ನವದೆಹಲಿ[ಮಾ.18]: ಕುಟುಂಬದೊಂದಿಗೆ ಇರಾನ್‌ಗೆ ತೀರ್ಥಯಾತ್ರೆಗೆ ತೆರಳಿದ್ದ ಲಡಾಖ್‌ ಮೂಲದ ಭಾರತೀಯ ಸೇನೆಯ ಯೋಧನಿಗೆ ಕೊರೋನಾ ವೈರಸ್‌ ಸೋಂಕು ತಗುಲಿದೆ.

ಭಾರತೀಯ ಸೇನೆಯಲ್ಲಿ ದೃಢವಾದ ಮೊದಲ ಪ್ರಕರಣ ಇದಾಗಿದೆ. ಯೋಧನೊಂದಿಗೆ ತೆರಳಿದ್ದ ಆತನ ತಂದೆಗೆ ಸೋಂಕು ಬಾಧಿಸಿದೆ. ಇವರಿಬ್ಬರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಹೋದರಿ ಹಾಗೂ ಪತ್ನಿಗೆ ಇತರರೊಂದಿಗೆ ಸಂಪರ್ಕ ನಿಷೇಧಿಸಲಾಗಿದೆ.

ಕೊರೋನಾ ವೈರಸ್: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸದ್ಯ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 147ಕ್ಕೇರಿದ್ದು, ಸರ್ಕಾರ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿದೆ.