Technical Guruji ಖ್ಯಾತಿಯ ಗೌರವ್ ಚೌಧರಿ ಅಂಜನಾದ್ರಿಗೆ ಭೇಟಿ!
ಭಾರತದ ನಂಬರ್ ಒನ್ ಯುಟ್ಯೂಬರ್, 'ಟೆಕ್ನಿಕಲ್ ಗುರೂಜಿ' ಎಂದೇ ಖ್ಯಾತಿ ಪಡೆದಿರುವ ಗೌರವ್ ಚೌಧರಿ ಇಂದು ಹನುಮಂತನ ಜನ್ಮಸ್ಥಳ ಕರ್ನಾಟಕದ ಅಂಜನಾದ್ರಿ ಬೆಟ್ಟಕ್ಕೆ ಸದ್ದಿಲ್ಲದೆ ಭೇಟಿ ನೀಡಿದ್ದಾರೆ.
Technical Guruji Gaurav Chaudhary visit Anjanadri Hill: ಭಾರತದ ನಂಬರ್ ಒನ್ ಯುಟ್ಯೂಬರ್, 'ಟೆಕ್ನಿಕಲ್ ಗುರೂಜಿ' ಎಂದೇ ಖ್ಯಾತಿ ಪಡೆದಿರುವ ಗೌರವ್ ಚೌಧರಿ ಇಂದು ಹನುಮಂತನ ಜನ್ಮಸ್ಥಳ ಕರ್ನಾಟಕದ ಅಂಜನಾದ್ರಿ ಬೆಟ್ಟಕ್ಕೆ ಸದ್ದಿಲ್ಲದೆ ಭೇಟಿ ನೀಡಿದ್ದಾರೆ.
ಹನುಮ ಭಕ್ತ ಟೆಕ್ನಿಕಲ್ ಗುರೂಜಿ:
ಟೆಕ್ನಿಕಲ್ ಗುರೂಜಿ ಖ್ಯಾತಿಯ ಗೌರವ್ ಚೌಧರಿ ಓರ್ವ ಹನುಮ ಭಕ್ತರಾಗಿದ್ದಾರೆ. ಈ ಬಗ್ಗೆ ಇನ್ಸ್‌ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದು, 'ಇಂದು ಕರ್ನಾಟಕದ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮ ದೇವರ ಜನ್ಮಸ್ಥಳಕ್ಕೆ ಭೇಟಿ ನೀಡುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಪವಿತ್ರ ಪರ್ವತವನ್ನು ಹತ್ತುವುದು ನನಗೆ ಒಂದು ವಿಶೇಷ ಅನುಭವವಾಗಿತ್ತು, ಪ್ರತಿ ಮೆಟ್ಟಿಲು ಹತ್ತುವಾಗಲೂ ನಾನು ನನ್ನ ಆರಾಧ್ಯ ದೇವರಾಗಿರುವ ಭಗವಾನ್ ಹನುಮಂತನಿಗೆ ಹತ್ತಿರವಾಗುತ್ತಿರುವಂತೆ ವಿಶೇಷ ಶಕ್ತಿಯ ಅನುಭವವಾಯಿತು. ಅಂಜನಾದ್ರಿಗೆ ಭೇಟಿ ನೀಡಿರುವುದು ನನ್ನೊಳಗೆ ಅದ್ಭುತವಾದ ಆಧ್ಯಾತ್ಮಿಕ ಶಕ್ತಿಯನ್ನು ತುಂಬಿದೆ. ಮತ್ತು ಈ ಅದ್ಭುತ ಅನುಭವವು ನನ್ನ ಧರ್ಮ ಮತ್ತು ಭಗವಾನ್ ಹನುಮಾನ್ ಜಿಗೆ ಇನ್ನಷ್ಟು ಸಮರ್ಪಿತ ಮತ್ತು ಕೃತಜ್ಞತೆಯನ್ನುಂಟು ಮಾಡಿದೆ. ಜೈ ಬಜರಂಗಬಲೀ! ಜೈ ಶ್ರೀ ರಾಮ್ ಎಂದು ಬರೆದುಕೊಂಡಿದ್ದಾರೆ.
ಯಾರು ಈ ಟೆಕ್ನಿಕಲ್ ಗುರೂಜಿ?
ಭಾರತೀಯ ಮೂಲದ ಯುಎಇ ನಿವಾಸಿಯಾಗಿರುವ ಗೌರವ್ ಚೌಧರಿ ಅವರು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಮಾಡುವುದರಲ್ಲಿ ಫೇಮಸ್ ಆಗಿದ್ದಾರೆ. ಅವರು ಶ್ರೀಮಂತ ಯುಟ್ಯೂಬರ್ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಯುಟ್ಯೂಬ್‌ನಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಇದ್ದಾರೆ. ಇನ್ನು ಅವರ ಇನ್ಸ್‌ಟಾಗ್ರಾಮ್ ಬರೋಬ್ಬರಿ 6.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ, ಟ್ವಿಟರ್‌ನಲ್ಲಿ 3.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಒಂದು ಅಂದಾಜಿನ ಪ್ರಕಾರ ಯುಟ್ಯೂಬ್ ವಿಡಿಯೋಗಳಿಂದಲೇ ಅವರ ಆದಾಯ ಬರೋಬ್ಬರಿ 326 ಕೋಟಿ ರೂಪಾಯಿಗೂ ಅಧಿಕವಾಗಿದೆ. ರೋಲ್ಸ್ ರಾಯ್ಸ್ ಘೋಸ್ಟ್, ಮೆಕ್‌ಲಾರೆನ್ ಜಿಟಿ ಮತ್ತು ಮರ್ಸಿಡಿಸ್ ಬೆಂಜ್ ಜಿ-ಕ್ಲಾಸ್‌ನಂತಹ ಅತ್ಯಂತ ದುಬಾರಿ ಬೆಲೆಯ ಕಾರುಗಳಿಂದ ಇಡಿದು, ಮಹೀಂದ್ರ ಥಾರ್‌ನಂತಹ ಸಾಮಾನ್ಯ ಕಾರುಗಳನ್ನು ಹೊಂದಿದ್ದಾರೆ.