ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷಗಳ ಕಾಲ ಸೇವೆ| ಕೊನೆ ಪಯಣ ಮುಗಿಸಿ ಗುಜರಾತ್‌ ತಲುಪಿದ ಐಎನ್‌ಎಸ್‌ ವಿರಾಟ್‌| ಗುಜರಾತಿನ ಅಲಾಂಗ್‌ ಬಂದರು ತಲುಪಿದ ನೌಕೆ

ಅಹಮದಾಬಾದ್(ಸೆ.23)‌: ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, 3 ವರ್ಷದ ಹಿಂದೆ ನಿವೃತ್ತಿಯಾಗಿದ್ದ ಐಎನ್‌ಎಸ್‌ ವಿರಾಟ್‌ ಯುದ್ಧನೌಕೆ ಮುಂಬೈನಿಂದ ಹೊರಟು ತನ್ನ ಕೊನೆ ಪ್ರಯಾಣ ಮುಗಿಸಿ, ಸೋಮವಾರ ಸಂಜೆ ಗುಜರಾತಿನ ಅಲಾಂಗ್‌ ಬಂದರು ತಲುಪಿದೆ.

27,800 ಟನ್‌ ತೂಕದ ಈ ಬೃಹತ್‌ ನೌಕೆಯನ್ನು ಅಲಾಂಗ್‌ನಲ್ಲಿ ಒಡೆದು, ಗುಜರಿಗೆ ಮಾರಾಟ ಮಾಡಲಾಗುತ್ತದೆ. 1959ರಿಂದ 1984ರವರೆಗೆ ಬ್ರಿಟಿಷ್‌ ನೌಕಾಪಡೆಯಲ್ಲಿ ಎಚ್‌ಎಂಎಸ್‌ ಹಮ್ಸ್‌ರ್‍ ನೌಕೆಯಾಗಿ ಐಎನ್‌ಎಸ್‌ ವಿರಾಟ್‌ ಕಾರ‍್ಯನಿರ್ವಹಿಸಿತ್ತು.

ಬಳಿಕ 1987ರ ಮೇ 12ರಂದು ವಿರಾಟ್‌ ಭಾರತೀಯ ನೌಕಾಪಡೆಗೆ ಸೇರ್ಪಡೆ ಆಗಿತ್ತು. ವಿಶ್ವದಲ್ಲೇ ಅತಿ ದೀರ್ಘ ಕಾಲ ಸೇವೆ ಸಲ್ಲಿಸಿದ ಕಾರಣಕ್ಕೆ ವಿರಾಟ್‌ ನೌಕೆ ವಿಶ್ವದ ‘ಗ್ರ್ಯಾಂಡ್‌ ಓಲ್ಡ್‌ ಲೇಡಿ’ ಎಂಬ ಖ್ಯಾತಿ ಪಡೆದಿದೆ.