15ನೇ ವರ್ಷದ ಸಂಭ್ರಮದಲ್ಲಿ ಇಂಡಿಗೋ ಏರ್‌ಲೈನ್ಸ್ 915 ರೂಪಾಯಿಗಿ ವಿಮಾನ ಟಿಕೆಟ್ ಆಫರ್ ನೀಡಿದ ಇಂಡಿಗೋ ಇಂಡಿಗೋ ಆಫರ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಆ.04): ಇಂಡಿಗೋ ಏರ್‌ಲೈನ್ಸ್ 15ನೇ ವರ್ಷದ ಸಂಭ್ರಮದಲ್ಲಿದೆ. ಇದರ ಪ್ರಯುಕ್ತ ಪ್ರಯಾಣಿಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಕೇವಲ 915 ರೂಪಾಯಿ ಆರಂಭಿಕ ಬೆಲೆಯಿಂದ ಟಿಕೆಟ್ ಕಾಯ್ದಿರಿಸಿಕೊಳ್ಳುವ ಅವಕಾಶ ನೀಡಿದೆ. ಈ ಆಫರ್ ಮೂಲಕ ಪ್ರಯಾಣಿಕರು ಅತೀ ಕಡಿಮೆ ಬೆಲೆಗೆ ಇಂಡಿಗೋ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. 

ಕನಸು ನನಸಾದ ಕ್ಷಣ; ಆಗಸ್ಟ್ 13ರಿಂದ ಬೆಳಗಾವಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಆರಂಭ!

ಇಂಡಿಗೋ ಘೋಷಿಸಿದ ಡಿಸ್ಕೌಂಟ್ ಆಫರ್ ಮೂಲಕ 915 ರೂಪಾಯಿ ಆರಂಭಿಕ ಬೆಲೆಯಿಂದ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಆಗಸ್ಟ್ 4 ರಿಂದ 6ರ ವರೆಗೆ ಬುಕಿಂಗ್ ಅವದಿ ನೀಡಲಾಗಿದೆ. ಪ್ರಯಾಣದ ದಿನಾಂಕ ಸೆಪ್ಟೆಂಬರ್ 1, 2021 ರಿಂದ ಮಾರ್ಚ್ 26, 2022ರ ವರೆಗೆ ನೀಡಲಾಗಿದೆ. 

ಡೋಮಿಸ್ಟಿಕ್ ವಿಮಾನ ಪ್ರಯಾಣಕ್ಕೆ ಈ ಆಫರ್ ನೀಡಲಾಗಿದೆ. ಪ್ರಯಾಣಿಕರ ಪ್ರಯಾಣದ ದೂರ, ಕ್ಲಾಸ್ ಸೇರಿದಂತೆ ಹಲವು ಕಾರಣಕ್ಕೆ ಟಿಕೆಟ್ ದರದಲ್ಲಿ ವ್ಯತ್ಯಾಸವಾಗಲಿದೆ. ಆಗಸ್ಟ್ 4 ರಿಂದ 6ರ ವರೆಗೆ ಬುಕ್ ಮಾಡುವ ಡೋಮೆಸ್ಟಿಕ್ ವಿಮಾನದ ಎಲ್ಲಾ ಟಿಕೆಟ್‌ಗೂ ಈ ಡಿಸ್ಕೌಂಟ್ ಆಫರ್ ಅನ್ವಯವಾಗಲಿದೆ. 

ವಿಮಾನ ಹತ್ತಿದ ಸಂಸದನಿಗೆ ಅಚ್ಚರಿ; ಕಾರಣ ಪೈಲಟ್ ಕೂಡ ಸಂಸದ!

ಇಂಡಿಗೋ ವಿಮಾನ ಟಿಕೆಟ್ ಆಫರ್ ಕುರಿತು ಇಂಡಿಗೋ ಟ್ವೀಟ್ ಮಾಡಿದೆ. ಈ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. 15ನೇ ವಾರ್ಷಿಕೋತ್ಸವ ಸೇಲ್, ಕೇವಲ 915 ರೂಪಾಯಿಗೆ ಟಿಕೆಟ್ ಎಂದು ಇಂಡಿಗೋ ಘೋಷಿಸಿದೆ. 

Scroll to load tweet…

ಇದರ ಜೊತೆಗೆ ಇತರ ಕೆಲ ಆಫರ್‌ಗಳು ಲಭ್ಯವಿದೆ. ಏರ್‌ಲೈನ್ಸ್ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಿದರೆ ಶೇಕಡಾ 5 ರಷ್ಟು ಕ್ಯಾಶ್ ಬ್ಯಾಕ್ ನೀಡುತ್ತಿದೆ. ಇನ್ನು HSBC ಕ್ರಿಡಿಟ್ ಕಾರ್ಡ್ ಮೂಲಕ ಟಿಕೆಟ್ ಬುಕ್ ಮಾಡಿದರೂ ಶೇಕಡಾ 5 ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ. ಆದರೆ ಈ ಆಫರ್ ಗರಿಷ್ಠ 30,000ದ ವರೆಗಿನ ಟಿಕೆಟ್ ಬುಕಿಂಗ್‌ಗೆ ಸಿಗಲಿದೆ. 30 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಟಿಕೆಟ್ ಬುಕಿಂಗ್‌ಗೆ ಕ್ಯಾಶ್‌ಬ್ಯಾಕ್ ಆಫರ್ ಅನ್ವಯವಾಗಲ್ಲ.