ರಷ್ಯನ್ ಪತ್ನಿಯೊಂದಿಗೆ ಭಾರತಕ್ಕೆ ಪ್ರವಾಸ ಬಂದರೆ ₹6,000 ರೇಟ್ ಕೇಳಿದ ಕಿಡಿಗೇಡಿಗಳು!

ರಾಜಸ್ಥಾನದ ಉದಯಪುರದಲ್ಲಿ ಭಾರತ ಮೂಲದ ಯುವಕನ ರಷ್ಯನ್ ಪತ್ನಿಗೆ ಸ್ಥಳೀಯ ಯುವಕರಿಂದ ಅವಮಾನ. ಯುವಕನ ದೂರಿನ ಹೊರತಾಗಿಯೂ, ಭಾರತದಲ್ಲಿ ವಿದೇಶಿ ಪತ್ನಿಯರೊಂದಿಗೆ ಪ್ರವಾಸ ಮಾಡುವುದು ಸುರಕ್ಷಿತವಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದಾನೆ.

Indian man says he can not walk in india with russian wife goes viral sat

ಭಾರತ ಮೂಲದ ಯುವಕನೊಬ್ಬ ತನ್ನ ರಷ್ಯನ್ ಮೂಲದ ಹೆಂಡತಿಯೊಂದಿಗೆ ರಾಜಸ್ಥಾನದ ಉದಯಪುರ ಕೋಟೆಯನ್ನು ತೋರಿಸಲು ಪ್ರವಾಕ್ಕೆ ಕರೆತಂದಾಗ ಅಲ್ಲಿನ ಸ್ಥಳೀಯ ಕೆಲ ಕಿಡಿಗೇಡಿ ಯುವಕರ ಗುಂಪೊಂದು ತನ್ನ ಹೆಂಡತಿ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದೆ. ನನ್ನ ಹೆಂಡತಿಗೆ 6000 ರೇಟ್ ಕೊಡ್ತೀವಿ ಬರ್ತೀಯಾ ಎಂದು ಕೇಳಿ ಅವಮಾನ ಮಾಡಿದ್ದು, ಈ ಬಗ್ಗೆ ದೂರು ಕೂಡ ಕೊಡಲಾಗಿದೆ. ಆದರೆ, ಭಾರತದಲ್ಲಿ ವಿದೇಶಿ ಪತ್ನಿಯರನ್ನು ಕರೆದುಕೊಂಡು ಪ್ರವಾಸ ಮಾಡಲು ಸಾಧ್ಯವಿಲ್ಲ ಎಂದು ಯುವಕ ತನ್ನ ಸ್ವದೇಶದ ವಿರುದ್ಧವೇ ಅಳಲು ತೋಡಿಕೊಂಡಿದ್ದಾನೆ.

ರಾಜಸ್ಥಾನದ ಉದಯಪುರಕ್ಕರ ಭೇಟಿ ನೀಡಲು ಬಂದಿದ್ದ ವೇಳೆ ಕೆಲ ಯುವಕರು ನನ್ನ ರಷ್ಯನ್ ಪತ್ನಿಯ ಮೇಲೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ. ಈ ದೇಶದಲ್ಲಿ ತನ್ನ ಪತ್ನಿಯೊಂದಿಗೆ ನಡೆಯಲು ಸಹ ಸಾಧ್ಯವಿಲ್ಲ ಎಂದು ಯುವಕ ಹೇಳುವ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ಕಳೆದ 6 ದಿನಗಳ ಹಿಂದೆ ಶೇರ್ ಮಾಡಿದ್ದ ಯೂಟ್ಯೂಬರ್ ಮಿಥಿಲೇಶ್ ಬ್ಯಾಕ್ ಪ್ಯಾಕರ್ ಅವರ ವಿಡಿಯೋವನ್ನು ಈಗಾಗಲೇ 2.5 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಉದಯ್‌ಪುರದ ಸಿಟಿ ಪ್ಯಾಲೇಸ್‌ನಲ್ಲಿ ತನಗೆ ಇಂತಹ ಅನುಭವವಾಗಿದೆ ಎಂದು ಹೇಳಿದ ಅವರು ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ಮಿಥಿಲೇಶ್ ತನ್ನ ರಷ್ಯನ್ ಪತ್ನಿ ಲಿಜಿ ಮತ್ತು ಮಗುವಿನೊಂದಿಗೆ ಉದಯಪುರ ಸಿಟಿ ಪ್ಯಾಲೇಸ್‌ಗೆ ಭೇಟಿ ನೀಡಲು ಬಂದಿದ್ದರು. ಅಷ್ಟರಲ್ಲಿ ಹಿಂಬಾಲಿಸಿದ ಯುವಕರ ಗುಂಪು ಪ್ರಸಿದ್ಧ ಸಿನಿಮಾ ಹಾಡಿನ ಅನುಕರಣೆಯಲ್ಲಿ 'ರಬ್ ನೆ ಬನಾ ದಿ ಜೋಡಿ' ಎಂದು ಹೇಳಲು ಆರಂಭಿಸಿತು. ಮೊದಲಿಗೆ ಅವನು ಅದನ್ನು ನಿರ್ಲಕ್ಷಿಸಿದನು. ಆದರೆ ಅವರು ಮುಂದೆ ಹೋಗುತ್ತಿದ್ದಂತೆ, ಗ್ಯಾಂಗ್ ಅವರನ್ನು ಹಿಂಬಾಲಿಸಿತು. ಅವರು ಅದನ್ನು ಹಲವು ಬಾರಿ ತಪ್ಪಿಸಿದರೂ, ವೀಡಿಯೊ ಚಿತ್ರೀಕರಣ ಮಾಡುವಾಗ, ಗುಂಪಿನಲ್ಲೊಬ್ಬರು ಹಿಂದಿನಿಂದ '6000 ರೂಪಾಯಿ' ಎಂದು ಕೂಗಿದಾಗ ಮಿಥಿಲೇಶ್ ತುಂಬಾ ಕೋಪಗೊಂಡರು. ತಾಳ್ಮೆ ಕಳೆದುಕೊಂಡು ಭಾರತವು ಸುಂದರ ಮತ್ತು ಸುರಕ್ಷಿತ ದೇಶ ಎಂದು ಹೇಳುತ್ತಿದ್ದೆ. ಆದರೆ, ಪತ್ನಿಯನ್ನು ಕರೆದುಕೊಂಡು ಓಡಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವದ ಟಾಪ್ 10 ಪುರಾತನ ದೇಶಗಳಿವು; ಭಾರತಕ್ಕೆ ಎಷ್ಟನೇ ಸ್ಥಾನ?

ಇಂತಹ ಘಟನೆ ನಡೆದಾಗ ನೀವು ಅದನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದ್ದಾರೆ. ಆಗ ಜನರ ಗುಂಪನ್ನು ಎದುರಿಸುವುದಕ್ಕಿಂತ ಪೊಲೀಸರ ಮೊರೆ ಹೋಗುವುದು ಉತ್ತಮ ಎಂದು ಮಿಥಿಲೇಶ್ ಹೇಳಿದರು. ಆದರೂ ಅಲ್ಲಿನ ಭದ್ರತಾ ಸಿಬ್ಬಂದಿ ಅವರಿಗೆ ಪೂರ್ಣ ಪ್ರಮಾಣದಲ್ಲಿ ಭದ್ರತೆ ನೀಡುವುದಕ್ಕೆ ಮುಂದಾಗಲಿಲ್ಲ. ಈ ವೀಡಿಯೊ ವೈರಲ್ ಆದ ನಂತರ, ಅನೇಕ ಜನರು ರಾಜಸ್ಥಾನ ಪೊಲೀಸರಿಗೆ ಛೀಮಾರಿ ಹಾಕಿದ್ದಾರೆ. ಜೊತೆಗೆ, 'ಇಂತಹ ಪುಡಾರಿ ಗುಂಪುಗಳನ್ನು' ನಿಯಂತ್ರಿಸುವಂತೆ ಕೇಳಿಕೊಂಡರು. ಇನ್ನು ಕೆಲವರು ಈ ಹಿಂದೆ ಅನುಭವಿಸಿದ ಕೆಟ್ಟ ಅನುಭವಗಳ ಬಗ್ಗೆ ಬರೆದಿದ್ದಾರೆ. ಇದು ತುಂಬಾ ಮುಜುಗರದ ಸಂಗತಿ. ಇಂತಹ ಘಟನೆಗಳನ್ನು ನಿಯಂತ್ರಿಸದಿದ್ದರೆ ನಾವು ನಮ್ಮ ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಭಾರತದ ಟಾಪ್ 10 ಶ್ರೀಮಂತ ಕುಟುಂಬಗಳಿವು!

Latest Videos
Follow Us:
Download App:
  • android
  • ios