ಅಂತಾರಾಷ್ಟ್ರೀಯ ಯೋಗಾದಿನಾಚರಣೆಗೆ ಭಾರತ ಸೇರಿದಂತೆ ವಿಶ್ವವೇ ಸಜ್ಜಾಗಿದೆ. ಈ ಬಾರಿ ವಸುಧೈವ ಕುಟುಂಬಕಂ ಪರಿಕಲ್ಪನೆ ಅಡಿಯಲ್ಲಿ ಭಾರತ ಯೋಗ ದಿನಾಚರಿಸುತ್ತಿದೆ. ಇದರ ಪ್ರಯುಕ್ತ ನೌಕಾಪಡೆ ಒಶಿಯನ್ ರಿಂಗ್ ಆಫ್ ಯೋಗಾ ಆಂದೋನ ನಡೆಸುತ್ತಿದೆ.

ನವದೆಹಲಿ(ಜೂ.20) ಭಾರತದ ಯೋಗ ಇದೀಗ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಯೋಗ ದಿನಾಚರಣೆ ಪ್ರಸ್ತಾಪವನ್ನು ಬಹುತೇಕ ರಾಷ್ಟ್ರಗಳು ಒಪ್ಪಿಕೊಂಡು ಯುನೈಟೆಡ್ ನೇಷನ್ ಜನರಲ್ ಅಸೆಂಬ್ಲಿ ಅಂತಾರಾಷ್ಟ್ರೀಯ ಯೋಗಾದಿನಾಚರಣೆಗೆ ಗ್ರೀನ್ ಸಿಗ್ನಲ್ ನೀಡಿತ್ತು. 2015ರಿಂದ ಅಂತಾರಾಷ್ಟ್ರೀಯ ಯೋಗದಿನಾಚರಣೆ ವಿಶ್ವದೆಲ್ಲಡೆ ಆಚರಿಸಲಾಗುತ್ತದೆ. ಈ ಬಾರಿ ಭಾರತ ಯೋಗದಿನಾಚರಣೆಯನ್ನು ವಸುದೈವ ಕುಟಂಬಕಂ ಪರಿಕಲ್ಪನೆಯಲ್ಲಿ ಆಚರಿಸುತ್ತಿದೆ. 

ಆಯುಷ್ ಸಚಿವಾಲಯ, ರಕ್ಷಣಾ ಸಚಿವಾಲಯ ಹಾಗೂ ಇತರ ಸಚಿವಾಲಯ ಸಮನ್ವಯದಲ್ಲಿ ಒಶಿಯನ್ ರಿಂಗ್ ಆಫ್ ಯೋಗ ಕಾರ್ಯಕ್ರಮ ಯೋಜಿಸಿದೆ. ಹಿಂದೂ ಮಹಾಸಾಗರದಲ್ಲಿ ನಿಯೋಜಿಸಲಾದ ಭಾರತೀಯ ನೌಕಾಪಡೆ ಹಡುಗು ಸ್ನೇಹಪರ ರಾಷ್ಟ್ರಗಳ ಬಂದರುಗಳಿಗೆ ಭೇಟಿ ನೀಡುತ್ತಿದೆ. ಈ ಮೂಲಕ ವಸುಧೈವ ಕುಟುಂಬಕಂ ಸಂದೇಶ ಹರಡುತ್ತಿದೆ. 

International Yoga Day 2023: ಇವರೇ ನೋಡಿ ಮೊದಲ ಯೋಗ ಗುರು

ಸಮುದ್ರದಾಚೆಗಿನ ಹಲವು ರಾಷ್ಟ್ರಗಳ ಜೊತೆ ಭಾರತೀಯ ನೌಕಾಪಡೆ ಯೋಗಕ್ಕೆ ರಾಯಭಾರಿಯಾಗಿದೆ. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಹಾಗೂ ವಿಶ್ವವನ್ನೇ ಉತ್ತಮ ಆರೋಗ್ಯದತ್ತ ಮುನ್ನಡೆಸಲು ಯೋಗ ಸಹಕಾರಿಯಾಗಿದೆ. ಇದೀಗ ಒಶಿಯನ್ ಆಫ್ ಯೋಗಾ ಆಚರಣೆಯಲ್ಲಿ ಭಾರಕೀಯ ನೌಕಾಪಡೆ ವಿದೇಶಿ ಬಂದರುಗಳಿಗೆ ಭೇಟಿ ನೀಡುತ್ತಿದೆ. ಈ ವೇಳೆ ಯೋಗಾಭ್ಯಾಸಕ್ಕೆ ಅವಧಿ ನಿಗದಿಪಡಿಸಲಾಗಿದೆ. ಈ ಭೇಟಿ ವೇಳೆ ಯೋಗದಿಂದ ಆಗುವ ಪ್ರಯೋಜನಗಳ ಜೊತೆಗೆ ಭಾರದ ವಿದೀಶಿ ಸಂಬಂಧವನ್ನು ಉತ್ತಮಪಡಿಸಿ ವಸುಧೈವ ಕುಟುಂಬಕಂ ಸಂದೇಶ ಸಾರಲಿದೆ.

ಈ ಬಾರಿಯ ಅಂತಾರಾಷ್ಟ್ರೀಯ ಯೋಗಾದಿನಚಾರಣೆಗೆ ಭಾರತೀಯ ನೌಕಾಪಡೆ ಬಾಂಗ್ಲಾದೇಶ, ಈಜಿಪ್ಟ್, ಇಂಡೋನೇಷಿಯಾ, ಕೀನ್ಯಾ, ಮಡಗಾಸ್ಕರ್, ಓಮನ್, ಶ್ರೀಲಂಕಾ, ದಾಯ್‌ಲೆಂಡ್, ದುಬೈ, ಯುಎಇ ದೇಶಗಳಲ್ಲಿ ಒಶಿಯನ್ ರಿಂಗ್ ಆಫ್ ಯೋಗಾ ಆಚರಿಸಲಿದೆ.

International Yoga Day : ಈ ಬಾರಿಯ ಯೋಗ ದಿನದ ಥೀಮ್ ಏನು ಗೊತ್ತಾ?

ಒಷಿಯನ್ ರಿಂಗ್ ಆಫ್ ಯೋಗದ ಭಾಗವಾಗಿ 19 ಭಾರತೀಯ ನೌಕಾಪಡೆ ಹಡುಗು ಇತರ ರಾಷ್ಟ್ರಗಳ ಬಂದರಿಗೆ ಭೇಟಿ ನೀಡಲಿದೆ. 3,500 ನೌಕಾ ಸಿಬ್ಬಂದಿ ಬರೋಬ್ಬರಿ 35,000 ಕಿಲೋಮೀಟರ್ ಪ್ರಯಾಣಿಸಲಿದ್ದಾರೆ. ಇದು ವಿದೇಶಿ ಬಂದರು, ಅಂತಾರಾಷ್ಟ್ರೀಯ ಸಮುದ್ರ ಗಡಿಯಲ್ಲಿ 11 ಹಡುಗಳಲ್ಲಿ 2,400 ಸಿಬ್ಬಂದಿ ಒಶಿಯನ್ ರಿಂಗ್ ಆಫ್ ಯೋಗಾ ಆಚರಣೆ ಮಾಡಲಿದ್ದಾರೆ. 1,200 ವಿದೇಶಿ ನೌಕಾಪಡೆ ಸಿಬ್ಬಂದಿ ಸಾಗರೋತ್ತರ ಹಡುಗಳಲ್ಲಿ ಯೋಗಾ ಡೇ ಆಚರಣೆ ನಡೆಯಲಿದೆ.