ಕಾರಿಗೆ ಗುದ್ದುವ ಮುನ್ನ ಇಲ್ನೋಡಿ ಸ್ವಾಮಿ! ಇನ್ನೂ ಇಎಂಐ ಬಾಕಿಯಿದೆ!

ಒಬ್ಬ ವ್ಯಕ್ತಿ ತನ್ನ ಹೊಸ ಕಾರಿನ ಹಿಂಬದಿಯ ಗಾಜಿನ ಮೇಲೆ 'ದಯವಿಟ್ಟು ಅಂತರ ಕಾಯ್ದುಕೊಳ್ಳಿ, ಇನ್ನೂ ಇಎಂಐ ಬಾಕಿಯಿದೆ' ಎಂದು ಬರೆದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Indian Yellow board Car Owner message EMI due on back glass post goes viral sat

ಬೆಂಗಳೂರು (ನ.10): ಸಾಮಾಜಿಕ ಜಾಲತಾಣದಲ್ಲಿ ಏನೆಲ್ಲಾ ವಿಚಾರಗಳು ವೈರಲ್ ಆಗುತ್ತಿವೆ ಎಂಬುದೇ ಗೊತ್ತಿಲ್ಲ. ಇಲ್ಲೊಬ್ಬ ವ್ಯಕ್ತಿ ತಾನು ಹೊಸದೊಂದು ಕಾರನ್ನು ತೆಗೆದುಕೊಂಡು ಅದನ್ನು ಓಡಿಸುತ್ತಿರುವಾಗ ಇತರೆ ವಾಹನ ಸವಾರರಿಗೆ ಒಂದು ಮನವಿ ಮಾಡಿಕೊಂಡಿದ್ದಾರೆ. ಗುದ್ದುವ ಮುನ್ನ ಇಲ್ನೋಡಿ, ದಯವಿಟ್ಟು ಅಂತರ ಕಾಯ್ದುಕೊರ್ಲಲೀ, ಇನ್ನೂ ಇಎಂಐ ಬಾಕಿಯಿದೆ' ಎಂದು ಕಾರಿನ ಹಿಂಬದಿಯ ಗಾಜಿನ ಮೇಲೆ ಬರೆದಿದ್ದಾನೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಹಸ್‌ನಾಮತ್‌ಭಾಯ್ (@HasnaMatBhai) ಎಂಬ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಸ್ವಿಪ್ಟ್ ಕಾರಿನ ಹಿಂಬದಿಯ ಭಾಗದ ಕಾರಿನ ಗಾಜಿನ ಮೇಲೆ ಗುದ್ದುವವರೇ ನೋಡಿ.. (Maaro Deekro..) ಎಂದು ಬರೆದುಕೊಂಡಿದ್ದಾರೆ. ಅದರ ಕೆಳಭಾಗದ ಹಿಂಬದಿಯ ಡಿಕ್ಕಿ ಬಾನೆಟ್‌ ಮೇಲೆ 'ದಯವಿಟ್ಟು ಅಂತರ ಕಾಯ್ದುಕೊಳ್ಳಿ, ಇನ್ನೂ ಇಎಂಐ ಬಾಕಿಯಿದೆ' (Keep Distance EMI is pending!)ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ 21.32 ಕೋಟಿ ರು. ಮೌಲ್ಯದ 35 ಆಸ್ತಿ ವಕ್ಫ್ ಬೋರ್ಡ್‌ ವಶಕ್ಕೆ!

ಈ ಪೋಸ್ಟ್ 3.9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು, 12 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. 700ಕ್ಕೂ ಅಧಿಕ ಜನರು ಇದನ್ನು ರಿಪೋಸ್ಟ್ ಮಾಡಿಕೊಂಡಿದ್ದಾರೆ. ಜೊತೆಗೆ ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಈ ಪೈಕಿ ಬಹುತೇಕರು' ನೀವು ಹೇಳಿದ್ದು ಸರಿಯಾಗಿದೆ. ನೀವು ಹೇಳಿದ್ದನ್ನು ಇಲ್ಲಿ ಗಂಭೀರವಾಗಿ ಆಲೋಚನೆ ಮಾಡಲೇಬೇಕು. ನೀವು ಅತ್ಯಂತ ಪ್ರಾಮಾಣಿಕ ಕಾರಿನ ಮಾಲೀಕ' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕಾರಿನ ಇಎಂಐ ಎನ್ನುವುದು ಅತಿದೊಡ್ಡ ಟೆನ್ಷನ್ ಎಂದು ಹೇಳಿದ್ದಾರೆ. ಇದರಲ್ಲಿ ಒಬ್ಬ 'ನೀವು ನಿಮ್ಮ ಕಾರಿಗೆ ಇನ್ಸೂರೆನ್ಸ್ ಮಾಡಿಸಿ' ಎಂದು ಸಲಹೆ ಕೊಟ್ಟಿದ್ದಾರೆ. ಮತ್ತೊಬ್ಬ 'ಇಎಂಐ ಕಟ್ಟುವುದು ಮುಕ್ತಾಯಗೊಂಡ ನಂತರ ನಿಮ್ಮ ಕಾರಿಗೆ ಗುದ್ದಬಹುದೇ' ಎಂದು ಕಾಮೆಂಟ್ ಮೂಲಕ ಕಾರಿನ ಮಾಲೀಕನಿಗೆ ಪ್ರಶ್ನೆ ಮಾಡಿದ್ದಾರೆ.

ನಾವು ನೀವೆಲ್ಲರೂ ಸಾಮಾನ್ಯವಾಗಿ ಆಟೋಗಳ ಹಿಂದೆ ಹಾಗೂ ಕಾರುಗಳ ಹಿಂದೆ ಬರೆದಿರುವ ಸಾಲುಗಳನ್ನು ನೋಡಿದರೆ ಇವರೊಬ್ಬ ದೊಡ್ಡ ವೇದಾಂತಿಯೇ ಆಗಿರಬೇಕು ಎಂದುಕೊಳ್ಳುವಂತೆ ಸಂದೇಶಗಳನ್ನು ಬರೆದುಕೊಂಡಿರುತ್ತಾರೆ. ಅವುಗಳಲ್ಲಿ ಕೆಲವರು ಜೀವನಕ್ಕೆ ಸಂಬಂಧಪಟ್ಟ, ಇನ್ನು ಕೆಲವರು ಪ್ರೀತಿ ಪ್ರೇಮ, ಮತ್ತೆ ಕೆಲವರು ಕುಟುಂಬ ಮತ್ತು ತಂದೆ-ತಾಯಿ, ಮತ್ತೆ ಕೆಲವರು ಕನ್ನಡ ಭಾಷೆ, ನಾಡು-ನುಡಿ ಬಗ್ಗೆ ಜೊತೆಗೆ ಸಾಹಿತ್ಯದ ಸಾಲುಗಳನ್ನು ಕೂಡ ಬರೆದುಕೊಂಡಿರುತ್ತಾರೆ. ಅವುಗಳನ್ನು ಓದಿದ ತಕ್ಷಣ ನಮ್ಮ ಮುಖದಲ್ಲೊಂದು ನಗು ಬಂದು ಸುಮ್ಮನಾಗುವುದಂತೂ ಸತ್ಯ. ಒಂದೊಮ್ಮೆ ನಮ್ಮೊಂದಿಗೆ ಸ್ನೇಹಿತರು ಅಥವಾ ಬೇರೆ ಯಾರಾದರೂ ಇದ್ದರೆ ಹೇಳಿಕೊಂಡಿರುತ್ತೇವೆ.

ಇದನ್ನೂ ಓದಿ: ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಕೊಟ್ಟಿದ್ದೀರಾ? ಎಂದಿಗೂ ಈ ತಪ್ಪನ್ನ ಮಾಡ್ಬೇಡಿ, ಇದನ್ನ ಇಂದೇ ಡೌನ್‌ಲೋಡ್ ಮಾಡ್ಕೊಳ್ಳಿ

Latest Videos
Follow Us:
Download App:
  • android
  • ios