ಭಾರತೀಯ ರೈಲ್ವೆ, ಶತಾಬ್ದಿ, ತುರಂತ್‌, ರಾಜಧಾನಿ ಎಕ್ಸ್‌ಪ್ರೆಸ್‌ಗಳಲ್ಲಿ ಆಹಾರ ಪದಾರ್ಥ ವಿತರಣೆ ಮಾಡಿದ್ದಕ್ಕೆ ವಿಧಿಸುತ್ತಿದ್ದ 50 ಸೇವಾ ಶುಲ್ಕ ತೆಗೆದು ಹಾಕಿ, ಅದೇ 50 ರು.ಗಳನ್ನು ಆಹಾರ ಪದಾರ್ಥಗಳ ಮೂಲಬೆಲೆಯಲ್ಲೇ ಸೇರಿಸಿದೆ.

ನವದೆಹಲಿ(ಜು.20): ಆಹಾರ ಪದಾರ್ಥಗಳ ವಿತರಣೆ ವೇಳೆ ಹೆಚ್ಚುವರಿ ಸೇವಾ ಶುಲ್ಕ ಪಡೆಯುವಂತಿಲ್ಲ. ಅಂಥ ಕ್ರಮ ಕಾನೂನು ಬಾಹಿರ ಎಂಬ ಕೇಂದ್ರ ಗ್ರಾಹಕ ಸಚಿವಾಲಯದ ಆದೇಶಕ್ಕೇ ಸಡ್ಡು ಹೊಡೆದಿರುವ ಭಾರತೀಯ ರೈಲ್ವೆ, ಶತಾಬ್ದಿ, ತುರಂತ್‌, ರಾಜಧಾನಿ ಎಕ್ಸ್‌ಪ್ರೆಸ್‌ಗಳಲ್ಲಿ ಆಹಾರ ಪದಾರ್ಥ ವಿತರಣೆ ಮಾಡಿದ್ದಕ್ಕೆ ವಿಧಿಸುತ್ತಿದ್ದ 50 ಸೇವಾ ಶುಲ್ಕ ತೆಗೆದು ಹಾಕಿ, ಅದೇ 50 ರು.ಗಳನ್ನು ಆಹಾರ ಪದಾರ್ಥಗಳ ಮೂಲಬೆಲೆಯಲ್ಲೇ ಸೇರಿಸಿದೆ.

Indian Railways Update: July 18ರಂದು 160 ರೈಲುಗಳ ಸಂಚಾರ ಸ್ಥಗಿತಗೊಳಿಸಿದ IRCTC

ಆದರೆ 20 ರು. ಬೆಲೆಯ ಕಾಫಿ, ಟೀಯನ್ನು ಮಾತ್ರ ದರ ಹೆಚ್ಚಳ ವ್ಯಾಪ್ತಿಯಿಂದ ಹೊರಗಿಟ್ಟಿದ್ದು, ಅದಕ್ಕೆ ವಿಧಿಸಲಾಗುತ್ತಿದ್ದ 50 ರು. ಸೇವಾ ಶುಲ್ಕ ರದ್ದುಗೊಳಿಸಿದೆ.

ರೈಲ್ವೆಯ ಹಿಂದಿನ ನಿಯಮಗಳ ಅನ್ವಯ ಶತಾಬ್ದಿ, ದುರಂತೋ, ರಾಜಧಾನಿ ಮೊದಲಾದ ರೈಲುಗಳಲ್ಲಿ ಪ್ರಯಾಣಿಕರು ಟಿಕೆಟ್‌ ಬುಕ್‌ ಮಾಡುವಾಗಲೇ ಕಾಫಿ, ಟೀ, ಉಪಹಾರ, ಊಟ, ಸಂಜೆ ಉಪಹಾರ ಬುಕ್‌ ಮಾಡಿದ್ದರೆ ಅದಕ್ಕೆ ಸೇವಾ ಶುಲ್ಕ ಹಾಕುತ್ತಿರಲಿಲ್ಲ. ಆದರೆ, ಇವುಗಳನ್ನು ರೈಲು ಹತ್ತಿದ ಮೇಲೆ ಬುಕ್‌ ಮಾಡಿದರೆ ಪ್ರತಿ ವಸ್ತುವಿಗೂ 50 ರು.ಸೇವಾ ಶುಲ್ಕ ಕಟ್ಟಬೇಕಿತ್ತು. 20 ರು. ಟೀ/ಕಾಫಿಗೂ 50ರು. ಸೇವಾ ಶುಲ್ಕ ಕಟ್ಟಿ70 ರು. ಕೊಡಬೇಕಿತ್ತು.

ರೈಲಿನಲ್ಲಿ ಪ್ರಯಾಣಿಸ್ತೀರಾ ? ಪ್ಯಾಸೆಂಜರ್ ಫ್ರೆಂಡ್ಲೀ ನಿಯಮಗಳ ಬಗ್ಗೆ ಗೊತ್ತಿರಲಿ

ಆದರೆ ಸೇವಾ ಶುಲ್ಕ ವಿಧಿಸುವುದನ್ನು ಇತ್ತೀಚೆಗೆ ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯ ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ರೈಲ್ವೆಯು, ರೈಲು ಸಂಚಾರದ ವೇಳೆ ನೀಡುವ ಬೆಳಗ್ಗಿನ ತಿಂಡಿಯ ಬೆಲೆಯನ್ನು 105 ರು.ನಿಂದ 155, ಮಧ್ಯಾಹ್ನದ ಊಟದ ದರವನ್ನು 185 ರು.ನಿಂದ 235 ರು.ಗೆ ಮತ್ತು ಸಂಜೆಯ ಸ್ನಾ್ಯಕ್‌ ದರವನ್ನು 90 ರು.ನಿಂದ 140 ರು.ಗೆ ಹೆಚ್ಚಿಸಿದೆ. ಅಂದರೆ ಆಹಾರದ ದರದಲ್ಲೇ ತಲಾ 50 ರು. ಹೆಚ್ಚಳ ಮಾಡಿ ಜಾಣತನ ತೋರಿದೆ.