ವಾಷಿಂಗ್ಟನ್‌[ಫೆ.25]: ಡೊನಾಲ್ಡ್‌ ಟ್ರಂಪ್‌ ಕೈಗೊಂಡಿರುವ ಭಾರತ ಪ್ರವಾಸ ನಿಯೋಗದಲ್ಲಿ ಕನ್ನಡಿಗರೊಬ್ಬರು ಇದ್ದಾರೆ. ಟ್ರಂಪ್‌ ಜತೆಗೇ ಅವರು ಅಮೆರಿಕ ಅಧ್ಯಕ್ಷರ ಏರ್‌ಫೋರ್ಸ್‌ ಒನ್‌ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದಾರೆ!

ಹೌದು. ಅವರೇ ಭಾರತೀಯ ಅಮೆರಿಕನ್‌ ಅಜಿತ್‌ ಪೈ.

47 ವರ್ಷದ ಪೈ ಅವರು ಅಮೆರಿಕ ದೂರಸಂಪರ್ಕ ವಲಯಕ್ಕೆ ಸಂಬಂಧಿಸಿದ ಫೆಡರಲ್‌ ಕಮ್ಯುನಿಕೇಶನ್‌ ಕಮಿಶನ್‌ನ ಅಧ್ಯಕ್ಷರಾಗಿದ್ದಾರೆ. ಇವರು ಈ ಹುದ್ದೆ ಏರಿದ ಮೊದಲ ಭಾರತೀಯ ಅಮೆರಿಕನ್‌ ವ್ಯಕ್ತಿ ಕೂಡ ಹೌದು. ಪೈ ಹಾಗೂ ಅಮೆರಿಕ ಅಧ್ಯಕ್ಷರ ವಿಶೇಷ ಸಹಾಯಕ ಕೇತೇಶ್‌ ಪಟೇಲ್‌ ಅವರು ಟ್ರಂಪ್‌ ಜತೆ ಭಾರತಕ್ಕೆ ಆಗಮಿಸಿದ್ದಾರೆ.

ಟ್ರಂಪ್‌ ನಿಯೋಗದಲ್ಲಿ ಇರುವ ಭಾರತೀಯರೆಂದರೆ ಈ ಇಬ್ಬರು ಮಾತ್ರ. ಪೈ ತಂದೆ ಹೈದರಾಬಾದ್‌ನವರಾಗಿದ್ದು, ತಾಯಿ ಬೆಂಗಳೂರಿನವರು. 5 ದಶಕದ ಹಿಂದೆಯೇ ಪೈ ಕುಟುಂಬ ಅಮೆರಿಕಕ್ಕೆ ತೆರಳಿತ್ತು. ಭಾರತ ಭೇಟಿಯ ಬಗ್ಗೆ ಪೈ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.