ಬೆಂಗಳೂರಲ್ಲಿ ಓದಿದ್ದ ಸೇತುರಾಮನ್ ಅಮೆರಿಕ ವಿಜ್ಞಾನ ಸಂಸ್ಥೆ ಮುಖ್ಯಸ್ಥ!
ಬೆಂಗಳೂರಲ್ಲಿ ಓದಿದ್ದ ಸೇತುರಾಮನ್ ಅಮೆರಿಕ ವಿಜ್ಞಾನ ಸಂಸ್ಥೆ ಮುಖ್ಯಸ್ಥ| ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ಪದವಿ
ವಾಷಿಂಗ್ಟನ್[ಡಿ.21]: ವೈದ್ಯಕೀಯೇತರ ವಿಜ್ಞಾನ ಹಾಗೂ ಎಂಜಿನಿಯರಿಂಗ್‌ನಲ್ಲಿ ಸಂಶೋಧನೆಗೆ ನೆರವಾಗುವ ಅಮೆರಿಕದ ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನಕ್ಕೆ ಬೆಂಗಳೂರಲ್ಲಿ ಓದಿದ್ದ ಡಾ. ಸೇತುರಾಮನ್ ಪಂಚನಾಥನ್ (58) ಅವರನ್ನು ಮುಖ್ಯಸ್ಥರನ್ನಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ.
ಹಾಲಿ ಮುಖ್ಯಸ್ಥ ಫ್ರಾನ್ಸ್ ಕೊರ್ಡೋವಾ ಅವರ ಅವಧಿ 2020ರಲ್ಲಿ ಮುಕ್ತಾಯವಾಗಲಿದ್ದು, ಅವರ ನಿವೃತ್ತಿ ಬಳಿಕ ಸೇತುರಾಮ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 1981ರಲ್ಲಿ ಮದ್ರಾಸ್ ವಿವಿಯಿಂದ ಭೌತಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದ ಇವರು, 1984ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ಪದವಿ ಪಡೆದಿದ್ದರು.
ಸದ್ಯ ಅರಿಜೋನಾ ರಾಜ್ಯ ವಿಶ್ವ ವಿದ್ಯಾಲಯದ ಉಪಾಧ್ಯಕ್ಷ ಹಾಗೂ ಮುಖ್ಯ ಸಂಶೋಧನೆ ಮತ್ತು ನಾವೀನ್ಯತೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.
ಡಿಸೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ