Asianet Suvarna News Asianet Suvarna News

ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಏಕದಿನ ಸರಣಿ ಗೆದ್ದ ಅಫ್ಘಾನಿಸ್ತಾನ!

ದಕ್ಷಿಣ ಆಫ್ರಿಕಾ ಎದುರು ಚೊಚ್ಚಲ ಬಾರಿಗೆ ಏಕದಿನ ಸರಣಿ ಜಯಿಸುವಲ್ಲಿ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಆಫ್ಘನ್ನರು ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ

Rahmanullah Gurbaz Rashid Khan Shine As Afghanistan Stun South Africa To Seal ODI Series kvn
Author
First Published Sep 22, 2024, 10:02 AM IST | Last Updated Sep 22, 2024, 10:02 AM IST

ಶಾರ್ಜಾ: ದಕ್ಷಿಣ ಆಫ್ರಿಕಾ ವಿರುದ್ದ 3 ಪಂದ್ಯಗಳ ಏಕದಿನ ಸರಣಿಯನ್ನು ಅಫ್ಘಾನಿಸ್ತಾನ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಕೈ ವಶಪಡಿಸಿಕೊಂಡಿದೆ. ಇದು ಹರಿಣ ಪಡೆ ವಿರುದ್ಧ ಆಫ್ಘನ್‌ಗೆ ಚೊಚ್ಚಲ ಸರಣಿ ಗೆಲುವು. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಆಫ್ಭನ್‌ಗೆ 177 ರನ್ ಬೃಹತ್ ಗೆಲುವು ಲಭಿಸಿತು. ಈ ಮೂಲಕ ಏಕದಿನದಲ್ಲಿ ರನ್ ಅಂತರದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿತು.

ಮೊದಲು ಬ್ಯಾಟ್ ಮಾಡಿದ ಆಫ್ಘನ್ 4 ವಿಕೆಟ್‌ಗೆ 311 ರನ್ ಕಲೆಹಾಕಿತು. ರಹ್ಮಾನುಲ್ಲಾ ಗುರ್ಬಾಜ್ (105) 7ನೇ ಶತಕ ಬಾರಿಸಿ, ಈ ಸಾಧನೆ ಮಾಡಿದ ಮೊದಲ ಆಫ್ಘನ್ ಆಟಗಾರ ಎನಿಸಿಕೊಂಡರು. ರೆಹಮತುಲ್ಲಾ 86, ರಹ್ಮತ್ ಶಾ 50 ರನ್ ಗಳಿಸಿದರು. 

ದುಲೀಪ್‌ ಟ್ರೋಫಿ: ರಿಯಾನ್‌ ಪರಾಗ್‌, ರಾವತ್‌ ಅರ್ಧಶತಕ, ಭಾರತ ‘ಎ’ 333 ರನ್‌ ಲೀಡ್‌

ಇನ್ನು ಸವಾಲಿನ ಗುರಿ ಬೆನ್ನತ್ತಿದ ದ. ಆಫ್ರಿಕಾ 34.2 ಓವರ್‌ಗಳಲ್ಲಿ 134ಕ್ಕೆ ಆಲೌಟ್ ಆಯಿತು. ರಶೀದ್ ಖಾನ್ 19 ರನ್‌ 5, ಖರೋಟೆ 26 ರನ್‌ಗೆ 4 ವಿಕೆಟ್ ಪಡೆದರು. ಕೊನೆ ಏಕದಿನ ಭಾನುವಾರವಾದ ಇಂದು ನಡೆಯಲಿದೆ.

ಚುನಾವಣೆ ಹಿನ್ನೆಲೆ: ಲಂಕಾ, ಕಿವೀಸ್ ಟೆಸ್ಟ್‌ಗೆ ನಿನ್ನೆ ರೆಸ್ಟ್

ಗಾಲೆ(ಶ್ರೀಲಂಕಾ): ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಶನಿವಾರ ವಿಶ್ರಾಂತಿ ನೀಡಲಾಗಿತ್ತು. ಉಭಯ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಗಾಲೆ ಕ್ರೀಡಾಂಗಣದಲ್ಲಿ ಸೆ.18ಕ್ಕೆ ಆರಂಭಗೊಂಡಿತ್ತು. ಆದರೆ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆ ಕಾರಣಕ್ಕೆ ಶನಿವಾರ ಪಂದ್ಯಕ್ಕೆ ವಿರಾಮ ನೀಡಲಾಗಿತ್ತು. ಭಾನುವಾರ ಪಂದ್ಯ ಪುನಾರಂಭಗೊಳ್ಳಲಿದ್ದು, ಸೆ.23ರಂದು ಕೊನೆಗೊಳ್ಳಲಿದೆ. 

ಸದ್ಯ 3 ದಿನಗಳ ಆಟ ನಡೆದಿದ್ದು, ಪಂದ್ಯದ ಮೇಲೆ ಲಂಕಾ ಹಿಡಿತ ಸಾಧಿಸಿದೆ. 2ನೇ ಇನ್ನಿಂಗ್ಸ್‌ನಲ್ಲಿ ಲಂಕಾ 4 ವಿಕೆಟ್‌ಗೆ 237 ರನ್ ಗಳಿಸಿದೆ. ಸದ್ಯ 202 ರನ್ ಮುನ್ನಡೆಯಲ್ಲಿದ್ದು, ಕಿವೀಸ್ ಗೆಲುವಿಗೆ ದೊಡ್ಡ ಗುರಿ ನೀಡುವ ಕಾತರದಲ್ಲಿದೆ.

ಟೀಂ ಇಂಡಿಯಾ ಬಿಗಿ ಹಿಡಿತದಲ್ಲಿ ಚೆನ್ನೈ ಟೆಸ್ಟ್‌; ಬಾಂಗ್ಲಾ ಗೆಲುವಿಗೆ ಬೇಕಿದೆ ಇನ್ನೂ 357 ರನ್!

ಅಂಡರ್-19 ಏಕದಿನ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಪುದುಚೇರಿ: ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಅಂಡರ್-19 ತಂಡ 7 ವಿಕೆಟ್ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 49.4 ಓವರಲ್ಲಿ 184 ರನ್‌ಗೆ ಆಲೌಟಾಯಿತು. ಮೊಹಮದ್ ಇನಾನ್ 4 ವಿಕೆಟ್ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಭಾರತ 36 ಓವರಲ್ಲಿ 3 ವಿಕೆಟ್ ಕಳೆದುಕೊಂಡು ಜಯಗಳಿಸಿತು. ಕಾರ್ತಿಕೇಯ ಔಟಾಗದೆ 85, ಅಮಾನ್ ಔಟಾಗದೆ 58 ರನ್‌ ಗಳಿಸಿದರು.
 

Latest Videos
Follow Us:
Download App:
  • android
  • ios