Asianet Suvarna News Asianet Suvarna News

Dr Sharada Menon No More: ಭಾರತದ ಮೊದಲ ಮನೋವೈದ್ಯೆ ಶಾರದಾ ಮೆನನ್‌ ನಿಧನ

ಭಾರತದ ಮೊದಲ ಮಹಿಳಾ ಮನೋವೈದ್ಯೆ ನಿಧನ
ಚೆನ್ನೈನಲ್ಲಿ ನಿಧನರಾದ ಶಾರದಾ ಮೆನನ್‌(98)
ಮಂಗಳೂರಿನಲ್ಲಿ ಹುಟ್ಟಿ, ಮದ್ರಾಸ್‌ನಲ್ಲಿ ಶಿಕ್ಷಣ ಪಡೆದಿದ್ದ ಶಾರದಾ

Indias first woman psychiatrist Sarada Menon passed away akb
Author
Bangalore, First Published Dec 6, 2021, 12:13 PM IST

ಚೆನ್ನೈ(ಡಿ.6): ಭಾರತದ ಮೊದಲ ಮಹಿಳಾ ಮನೋವೈದ್ಯೆ ಎಂಬ ಹೆಗ್ಗಳಿಕೆ ಗಳಿಸಿದ್ದ ಶಾರದಾ ಮೆನನ್‌ ಭಾನುವಾರ ಚೆನ್ನೈನಲ್ಲಿ ನಿಧನರಾಗಿದ್ದು, ಅವರಿಗೆ 98 ವರ್ಷ ವಯಸ್ಸಾಗಿತ್ತು. ಇವರು ಮಾನಸಿಕ ಆರೋಗ್ಯ ಸಂಸ್ಥೆ(Institute of Mental Health)ಗೆ ದೀರ್ಘಾಕಾಲದರೆಗೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಶಾರದಾ ಮೆನನ್‌ ಹುಟ್ಟಿದ್ದು ಮಂಗಳೂರಿನಲ್ಲಿ, ವಿದ್ಯಾಭ್ಯಾಸ ಮಾಡಿದ್ದು, ಚೆನ್ನೈನಲ್ಲಿ. ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದ ಶಾರದಾ ಅವರು, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ  ಸಂಸ್ಥೆ(National Institute of Mental Health and Neuro Sciences)ಯಲ್ಲಿ ತಮ್ಮ ಮನೋವೈದ್ಯಕೀಯ ತರಬೇತಿಯನ್ನು ಪಡೆದರು.

ಇವರು ದೇಶದ ಮೊದಲ ಮಹಿಳಾ ಮನೋವೈದ್ಯೆಯಾಗಿದ್ದು, ಇವರು ಸಲ್ಲಿಸಿದ ಸೇವೆಗಾಗಿ 1992ರಲ್ಲಿ ಇವರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು 1984 ರಲ್ಲಿ ಮತ್ತೊಬ್ಬ ಮನೋವೈದ್ಯೆ ಆರ್. ತಾರಾ(R.Thara) ಅವರೊಂದಿಗೆ ಸ್ಕಿಜೋಫ್ರೇನಿಯಾ ಸಂಶೋಧನಾ ಪ್ರತಿಷ್ಠಾನವನ್ನು (SCARF India) ಸ್ಥಾಪಿಸಿದರು. ಶಾರದಾ ಸಾವಿನಿಂದ ನಮ್ಮ ಜೀವನದಲ್ಲಿ ದೊಡ್ಡ ಶೂನ್ಯ ಆವರಿಸಿದೆ. ನನಗೆ 1978 ರಿಂದಲೂ ಶಾರದಾ ಅವರ ಪರಿಚಯಿವಿದೆ. 35 ವರ್ಷಗಳ ಕಾಲ ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ನಮಗೆಲ್ಲರಿಗೂ ಅವರು ಮಾದರಿಯಾಗಿದ್ದಲ್ಲದೇ ಸ್ಫೂರ್ತಿಯಾಗಿದ್ದರು. ಮನುಷ್ಯರು ಹಲವು ಹಂತಗಳಲ್ಲಿರುತ್ತಾರೆ. ಮೂರು ತಿಂಗಳ ಹಿಂದಿನವರೆಗೂ ಅವರು ತಮ್ಮ ಆಸಕ್ತಿ ಹಾಗೂ ಮಾನಸಿಕ ಅಸ್ವಸ್ಥರ ಪುನರ್ವಸತಿ ಬಗ್ಗೆ ಮಾತನಾಡುತ್ತಿದ್ದರು ಎಂದು ತಾರಾ ತಮ್ಮ ಹಾಗೂ ಶಾರದಾ ನಡುವಿನ ಬಾಂಧವ್ಯವನ್ನು ಮೆಲುಕು ಹಾಕಿದರು. 

woman on wheels: ಟ್ಯಾಂಕರ್‌ ಓಡ್ಸೋ 25ರ ಬರ್ಕತ್‌ ನಿಶಾ

ಆತ್ಮಹತ್ಯಾ ತಡೆಗೆ ಶ್ರಮಿಸುತ್ತಿರುವ ಸ್ನೇಹ( founder of Sneha)ಸಂಸ್ಥೆಯ ಸಂಸ್ಥಾಪಕಿಯಾಗಿರುವ ಹಾಗೂ ಡಾ.ಶಾರದಾ ಮೆನನ್ ಅವರ ವಿದ್ಯಾರ್ಥಿನಿಯೂ ಆಗಿರುವ ಲಕ್ಷ್ಮಿ ವಿಜಯಕುಮಾರ್(Lakshmi Vijayakumar) ಮಾತನಾಡಿ ಶಾರದಾ ಅವರದು ಅಪರೂಪದ ವ್ಯಕ್ತಿತ್ವ ಎಂದು ಬಣ್ಣಿಸಿದರು.  ಲಕ್ಷ್ಮಿ ವಿಜಯ್‌ಕುಮಾರ್‌ ವಿದ್ಯಾರ್ಥಿಯಾಗಿದ್ದ ವೇಳೆ  ಡಾ. ಶಾರದಾ ಮೆನನ್ ನಿವೃತ್ತರಾಗಿದ್ದರಂತೆ  ಆದರೂ ಮನೋವೈದ್ಯಶಾಸ್ತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು  ಲಕ್ಷ್ಮಿ ನೆನಪಿಸಿಕೊಂಡರು.

ಇಂದು ತಮಿಳುನಾಡು(Tamil Nadu) ಮನೋವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿ ನಿಂತಿದ್ದರೆ ಅದಕ್ಕೆ ಶಾರದಾ ಅವರೇ ಕಾರಣ. ಅವರೊಬ್ಬ ಅದ್ಭುತ ಶಿಕ್ಷಕರು  ಹಾಗೂ ಹೊಸ ವಿಷಯಗಳನ್ನು ಕಲಿಯುವ ಅವರ ಉತ್ಸಾಹವು ಅಸಾಧಾರಣವಾಗಿದೆ. ಕಳೆದ ತಿಂಗಳು ಕೂಡ ಅವರು ಇತ್ತೀಚಿನ ಸಂಶೋಧನಾ ವಿಚಾರಗಳ  ಬಗ್ಗೆ ತಿಳಿದುಕೊಳ್ಳಲು ಬಯಸಿದ್ದರು ಎಂದು ಲಕ್ಷ್ಮಿ ಹೇಳಿದರು. ಅಲ್ಲದೇ ಸಭೆಯೊಂದನ್ನು ಆಯೋಜಿಸಲು ನನ್ನ ಸ್ನೇಹಿತರೊಬ್ಬರಿಗೆ ಹೇಳಿದ್ದ ಶಾರದಾ ಅವರು ನಂತರ ಆ ಸಭೆಯಲ್ಲಿ ಭಾಗವಹಿಸಿದ್ದರು. ಅವರಿಗೆ ಹೊಸ ವಿಚಾರಗಳ ಬಗ್ಗೆ ಕಲಿಯಬೇಕು ಎಂಬ ಯೋಚನೆ ಬಂದರೆ  ಅವರು ಯಾರ ಬಳಿಗೆ ಬೇಕಾದರು ಹೋಗಿ ಕಲಿಯುತ್ತಾರೆ.  ನಾನು ಅವರಿಂದ ಕಲಿತಿರುವುದು ನನಗೆ ಹೆಮ್ಮೆ ಎಂದು ಲಕ್ಷ್ಮಿ ಹೇಳಿದರು. 

Shocking News of Pregnancy: ಬದಲಾದ ಭಾರತದಲ್ಲಿ 15ರ ಹರೆಯದಲ್ಲೇ ಹೆಚ್ಚಾಗ್ತಿದೆ ಗರ್ಭಧಾರಣೆ!

ರೋಗಿಗಳ ಯೋಗಕ್ಷೇಮದ ಬಗ್ಗೆ ಮೊದಲು ಚಿಂತಿಸುವ ಮೆನನ್‌, ತೀವ್ರವಾಗ ಚಿಕಿತ್ಸಾ ಬುದ್ಧಿವಂತಿಕೆಯನ್ನು ಹೊಂದಿದ್ದರು. ಕೇವಲ 5 ನಿಮಿಷ ರೋಗಿಯ ಜೊತೆ ಮಾತನಾಡಿದರೆ ಸಾಕು ಅವರಿಗೆ ರೋಗ ಏನು ಎಂಬುದು ತಿಳಿಯುತ್ತಿತ್ತು. ತುಂಬಾ ವಿನಮ್ರ ನಡವಳಿಕೆಯ ಅವರು ಎಲ್ಲರ ಬಗ್ಗೆ ಆಳವಾಗಿ ಅರಿತುಕೊಂಡಿದ್ದರು. ವೈದ್ಯಕೀಯ ಸೇವೆ ಹಾಗೂ ಆಡಳಿತ ಸೇವೆ ಎರಡರಲ್ಲೂ ಸರ್ವಶ್ರೇಷ್ಠರೆನಿಸಿದ್ದು, ಇಂತಹ ವ್ಯಕ್ತಿ ಸಿಗುವುದು ಬಲು ಅಪರೂಪ ಎಂದು ಶಾರದಾ ಮೆನನ್‌ ಅವರ ವಿದ್ಯಾರ್ಥಿಗಳು ಹೇಳಿದ್ದಾರೆ. 

ಇಂದಿನ ಜೀವನಕ್ರಮದಿಂದಾಗಿ ಅನೇಕ ಮಂದಿ ಮಾನಸಿಕ ಒತ್ತಡದಿಂದ ಕಿನ್ನತೆಗೆ ಒಳಗಾಗುತ್ತಿದ್ದಾರೆ. ಹೆಚ್ಚಾಗಿ ನಾವೆಲ್ಲರೂ ದೈಹಿಕ ಆರೋಗ್ಯದ ಕಡೆ ಮಾತ್ರ ಗಮನಹರಿಸುತ್ತೇವೆ. ಇದು ಸಹಜ ಕೂಡ.  ಆರೋಗ್ಯವೆಂದರೆ ನಾವು ತಿಳಿಯುವುದು ದೈಹಿಕ ಆರೋಗ್ಯ ಮಾತ್ರ. ಆದರೆ ಮಾನಸಿಕ ಆರೋಗ್ಯವು ಸರಿಯಾಗಿ ಇರದೆ ಇದ್ದರೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವು ಸರಿಯಾಗಿದ್ದರೆ ಮಾತ್ರ ಮನುಷ್ಯನ ಜೀವನವು ಸುಖಕರವಾಗಿ ಇರಲು ಸಾಧ್ಯ.

Follow Us:
Download App:
  • android
  • ios