ನವದೆಹಲಿ[ನ.14]: ಇಸ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರ ರೋಹನ್‌ ಮೂರ್ತಿ ಕೇರಳದ ಕೊಚ್ಚಿ ಮೂಲದ ಅಪರ್ಣಾ ಕೃಷ್ಣನ್‌ ಅವರನ್ನು ವಿವಾಹವಾಗಲಿದ್ದಾರೆ.

ಬರಲಿದೆ ಮೂರ್ತಿ ದಂಪತಿ ಬಯೋಪಿಕ್; ಯಾರಾಗ್ತಾರೆ ಸುಧಾ ಮೂರ್ತಿ?

ಡಿ.2ರಂದು ಈ ಜೋಡಿ ಬೆಂಗಳೂರಿನಲ್ಲಿ ಈ ಜೋಡಿ ಸರಳವಾಗಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಲಿದೆ. ಇದರಲ್ಲಿ ಎರಡೂ ಕುಟುಂಬದ ಅತ್ಯಾಪ್ತರು ಮಾತ್ರವೇ ಭಾಗಿಯಾಗಲಿದ್ದಾರೆ. ಬಳಿಕ ಹೋಟೆಲ್‌ನಲ್ಲಿ ಬಂಧುಗಳು, ಗಣ್ಯರಿಗೆ ಔತಣ ಕೂಟ ಆಯೋಜಿಸಲಾಗುವುದು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ!

ಅಪರ್ಣಾ, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕಮಾಂಡರ್‌ ಕೆ.ಆರ್‌. ಕೃಷ್ಣನ್‌ ಮತ್ತು ಎಸ್‌ಬಿಐನ ನಿವೃತ್ತ ಉದ್ಯೋಗಿ ಸಾವಿತ್ರಿ ಅವರ ಪುತ್ರಿ. ಲಂಡನ್‌ನ ಡರ್ತ್‌ಮೌತ್ ಕಾಲೇಜಿನಿಂದ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿರುವ ಅಪರ್ಣಾ ಓರ್ವ ಅತ್ಯುತ್ತಮ ಯೋಗಪಟು ಕೂಡಾ ಹೌದು. ಲಂಡನ್‌ನಿಂದ ಮರಳಿರುವ ಅಪರ್ಣಾ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನು ಅಪರ್ಣಾ ಹಾಗೂ ರೋಹನ್ ಇಬ್ಬರೂ ಕಳೆದ ಮೂರು ವರ್ಷಗಳಿಂದ ಸ್ನೇಹಿತರಾಗಿದ್ದಾರೆ.