ಭಾರತದ ಕಾನೂನಿಗೆ ಬದ್ಧವಾಗಿರಿ: ಬಿಬಿಸಿ ವಿಷಯ ಪ್ರಸ್ತಾಪಿಸಿದ ಬ್ರಿಟನ್ ಸಚಿವಗೆ ಜೈಶಂಕರ್ ನೀತಿ ಪಾಠ
ತೆರಿಗೆ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಇತ್ತೀಚೆಗೆ ದೆಹಲಿ ಮತ್ತು ಮುಂಬೈನ ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ದಾಳಿಯನ್ನು ಪ್ರಸ್ತಾಪಿಸಿದ ಬ್ರಿಟನ್‌ನ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅತ್ಯಂತ ನಯವಾದ ಮಾತುಗಳಲ್ಲೇ ತಿರುಗೇಟು ನೀಡಿದ ಪ್ರಸಂಗ ನಡೆದಿದೆ.
ನವದೆಹಲಿ: ತೆರಿಗೆ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಇತ್ತೀಚೆಗೆ ದೆಹಲಿ ಮತ್ತು ಮುಂಬೈನ ಬಿಬಿಸಿ ಕಚೇರಿ ಮೇಲೆ ಆದಾಯ ತೆರಿಗೆ ದಾಳಿಯನ್ನು ಪ್ರಸ್ತಾಪಿಸಿದ ಬ್ರಿಟನ್‌ನ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅತ್ಯಂತ ನಯವಾದ ಮಾತುಗಳಲ್ಲೇ ತಿರುಗೇಟು ನೀಡಿದ ಪ್ರಸಂಗ ನಡೆದಿದೆ.
ದಿಲ್ಲಿಯಲ್ಲಿ ಜಿ-20 ವಿದೇಶಾಂಗ ಸಚಿವರ (Foreign Ministers) ಶೃಂಗ ಆರಂಭವಾಗಿದ್ದು, ಇದಕ್ಕಾಗಿ ಕ್ಲೆವರ್ಲಿ (James Cleverly) ದಿಲ್ಲಿಗೆ ಬಂದಿದ್ದಾರೆ. ಈ ವೇಳೆ ಜೈಶಂಕರ್ (Indian Foreign Minister) ಜೊತೆಗಿನ ತಮ್ಮ ಭೇಟಿಯ ವೇಳೆ ಬಿಬಿಸಿ ಮೇಲಿನ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎನ್ನಲಾಗಿದೆ. ಆದರೆ ಇದಕ್ಕೆ ಅತ್ಯಂತ ಸ್ಪಷ್ಟನುಡಿಗಳಲ್ಲಿ ಪ್ರತಿಕ್ರಿಯಿಸಿದ ಜೈಶಂಕರ್ (S.Jaishankar), ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳು ಇಲ್ಲಿನ ನೆಲದ ನಿಯಮ ಪಾಲನೆ ಮಾಡುವುದು ಕಡ್ಡಾಯ ಎಂದು ತಿಳಿಸಿದರು ಎನ್ನಲಾಗಿದೆ.
'1984ರಲ್ಲೂ ಗಲಭೆಯಾಗಿತ್ತು ಈ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ ಯಾಕೆ ಬಂದಿಲ್ಲ..?' ಜೈಶಂಕರ್ ಪ್ರಶ್ನೆ
2002ರ ಗುಜರಾತ್ ಗಲಭೆ ವೇಳೆ ಅಂದಿನ ಗುಜರಾತ್ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಪಾತ್ರದ ಕುರಿತು ಬೆಳಕು ಚೆಲ್ಲುವ ಎರಡು ಸಾಕ್ಷ್ಯಚಿತ್ರಗಳನ್ನು ಬಿಬಿಸಿ (BBC) ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಐಟಿ ದಾಳಿ ನಡೆದ ಕಾರಣ, ಇದು ಸೇಡಿನ ಕೆಲಸ ಎಂದು ವಿಪಕ್ಷಗಳು ಕಿಡಿಕಾರಿದ್ದವು.
ಬಿಬಿಸಿ ತೆರಿಗೆ ವಂಚನೆ ಪತ್ತೆ; ಲೆಕ್ಕಪತ್ರಗಳಲ್ಲಿ ಭಾರಿ ಲೋಪದೋಷ : ಐಟಿ ಇಲಾಖೆ
ತಿಂಗಳ ಹಿಂದೆ ಬಿಬಿಸಿ ಎರಡು ಸಂಚಿಕೆಯ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ಆ ಗಲಭೆಗೆ ಹೇಗೆ ಸರ್ಕಾರ ಪ್ರಚೋದನೆ ನೀಡಿತ್ತು ಎಂದು ಸಾಕ್ಷ್ಯಚಿತ್ರದಲ್ಲಿತ್ತು. ಈ ಸಾಕ್ಷ್ಯಚಿತ್ರಕ್ಕೆ ಸರ್ಕಾರ ನಿಷೇಧ ಹೇರಿತ್ತು. ಆದರೂ ವಿಪಕ್ಷಗಳು ಶಾಲಾ ಕಾಲೇಜುಗಳಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದವು. ಇದಾದ ಬಳಿಕ ಬಿಬಿಸಿಯ ಕಚೇರಿ ಮೇಲೆ ಐಟಿ ಇಲಾಖೆ ದಾಳಿ ನಡೆಸಿತು.