ನವದೆಹಲಿ(ಫೆ.13): ದೇಶದೊಳಗಿನ ಸಂಪರ್ಕ ವ್ಯವಸ್ಥೆಯನ್ನ ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಇಂಡಿಗೋ 22 ಹೊಸ ವಿಮಾನ ಸೇವೆಗಳನ್ನು ಘೋಷಿಸಿದೆ. ಹೊಸ 22 ವಿಮಾನಗಳು ಇದೇ ಮಾರ್ಚ್ 18 ರಿಂದ ಸೇವೆ ಆರಂಭಿಸಲಿದೆ. ಈ ಮೂಲಕ ದೇಶಿಯ ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಲಿದೆ.

ಆಂಧ್ರದ ಕರ್ನೂಲ್‌ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ..ಯಾವಾಗಿನಿಂದ?

ಹೊಸ ವಿಮಾನ ಸೇವೆಗಳ ವಿವರ:
RCS ಯೋಜನೆ ಅಡಿಯಲ್ಲಿ ಅಗರ್ತಲಾ- ಐಜ್ವಾಲ್ ವಿಮಾನ ಸೇವೆ
ಬೆಂಗಳೂರು-ಶಿರಡಿ ವಿಮಾನ ಸೇವೆ
ಭುವನೇಶ್ವರ್- ಪಾಟ್ನಾ ವಿಮಾನ ಸೇವೆ
ಜೈಪುರ್- ವಡೋದರ ವಿಮಾನ ಸೇವೆ
ಚೆನ್ನೈ-ವಡೋದರ ವಿಮಾನ ಸೇವೆ
ಪಾಟ್ನಾ-ಕೊಚ್ಚಿ ವಿಮಾನ ಸೇವೆ
ರಾಜಮುಂದ್ರೈ-ತಿರುಪತಿ ವಿಮಾನ ಸೇವೆ

ಇನ್ನು  ಕೋಲ್ಕತಾ-ಗಯಾ, ಕೊಚ್ಚಿ- ತಿರುವನಂತಪುರಂ, ಜೈಪುರ-ಸೂರತ್, ಚೆನ್ನೈ-ಸೂರತ್ ವಿಮಾನ ಸೇವೆಗಳನ್ನು ಆರಂಭಿಸಲು ಸಜ್ಜಾಗಿದೆ. 

ಭಾರತದ ಮೊಟ್ಟ ಮೊದಲ ಏರ್ ಟ್ಯಾಕ್ಸಿ ಸೇವೆ ಆರಂಭ, ಎಲ್ಲಿಂದ ಎಲ್ಲಿಗೆ?.

ದೇಶದಲ್ಲಿ 22 ಹೊಸ ವಿಮಾನಗಳನ್ನು ಸೇರಿಸುತ್ತಿದ್ದೇವೆ. ಈ ಮೂಲಕ ದೇಶಿಯಾ ವಿಮಾನ ಸೇವೆ ಹಾಗೂ ಸಂಪಕ್ರವನ್ನು ಮತ್ತಷ್ಟು ಬಲಪಡಿಸುತ್ತಿರುವುದು ನಮಗೆ ಸಂತಸ ತಂದಿದೆ. ದಕ್ಷಿಣ, ಪಶ್ಚಿಮ, ಪೂರ್ವ ಮತ್ತು ಈಶಾನ್ಯ ಪ್ರದೇಶಗಳ ಸಂರರ್ಕ ಕೊಂಡಿಯಾಗಿ ಇಂಡಿಗೋ ಕಾರ್ಯನಿರ್ವಹಿಸಲಿದೆ. ಇದು ದೇಶದ ಅಭಿವೃದ್ಧಿಗೂ ಸಹಕಾರಿಯಾಗಿದೆ ಎಂದು ಮುಖ್ಯ ಕಾರ್ಯತಂತ್ರ ಮತ್ತು ಕಂದಾಯ ಅಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.