ನವದೆಹಲಿ(ಜೂ.13): ತಮ್ಮ ರಾಜ್ಯಗಳಲ್ಲಿರುವ ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಲು 7 ರಾಜ್ಯಗಳು 63 ಶ್ರಮಿಕ್‌ ವಿಶೇಷ ರೈಲುಗಳಿಗೆ ಬೇಡಿಕೆ ಇಟ್ಟಿವೆ. ಈ ಪೈಕಿ ಕೇರಳ ಸರ್ಕಾರವೇ 32 ರೈಲುಗಳಿಗೆ ಬೇಡಿಕೆ ಇಟ್ಟಿವೆ ಎಂದು ಕೇಂದ್ರ ರೈಲ್ವೇ ಮಂಡಳಿ ತಿಳಿಸಿದೆ.

ಕೇರಳ ಹೊರತಾಗಿ ತಮಿಳುನಾಡು 10, ಜಮ್ಮು ಕಾಶ್ಮೀರ 9, ಕರ್ನಾಟಕ 6, ಆಂಧ್ರಪ್ರದೇಶ 3, ಪಶ್ಚಿಮ ಬಂಗಾಳ 2, ಗುಜರಾತ್‌ ಒಂದು ರೈಲಿಗೆ ಬೇಡಿಕೆ ಸಲ್ಲಿಸಿವೆ. ಈ ಪೈಕಿ ಅತೀ ಹೆಚ್ಚು ಅಂದರೆ 23 ರೈಲುಗಳು ಪಶ್ಚಿಮ ಬಂಗಾಳಕ್ಕೆ ತೆರಳಲಿವೆ ಎಂದು ಮಂಡಳಿ ಮಾಹಿತಿ ನೀಡಿದೆ.

ಮೇ 29, ಜೂನ್‌ 3 ಹಾಗೂ 6ರಂದು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದ ನಿಗಮ ರೈಲಿಗೆ ಬೇಡಿಕೆ ಸಲ್ಲಿಸಿ ಎಂದು ಕೇಳಿತ್ತು.