ದುಬೈ(ಮೇ.05): ಕೇರಳ ಮೂಲದ ನೌಕರರೊಬ್ಬರು ಯುಎಇಯಲ್ಲಿ ಭರ್ಜರಿ 20 ಕೋಟಿ ರುಪಾಯಿಯ ಲಾಟರಿ ಗೆದ್ದಿದ್ದಾರೆ.

ತ್ರಿಶ್ಶೂರ್‌ ಜಿಲ್ಲೆಯ ದಿಲೀಪ್‌ ಕುಮಾರ್‌ ಎಲ್ಲಿಕೊಟ್ಟು ಪರಮೇಶ್ವರನ್‌ ಎಂಬವರೇ ಇಷ್ಟುಮೌಲ್ಯದ ಲಾಟರಿ ಗೆದ್ದ ಅದೃಷ್ಟವಂತ. ಅಬುಧಾಬಿಯ ಬಿಗ್‌ ಟಿಕೆಟ್‌ ಡ್ರಾ ದಲ್ಲಿ ಪರಮೇಶ್ವರನ್‌ 10 ಮಿಲಿಯನ್‌ ಧಿರ್ಹಂ (ಸುಮಾರು ಇಪ್ಪತ್ತು ಕೋಟಿ) ಲಾಟರಿ ಗೆದ್ದಿದ್ದು, ಇದರಲ್ಲಿ ಒಂದೂವರೆ ಕೋಟಿ ಸಾಲ ತೀರಿಸುವುದರ ಜತೆಗೆ ಮಕ್ಕಳ ಶಿಕ್ಷಣಕ್ಕೆ ಹಣ ವಿನಿಯೋಗಿಸುವುದಾಗಿ ಅವರು ಹೇಳಿದ್ದಾರೆ.

ಕೊರೋನಾ ಭೀತಿಯಿಂದ ಕೇರಳದಿಂದ ತವರಿಗೆ ಹೋದವರಿಗೆ ಲಾಟರಿ!

ಕಳೆದ 17 ವರ್ಷಗಳಿಂದ ಯುಎಇಯ ಅಜ್ಮಾನ್‌ನಲ್ಲಿ ಕುಟುಂಬದೊಂದಿಗೆ ನೆಲೆಸಿರುವ ಇವರು ಆಟೋ ಸ್ಪೇರ್‌ ಕಂಪನಿಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಹತ್ತೂವರೆ ಸಾವಿರ ರುಪಾಯಿ ಕೊಟ್ಟು ಲಾಟರಿ ಖರೀದಿಸಿದ್ದರು.