ಮಿಲಿಟರಿ ಹಿರಿಯ ಅಧಿಕಾರಿಯ ರಕ್ಷಣೆಗೆ ಭಾರತೀಯ ವಾಯುಸೇನೆಯ ಮಿಂಚಿನ ಕಾರ್ಯಾಚರಣೆ..!
ವೈದ್ಯಕೀಯ ತುರ್ತು ಸ್ಥಿತಿಯಲ್ಲಿದ್ದ ಸೇನೆಯ ಹಿರಿಯ ಅಧಿಕಾರಿಯನ್ನು ರಕ್ಷಿಸುವ ಸಲುವಾಗಿ ಸೇನೆಯೂ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಸಮಯದ ತುರ್ತನ್ನು ಅರಿತ ಸೇನೆ, ಸೇನೆಗೆ ಸೇರಿದ ಡೋರ್ನಿಯರ್ ಏರ್‌ಕ್ರಾಫ್ಟ್ ಬಳಸಿ ಪುಣೆಯಿಂದ ಲಿವರ್(ಯಕೃತ್) ಹಾಗೂ ಸೇನಾ ಆಸ್ಪತ್ರೆಯ ವೈದ್ಯರನ್ನು ಏರ್‌ಲಿಫ್ಟ್ ಮಾಡಿದೆ.
ನವದೆಹಲಿ: ವೈದ್ಯಕೀಯ ತುರ್ತು ಸ್ಥಿತಿಯಲ್ಲಿದ್ದ ಸೇನೆಯ ಹಿರಿಯ ಅಧಿಕಾರಿಯನ್ನು ರಕ್ಷಿಸುವ ಸಲುವಾಗಿ ಸೇನೆಯೂ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಸಮಯದ ತುರ್ತನ್ನು ಅರಿತ ಸೇನೆ, ಸೇನೆಗೆ ಸೇರಿದ ಡೋರ್ನಿಯರ್ ಏರ್‌ಕ್ರಾಫ್ಟ್ ಬಳಸಿ ಪುಣೆಯಿಂದ ಲಿವರ್(ಯಕೃತ್) ಹಾಗೂ ಸೇನಾ ಆಸ್ಪತ್ರೆಯ ವೈದ್ಯರನ್ನು ವಿಮಾನದಲ್ಲಿ ದೆಹಲಿಗೆ ಏರ್ ಲಿಫ್ಟ್ ಮಾಡಿದೆ. ಈ ಮೂಲಕ ತನ್ನ ಹಿರಿಯ ಅಧಿಕಾರಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಸೇನೆಯ ಈ ನಿರ್ಣಾಯಕ ಕಾರ್ಯಾಚರಣೆಯಿಂದ ಸೇನೆಯ ಹಿರಿಯ ಅಧಿಕಾರಿಯ ಜೀವ ಉಳಿದಿದೆ. ಫೆಬ್ರವರಿ 23 ರಂದು ಈ ಘಟನೆ ನಡೆದಿದ್ದು, ಭಾರತೀಯ ವಾಯುಸೇನೆ ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ.
ಫೆಬ್ರವರಿ 23 ರಂದು ರಾತ್ರಿ ಪುಣೆಯಿಂದ ದೆಹಲಿಗೆ ಲಿವರ್ ಕಸಿಗಾಗಿ ಲಿವರ್ ಪಡೆಯಲು ಆರ್ಮಿ ಆಸ್ಪತ್ರೆಯ ವೈದ್ಯರ ತಂಡವನ್ನು ಭಾರತೀಯ ವಾಯುಸೇನೆಗೆ ಸೇರಿದ ಡೊರ್ನಿಯರ್ ಏರ್‌ಕ್ರಾಫ್ಟ್ ಮೂಲಕ ಏರ್‌ಲಿಫ್ಟ್ ಮಾಡಲಾಯ್ತು. ಈ ಮೂಲಕ ಅಂಗಾಂಗ ಕಸಿ ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೀಡಿ ಸೇನೆಯ ಹಿರಿಯ ಅಧಿಕಾರಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು ಎಂದು ಏರ್‌ಪೋರ್ಸ್ ತನ್ನ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.
ಸೇನಾ ಆಸ್ಪತ್ರೆ ಅಥವಾ ಆರ್ಮಿ ಆಸ್ಪತ್ರೆ ಎಂದು ಕರೆಯಲ್ಪಡುವ ((R&R ಸಂಶೋಧನೆ ಮತ್ತು ರೆಫರಲ್) ಸಶಸ್ತ್ರ ಪಡೆಯ ಸಿಬ್ಬಂದಿಗೆ ಪ್ರಧಾನ ವೈದ್ಯಕೀಯ ಸೇವೆ ನೀಡುತ್ತದೆ.
ಇದರ ಜೊತೆಗೆ ಸೇನಾ ಸಿಬ್ಬಂದಿಯ ಕುಟುಂಬ ಸದಸ್ಯರಿಗೂ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುತ್ತದೆ.