Asianet Suvarna News Asianet Suvarna News

Indian Railways| ರೈಲ್ವೆಯ ಮೊದಲ ‘ಪಾಡ್‌ ಹೋಟೆಲ್‌’ ಮುಂಬೈನಲ್ಲಿ ಶುರು

* ರೈಲ್ವೆಯ ಮೊದಲ ‘ಪಾಡ್‌ ಹೋಟೆಲ್‌’ ಮುಂಬೈನಲ್ಲಿ ಶುರು

* ಮುಂಬೈ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಇದೆ ಹೋಟೆಲ್‌

* ಪ್ರಯಾಣಿಕರಿಗೆ ಇಲ್ಲಿ ತಂಗಲು ಅವಕಾಶ

* ಆರಾಮಯದಾಯಕ ಆಧುನಿಕ ಸೌಲಭ್ಯ ಇಲ್ಲಿ ಲಭ್ಯ

 

Indian Railways first pod hotel to be inaugurated in Mumbai pod
Author
Bangalore, First Published Nov 18, 2021, 8:34 AM IST
  • Facebook
  • Twitter
  • Whatsapp

ಮುಂಬೈ(ನ.18): ಭಾರತೀಯ ರೈಲ್ವೆ (Indian Railways) ಮತ್ತೊಂದು ಪ್ರಯಾಣಿಕ ಸ್ನೇಹಿ ಕ್ರಮ ಕೈಗೊಂಡಿದ್ದು, ಇದೇ ಮೊದಲ ಬಾರಿಗೆ ಆರಾಮದಾಯಕ ‘ಪಾಡ್‌ ಹೋಟೆಲ್‌’ (Pod Hotel) ವ್ಯವಸ್ಥೆಗೆ ಚಾಲನೆ ನೀಡಿದೆ. ಮುಂಬೈ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ (Mumbai Central Railway Station) ಈ ಹೋಟೆಲ್‌ ಅನ್ನು ಬುಧವಾರ ರೈಲ್ವೆ ಖಾತೆ ರಾಜ್ಯ ಸಚಿವ ರಾವ್‌ಸಾಹೇಬ್‌ ದಾನ್ವೆ ಉದ್ಘಾಟಿಸಿದರು.

ಪಾಡ್‌ ಹೋಟೆಲ್‌ (ಒಂದು ಕೊಠಡಿಯಲ್ಲಿ ಒಂದು ಬೆಡ್‌ಗೆ ಮಾತ್ರ ಅವಕಾಶ) ಎಂಬುದು ಪ್ರಯಾಣಿಕರಿಗೆ ತಂಗಲು ಇರುವ ಲಾಡ್ಜ್‌ ಮಾದರಿಯ ವ್ಯವಸ್ಥೆಯಾಗಿದೆ. ಪ್ರಯಾಣ ವಿಳಂಬದ ಸಂದರ್ಭದಲ್ಲಿ ಪ್ರಯಾಣಿಕರು ವೇಟಿಂಗ್‌ ರೂಮ್‌ನಲ್ಲಿ ಅಥವಾ ಪ್ಲಾಟ್‌ಫಾಮ್‌ರ್‍ ಮೇಲೆ ತಂಗುವ ಬದಲು ಅಥವಾ ದುಬಾರಿ ಲಾಡ್ಜ್‌ಗಳಲ್ಲಿ ತಂಗುವ ಬದಲು ಪಾಡ್‌ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಬಹುದಾಗಿದೆ. ಈ ಹೋಟೆಲ್‌ನಲ್ಲಿ ಆರಾಮದಾಯಕ ಐಷಾರಾಮಿ ವ್ಯವಸ್ಥೆ ಇರುತ್ತದೆ. ದರವೂ ಕಡಿಮೆ. ಇದರಿಂದಾಗಿ ಸಾಮಾನ್ಯ ಪ್ರಯಾಣಿಕರೂ ಆಧುನಿಕ ಶೈಲಿಯ ಹೋಟೆಲ್‌ಗಳಲ್ಲಿ ಉಳಿಯಲು ಅವಕಾಶ ಸಿಕ್ಕಂತಾಗಿದೆ.

ಅತ್ಯಾಧುನಿಕ ಪಾಡ್‌ ಹೋಟೆಲ್‌ ದರವನ್ನು ಗ್ರಾಹಕರ ಕೈಗೆಟಕುವ ದರ ನಿಗದಿಪಡಿಸಲಾಗಿದೆ. 12 ಗಂಟೆಗಳ ಅವಧಿಗೆ ತಂಗಲು ಒಬ್ಬರಿಗೆ 999 ರು. ಹಾಗೂ 24 ಗಂಟೆ ತಂಗಲು 1999 ರು. ದರ ಇರಲಿದೆ. ಇದೇ ಸೇವೆ ಖಾಸಗಿಯಲ್ಲಿ ಪಡೆಯಬೇಕಾದರೆ 12 ಗಂಟೆಗೆ 1249 ರು. ಮತ್ತು 24 ಗಂಟೆಗೆ 2499 ರು. ಪಾವತಿಸಬೇಕಾಗಲಿದೆ.

ಪಾಡ್‌ ಹೋಟೆಲ್‌ ಅಂದರೇನು?

ಒಂದು ದೊಡ್ಡ ಕೋಣೆಯಲ್ಲಿ ಕ್ಯಾಪ್ಸೂಲ್‌ ಮಾದರಿಯಲ್ಲಿ ಒಂದು ಬೆಡ್‌ಗೆ ಅಗತ್ಯವಿರುವಷ್ಟುಜಾಗದಲ್ಲಿ ಒಂದು ಕೊಠಡಿ ನಿರ್ಮಿಸಲಾಗಿರುತ್ತದೆ. ದೂರದ ಊರಿನಿಂದ ಬಂದವರು ಒಂದು ರಾತ್ರಿ ಉಳಿಯಲು ಅನುಕೂಲವಾಗಲಿದೆ.

ಪಾಡ್‌ ಹೋಟೆಲ್‌ ಸೌಲಭ್ಯಗಳು

- ಇಲ್ಲಿ ತಂಗುವವರಿಗೆ ಉಚಿತ ವೈಫೈ ಸೇವೆ

- ಟೀವಿ, ಸಣ್ಣ ಲಾಕರ್‌, ಒಂದು ಮಿರರ್‌

- ಓದಲು ಲೈಟಿಂಗ್‌ಗಳ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯ

Follow Us:
Download App:
  • android
  • ios