಎಂಬ ಯಾವ ನಿರ್ಣಯವೂ ಆಗಿಲ್ಲ’ ಎಂದಿದ್ದಾರೆ.
ಈಗಾಗಲೇ ‘ಕರ್ಮಯೋಗಿ ಭಾರತ್’ ನಂತಹ ಯೋಜನೆಗಳು ಮತ್ತು ಇಂಥ ಕಾರ‍್ಯಕ್ರಮಗಳ ಅಧಿಕೃತ ದಾಖಲೆಗಳಲ್ಲಿ ‘ಭಾರತ್’ ಹೆಸರು ಬಳಕೆಯಲ್ಲಿದೆ. ಇತ್ತೀಚೆಗೆ ಕೇಂದ್ರ ಸಚಿವ ಅಮಿತ್ ಶಾ ಮಂಡಿಸಿದ ಮಸೂದೆಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಮಸೂದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಪದಗಳಿವೆ. ಇನ್ನು ಮುಂದಿನ ಯೋಜನೆಗಳಲ್ಲಿ ‘ಭಾರತ’ ಹೆಸರು ಪ್ರಾಬಲ್ಯ ಮೆರೆಯಲಿದೆ. ಉದಾಹರಣೆಗೆ: ‘ಭಾರತ್ ಡ್ರೋನ್ ಶಕ್ತಿ’ ಎಂದು ಅಧಿಕಾರಿಗಳು ಹೇಳಿದ್ದಾರೆ.