woman on wheels: ಟ್ಯಾಂಕರ್‌ ಓಡ್ಸೋ 25ರ ಬರ್ಕತ್‌ ನಿಶಾ

ಸ್ತ್ರೀ ಪುರುಷರ ನಡುವಿನ ಲಿಂಗಾಸಮಾನತೆಯ ಹೊರತಾಗಿಯೂ ಸ್ತ್ರೀಯರು ಇಂದು ಅಡುಗೆ ಮನೆಯಿಂದ ಹೊರಬಂದು ಬಾಹ್ಯಾಕಾಶ  ಕ್ಷೇತ್ರದವರೆಗೂ ಕಾಲಿರಿಸಿದ್ದಾರೆ. ಇಂದು ಸ್ತ್ರೀ ಕೈಯಾಡಿಸದ ಕ್ಷೇತ್ರವಿಲ್ಲ. ಹೌದು ಕೇರಳದ  ಒಂದು ಮಗುವಿನ ತಾಯಿಯಾಗಿರುವ 25 ವರ್ಷದ ಬರ್ಕತ್‌  ಪೆಟ್ರೋಲಿಯಂ ಟ್ಯಾಂಕರ್‌ಗಳನ್ನು ಓಡಿಸಲು ಸಿದ್ಧವಾಗಿದ್ದು, ಇದಕ್ಕೆ ಕೇವಲ ಒಂದು ಹೆಜ್ಜೆಯಷ್ಟೇ ಬಾಕಿ ಇದೆ. 

25 year old to be second woman in Kerala to drive tanker lorries akb

ಪಲಕಾಡ್‌(ಡಿ.5): ಪೆಟ್ರೋಲ್‌ ಟ್ಯಾಂಕರ್ ಸೇರಿದಂತೆ ಭಾರೀ ವಾಹನಗಳನ್ನು ಓಡಿಸುವುದಕ್ಕೆ ಕೆಲವು ಪುರುಷರೇ ಹಿಂದೇಟು ಹಾಕುತ್ತಾರೆ. ಅಂತಹದರಲ್ಲಿ ಈ ಹೆಣ್ಣು ಮಗಳೊಬ್ಬಳು ಪೆಟ್ರೋಲಿಯಂ ಟ್ಯಾಂಕರ್‌ ಓಡಿಸುವುದಕ್ಕೆ ಸಿದ್ಧಳಾಗಿದ್ದಾಳೆ. ಹೆಸರು ಬರ್ಕತ್‌ ನಿಶಾ(Barkath Nisha)ಕೇರಳದ ನಾಗಲಸ್ಸೆರಿ(Nagalassery) ಪಂಚಾಯತ್‌ನ ಕಿಲಿವಲಕುನ್ನು(Kilivalankunnu) ನಿವಾಸಿಯಾಗಿರುವ ಈಕೆ ಮುಸ್ಲಿಂ ಸಮುದಾಯದಿಂದ ಬಂದಿರುವಂತಹ ದಿಟ್ಟ ಮಹಿಳೆ. ಈಕೆ ಈಗಾಗಲೇ ಅಪಾಯಕಾರಿ ವಾಹನಗಳ ಚಾಲನೆಯ ಲೈಸೆನ್ಸ್‌ ಪಡೆದಿದ್ದು, ಚಾಲಿಸ್ಸೆರಿ(Chalissery) ಪೊಲೀಸ್ ಠಾಣೆಯಿಂದ ಪಾಸ್‌ಗಾಗಿ ಕಾಯುತ್ತಿದ್ದಾರೆ.

ಕೆಲವು ಕುಟುಂಬಗಳಲ್ಲಿ ಬಡತನದ ಕಾರಣಕ್ಕೆ ಹೆಣ್ಣು ಮಕ್ಕಳು ಪುರುಷರು ಮಾಡುವ ಕೆಲಸವನ್ನು ಮಾಡುವ ಮೂಲಕ ಬದುಕಿನಲ್ಲಿ ಯಶಸ್ಸು ಕಂಡವರಿದ್ದರೆ. ಆದರೆ ಬರ್ಕತ್‌ ನಿಶಾಗೆ ಇದು ಅನಿವಾರ್ಯತೆಯೂ ಹೌದು , ಅತೀವವಾದ ಆಸಕ್ತಿಯೂ ಹೌದು, ವಾಹನಗಳ ಚಾಲನೆ ಮೇಲಿನ ಹುಚ್ಚು ವ್ಯಾಮೋಹದಿಂದ ಈಕೆಯ ಕೈ ಭಾರಿ ವಾಹನಗಳ ಸ್ಟೇರಿಂಗ್‌ ಮೇಲೆ ಆಟವಾಡುತ್ತಿದೆ. ಇದರೊಂದಿಗೆ ಇವರು ಭಾರಿ ವಾಹನ ಚಾಲನೆ ಮಾಡುವ ಕೇರಳದ 2ನೇ ಸ್ತ್ರೀ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದಕ್ಕೂ ಮೊದಲು ತ್ರಿಶೂರ್‌(Thrissur)ನ ಕಂಡಸ್ಸಂಕಡವು ನಿವಾಸಿ ಡೆಲಿಶಾ ಡೀವಿಸ್‌( Delisha Davis) ಈಗಾಗಲೇ ಭಾರಿ ವಾಹನಗಳ ಚಾಲನೆ ಮಾಡುತ್ತಿದ್ದಾರೆ. 

women empowerment: ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಒಡಿಶಾದ ಆಶಾ ಕಾರ್ಯಕರ್ತೆ

ತಾನು ಚಾಲಿಸ್ಸೆರಿ ಠಾಣೆಯಿಂದ ಒಪ್ಪಿಗೆ ಪತ್ರಕ್ಕಾಗಿ ಕಾಯುತ್ತಿದ್ದೇನೆ. ಒಪ್ಪಿಗೆ ಪತ್ರ ಸಿಕ್ಕ ಕೂಡಲೇ ನಾನು ಇದನ್ನು ಕೊಚ್ಚಿಯಲ್ಲಿರುವ ತೈಲ ಮಾರುಕಟ್ಟೆ ಕಂಪನಿ(OMC)ಗೆ ಕಳುಹಿಸಿ ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಗೆ ಅನುಮತಿ ಪಡೆಯುವೆ ಎಂದು ಬರ್ಕತ್‌ ನಿಶಾ ಹೇಳುತ್ತಾರೆ. ನಾನು ನನ್ನ 14ನೇ ವಯಸ್ಸಿಗೆ ನನ್ನ ಅಣ್ಣನ ಮೋಟರ್‌ ಸೈಕಲ್‌ ಓಡಿಸಲು ಆರಂಭಿಸಿದೆ. ಅಲ್ಲದೇ ನಾನು ಅದಕ್ಕಿಂತಲೂ ಸಣ್ಣವಳಿದ್ದಾಗಲೂ ವಾಹನಗಳನ್ನು ಸ್ಟ್ಯಾಂಡ್‌ ಅಲ್ಲಿರಿಸಿ ಕಿಕ್‌ಸ್ಟಾರ್ಟ್‌ ಮಾಡಲು ಪ್ರಯತ್ನಿಸುತ್ತಿದ್ದೆ. ಅದು ಆಟೋರಿಕ್ಷಾವೇ ಆಗಿರಲಿ ಅಥವಾ ಕಾರು, ಲಾರಿಯೇ ಆಗಿರಲಿ, ವಾಹನ ಚಾಲನೆಯ ಯಾವುದೇ ಅವಕಾಶವನ್ನು ಬಿಟ್ಟು ಬಿಡಲು ನಾನು ಸಿದ್ಧಳಿರಲಿಲ್ಲ. ಕೊನೆಗೂ ಈ ವರ್ಷದ ನವಂಬರ್‌ 10ರಂದು ನನ್ನ ಕಿರಿಯ ಸಹೋದರ ನಿಶಾದ್‌ ಹಾಗೂ ನಾನು ಎರ್ನಾಕುಲಂ(Ernakulam)ನಲ್ಲಿ ತರಬೇತಿ ಮುಗಿಸಿ  ಭಾರಿ ವಾಹನಗಳ ಚಾಲನಾ ಪರವಾನಗಿಯನ್ನು  ಪಡೆಯುವಲ್ಲಿ ಯಶಸ್ವಿಯಾದೆವು ಎಂದು ಬರ್ಕತ್‌ ಹೇಳುತ್ತಾರೆ. 

ಪ್ರಸ್ತುತ ಸಹೋದರ ನಿಶಾದ್‌ ಜೊತೆ ಬರ್ಕತ್‌, ಕಡಿಮೆ ದೂರದ ಪ್ರದೇಶಗಳಿಗೆ  ಟೌರಸ್‌ ಲಾರಿಗಳನ್ನು ಓಡಿಸುತ್ತಾರೆ. ಆದರೆ ಟ್ಯಾಂಕರ್ ಲಾರಿಗಳನ್ನು ಓಡಿಸುವುದು ನನ್ನ ಗುರಿಯಾಗಿದೆ. ಒಎಂಸಿ ಅಧಿಕಾರಿಗಳ ಸಹಾಯದೊಂದಿಗೆ ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾನು ದಿನಾ ಸಂಚರಿಸಲಿದ್ದೇನೆ ಎಂದು ತುಂಬು ವಿಶ್ವಾಸದಿಂದ ಉತ್ತರಿಸುತ್ತಾರೆ ಬರ್ಕತ್‌. 

Women Empowerment: ವರದಕ್ಷಿಣೆ ಹಣದಲ್ಲಿ ಹಾಸ್ಟೆಲ್‌ ನಿರ್ಮಿಸಿ ಎಂದ ಮಗಳು, ಖಾಲಿ ಚೆಕ್‌ ಕೊಟ್ಟ ಅಪ್ಪ
ಇಂತಹ ಸಾಧನೆಯ ಹಿಂದೆ ನೋವಿನ ಕತೆಯೂ ಇದೆ. ಬರ್ಕತ್‌ ಪತಿ ಆಕೆಯನ್ನು ಬಿಟ್ಟು ಹೋಗಿದ್ದು, 5 ವರ್ಷದ ಒಂದು ಹೆಣ್ಣು ಮಗುವಿದೆ.  ತಂದೆ ಅಬ್ದುಲ್ ಹಮೀದ್‌ ನಿಧನರಾಗಿದ್ದು,  ದಿನಗೂಲಿ ಮಾಡುತ್ತಿದ್ದರು. ಅವರ ನಿಧನದ ನಂತರ, ಅವರ ತಮ್ಮ ತಾಯಿ ಹಫ್ಜತ್ ತಮ್ಮ ನಾಲ್ಕು ಮಕ್ಕಳನ್ನು ಬೆಳೆಸಲು ಸಾಕಷ್ಟು ಹೆಣಗಾಡಿದ್ದರು ಎಂದು ತಮ್ಮ ಕಷ್ಟದ ದಿನಗಳನ್ನು ನೆನೆಯುತ್ತಾರೆ ಬರ್ಕತ್‌. ಸ್ಥಳೀಯ ಪಂಚಾಯತ್‌ನ ನೆರವಿನಿಂದ ನಾವು ರೂಪಾಯಿ 35,000 ದಲ್ಲಿ ಮನೆ ನಿರ್ಮಿಸಿದ್ದು, ನನ್ನ ತಾಯಿ, ಸಹೋದರ ನಿಶಾದ್‌ ಹಾಗೂ ನನ್ನ 5 ವರ್ಷದ ಮಗಳು ಆಯಿಷಾ ನಸ್ಸರ್‌ ಜೊತೆ ನಾನು ವಾಸ ಮಾಡುತ್ತಿದ್ದು, ನನ್ನ ಅಕ್ಕ ಹಾಗೂ ಅಣ್ಣನಿಗೆ ಮದುವೆಯಾಗಿದ್ದು, ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂದು ತಮ್ಮ ಕುಟುಂಬದ ಬಗ್ಗೆ ಹೇಳುತ್ತಾರೆ ಬರ್ಕತ್‌. 

ನಾವು ಸಂಪ್ರದಾಯಬದ್ಧ ಕುಟುಂಬದಿಂದ ಬಂದವರು ಹಾಗಾಗಿ ನನಗೂ ಚಾಲನೆಯನ್ನು ವೃತ್ತಿಯಾಗಿಸುವುದಕ್ಕೆ ಪ್ರಾರಂಭದಲ್ಲಿ ಮನೆಯಲ್ಲಿ ವಿರೋಧವಿತ್ತು. ಆದರೆ ಆ ವಿರೋಧವನ್ನೆಲ್ಲಾ ಗೆದ್ದು ಕೊನೆಗೂ ವಾಹನ ಚಾಲನೆಯ ಕೆಲಸಕ್ಕಿಳಿದ್ದಿದ್ದೇನೆ. ಈಗ ನಾನು ಕೆಲಸಕ್ಕೆ ಹೋದಾಗ ನನ್ನ ತಾಯಿ ನನ್ನ ಮಗುವನ್ನು ನೋಡಿಕೊಳ್ಳುತ್ತಾರೆ ಎನ್ನುತ್ತಾರೆ ಬರ್ಕತ್‌. ಈ ಹಾದಿಯಲ್ಲಿ ನನಗೆ ತುಂಬಾ ಜನ ಸಹಾಯ ಮಾಡಿದ್ದಾರೆ ಎಂದು ನೆನೆಯುತ್ತಾರೆ ಬರ್ಕತ್‌, ಮೈನಾ ಕನ್ಸ್‌ಟ್ರಕ್ಷನ್‌(Myna constructions)ನ ಮಾಲೀಕರಾದಂತಹ ಆಶ್ರಫ್‌(Ashraf) ಹಾಗೂ ಮೊದಲ ಬಾರಿಗೆ ಟೌರಸ್‌ ಗಡಿಯನ್ನು ನನ್ನ ಕೈಗಿತ್ತ ಚಾಲಕ ರಂದೀಪ್‌(Randheep), ಲಲ್ಲಾಲಮ್‌ ಟ್ರಾವೆಲ್ಸ್‌ನ ಶಾಜಿ ಮುಂತಾದವರೆಲ್ಲರೂ  ನನ್ನ ಮೇಲೆ ನಂಬಿಕೆ ಇರಿಸಿ ಅವರ ವಾಹನವನ್ನು ಕೈಗಿತ್ತಿದ್ದಾರೆ. 

ಅದೇ ರೀತಿ ನನ್ನ ಜೀವ ನಿರ್ವಹಣೆಯ ಕಷ್ಟವನ್ನು ಅರಿತು ಕ್ಯಾಲಿಕಟ್‌(Calicut) ಚಾಲನಾ ತರಬೇತಿ ಶಾಲೆಯ ಧನಂಜಯನ್‌(Dhananjayan), ಎವರ್‌ ಸೇಫ್‌ ಟ್ರೈನಿಂಗ್‌ ಸೆಂಟರ್‌ನ ನಂದಗೋಪಾಲ್‌(Nandagopal) ನನಗೆ ಭಾರಿ ನೆರವು ನೀಡಿದರು. ಇವರೆಲ್ಲರಿಗೂ ನಾನು ಯಾವಾಗಲೂ ಋಣಿಯಾಗಿರುವೆ ಎಂದು ಹೇಳುತ್ತಾರೆ ಬರ್ಕತ್‌.

Latest Videos
Follow Us:
Download App:
  • android
  • ios