ಬಾಲ್ಯದಿಂದಲೇ ಎಸ್ಎಫ್‌ಐನಲ್ಲಿ ಜೊತೆಯಾಗಿ ಕೆಲಸ ಬಾಲ್ಯದ ಸ್ನೇಹಕ್ಕೆ ಮದುವೆಯ ಬಂಧ ಕೇರಳದಲ್ಲೊಂದು ವಿಶೇಷ ರಾಜಕೀಯ ಮದುವೆ ಶಾಸಕನ ಮದುವೆಯಾಗ್ತಿರುವ ಮೇಯರ್‌

ತಿರುವನಂತಪುರಂ(ಫೆ.16): ದೇವರನಾಡು ಕೇರಳ ವಿಶೇಷ ರಾಜಕೀಯ ಮದುವೆಗೆ ಸಾಕ್ಷಿಯಾಗಲಿದೆ. ಭಾರತದ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆ ಗಳಿಸಿರುವ ತಿರುವನಂತಪುರದ ಮೇಯರ್ ಆಗಿರುವ ಆರ್ಯ ರಾಜೇಂದ್ರನ್ (Arya Rajendran) ಅವರು ತಮ್ಮದೇ ಪಕ್ಷದ ಬಾಲುಸ್ಸೆರಿ ಶಾಸಕ ಸಚಿನ್ ದೇವ್ (Sachin Dev)ಅವರನ್ನು ವಿವಾಹವಾಗಲಿದ್ದಾರೆ. ಆದರೆ ಮದುವೆಯ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ ಮದುವೆ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಒಪ್ಪಂದ ಏರ್ಪಟ್ಟಿದೆ. ಬಾಲ್ಯದಿಂದಲೂ ಇವರಿಬ್ಬರು ಎಸ್‌ಎಫ್‌ಐಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆಗಿನಿಂದಲೂ ಇವರಿಬ್ಬರು ಸ್ನೇಹಿತರು. ಒಂದು ತಿಂಗಳ ನಂತರ ಇವರು ಮದುವೆಯಾಗಿ ದಂಪತಿಗಳಾಗಲಿದ್ದಾರೆ. 

23 ವರ್ಷದ ಆರ್ಯ ರಾಜೇಂದ್ರನ್ (Arya rajendran) ಭಾರತದ ಅತ್ಯಂತ ಕಿರಿಯ ಮೇಯರ್ (youngest Mayor) ಆಗಿದ್ದಾರೆ. ಅವರು ತಿರುವನಂತಪುರಂನ (Thiruvananthapuram) ಆಲ್ ಸೇಂಟ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಸ್ಪರ್ಧಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಸಚಿನ್ ದೇವ್ (Sachin Dev) ಅವರು ಪ್ರಚಂಡ ಗೆಲುವು ಸಾಧಿಸಿ ಬಾಳುಸೇರಿಯಿಂದ ವಿಧಾನಸಭೆ ಪ್ರವೇಶಿಸಿದ್ದರು. ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿಯಾಗಿದ್ದಾಗಲೇ ಅವರು ಚುನಾವಣೆಗೆ ಸ್ಪರ್ಧಿಸಿದ್ದರು.

Glenn Maxwell wedding invitation ಚೆನ್ನೈ ಮೂಲದ ಯುವತಿಯ ಜತೆ ಮ್ಯಾಕ್ಸ್‌ವೆಲ್ ಮದುವೆ ಡೇಟ್ ಫಿಕ್ಸ್..!

ಮಕ್ಕಳ (Children) ಮದುವೆ ಬಗ್ಗೆ ಪಾಲಕರಿಗೆ ದೊಡ್ಡ ಚಿಂತೆಯಿರುತ್ತದೆ. ಅದ್ರಲ್ಲೂ ಹೆಣ್ಣು ಮಕ್ಕಳ ಮದುವೆ ಸಂದರ್ಭದಲ್ಲಿ ಖರ್ಚು ಹೆಚ್ಚು ಎಂಬ ಭಯ ಸಾಮಾನ್ಯವಾಗಿ ಕಾಡುತ್ತದೆ. ಹೆಣ್ಣು ಮಕ್ಕಳು ಜನಿಸಿದ ತಕ್ಷಣವೇ ಅವರ ಮದುವೆ (Marriage)ಗಾಗಿ ಹಣ (Money) ಕೂಡಿಡುವ ಅನೇಕ ಪಾಲಕರನ್ನು ನಾವು ನೋಡಿದ್ದೇವೆ. ಮಗಳ (Daughter) ಮದುವೆಗಾಗಿ ಅನೇಕ ವರ್ಷಗಳ ಮೊದಲೇ ಹಣ ಉಳಿತಾಯ ಮಾಡುವ ಪಾಲಕರು ಸರಿಯಾದ ಮಾರ್ಗ ಅನುಸರಿಸುವ ಅವಶ್ಯಕತೆಯಿದೆ. 

ಕೆಲವು ಹೂಡಿಕೆಯಲ್ಲಿ ಮೋಸವಾಗಬಹುದು. ಮತ್ತೆ ಕೆಲ ಹೂಡಿಕೆಯಿಂದ ಬರುವ ಲಾಭ ಅಲ್ಪವಾಗಿರುತ್ತದೆ. ಮಗಳ ಮದುವೆಗೆ ಈಗ್ಲೇ ಹಣ ಹೂಡಿಕೆ ಮಾಡ್ತೇವೆ ಎನ್ನುವವರು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ದೇಶದ ಅತಿದೊಡ್ಡ ವಿಮಾ ಕಂಪನಿಯಾದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ನಿಮಗೆ ಸಹಾಯ ಮಾಡುತ್ತದೆ. ಎಲ್ ಐಸಿಯ ಕನ್ಯಾದಾನ ಪಾಲಿಸಿಯಲ್ಲಿ ನಿಮ್ಮ ಮಗಳ ದುವೆಗೆ ಹಣವನ್ನು ಸೇರಿಸಲು ಪ್ರಾರಂಭಿಸಬಹುದು. ಮಗಳು ಮದುವೆಯ ವಯಸ್ಸಿಗೆ ಬಂದಾಗ ನೀವು ಹಣವನ್ನು ಪಡೆಯಬಹುದು. ಇದು ಎಲ್ ಐಸಿಯ ಕನ್ಯಾದಾನ ಯೋಜನೆ.

Weird Love Story : ದೆವ್ವವನ್ನು ಮದುವೆಯಾಗ್ತಾಳಂತೆ ಈಕೆ, ವಿವಾಹದ ದಿನಾಂಕ ವಿಷಯಕ್ಕೆ ಜಗಳವಾಗ್ತಿದೆಯಂತೆ!

LIC ಕನ್ಯಾದಾನ ಯೋಜನೆ (LIC Kanyadan Policy )ಎಲ್ ಐಸಿ, ಹೆಣ್ಣು ಮಕ್ಕಳ ಪಾಲಕರಿಗಾಗಿಯೇ ಈ ಯೋಜನೆಯನ್ನು ಶುರು ಮಾಡಿದೆ. ಮದುವೆ ಸಂದರ್ಭದಲ್ಲಿ ಪಾಲಕರಿಗೆ ಆರ್ಥಿಕ ಹೊಣೆಯಾಗಬಾರದು ಎಂದ್ರೆ ಮಗು ಹುಟ್ಟಿದ ನಂತ್ರ ನೀವು ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು. ಹೆಚ್ಚಿನ ಹೂಡಿಕೆ ಅಗತ್ಯವಿಲ್ಲ. ದಿನಕ್ಕೆ ನೀವು 151 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಮಗಳು ಮದುವೆ ವಯಸ್ಸಿಗೆ ಬಂದಾಗ 31 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ನೀವು ಪಡೆಯುತ್ತೀರಿ. 

ಎಲ್‌ಐಸಿ ಕನ್ಯಾದಾನ ಪಾಲಿಸಿಯಲ್ಲಿ ಹೂಡಿಕೆ ಮಾಡಲು, ನಿಮ್ಮ ವಯಸ್ಸು ಕನಿಷ್ಠ 30 ವರ್ಷವಾಗಿರಬೇಕು.ಮಗಳ ವಯಸ್ಸು 1 ವರ್ಷಕ್ಕಿಂತ ಕಡಿಮೆ ಇರಬಾರದು. ಹೂಡಿಕೆ ಶುರು ಮಾಡಿ 25ನೇ ವರ್ಷಕ್ಕೆ ನೀವು ಹಣವನ್ನು ಪಡೆಯಬಹುದು. ಆದರೆ ಪ್ರೀಮಿಯಂ ಅನ್ನು 22 ವರ್ಷಗಳವರೆಗೆ ಮಾತ್ರ ಪಾವತಿಸಬೇಕಾಗುತ್ತದೆ. ಈ ಪಾಲಿಸಿಯು ಪಾಲಿಸಿದಾರ ಹಾಗೂ ಮಗಳ ವಯಸ್ಸನ್ನು ಅವಲಂಬಿಸಿರುತ್ತದೆ.