ನವದೆಹಲಿ[ಫೆ.04]: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರಂತರ ಪ್ರತಿಭಟನೆ ನಡೆಯುತ್ತಿರುವ ಶಹೀನ್‌ ಬಾಗ್‌ನಲ್ಲಿ ಮೊಹಮ್ಮದ್‌ ಜಹಾನ್‌ ಎಂಬ ನಾಲ್ಕು ತಿಂಗಳ ಮಗುವೊಂದು ಸಾವಿಗೀಡಾಗಿದೆ.

ಪೋಷಕರು ಮಗುವನ್ನೂ ಕರೆದೊಯ್ದು ಪ್ರತಿನಿತ್ಯ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದರು. ಈ ಮಗು ಎಲ್ಲರ ಗಮನ ಸೆಳೆದಿತ್ತು. ಆದರೆ, ದೆಹಲಿಯಲ್ಲಿ ವಿಪರೀತ ಚಳಿ ಹಾಗೂ ಹೊರಗಿನ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದೇ ಜ್ವರದಿಂದ ಬಳಲಿ ಮಗು ಸಾವಿಗೀಡಾಗಿದೆ.

ಈ ಮಧ್ಯೆ ತಾನು ಮಗುವಿನ ಸಾವಿನಿಂದ ಧೃತಿಗೆಟ್ಟಿಲ್ಲ. ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಮಗುವಿನ ತಾಯಿ ಹೇಳಿದ್ದಾಳೆ.