ನವದೆಹಲಿ(ಮಾ.29): ಫ್ರಾನ್ಸ್‌ನ ಡಸಾಲ್ಟ್‌ ಕಂಪನಿ ಅಭಿವೃದ್ಧಿಪಡಿಸಿರುವ ಇನ್ನೂ 10 ರಫೇಲ್‌ ಯುದ್ಧ ವಿಮಾನಗಳು ಶೀಘ್ರವೇ ಭಾರತೀಯ ವಾಯುಪಡೆಯನ್ನು ಸೇರಿಕೊಳ್ಳಲಿವೆ. ಇದರೊಂದಿಗೆ ಭಾರತೀಯ ವಾಯುಪಡೆಯ ಸಾಮರ್ಥ್ಯ ಇನ್ನಷ್ಟುಹೆಚ್ಚಲಿದೆ. ಈಗಾಗಲೇ ಭಾರತೀಯ ವಾಯುಪಡೆಯಲ್ಲಿ 11 ರಫೇಲ್‌ ಯುದ್ಧ ವಿಮಾನಗಳಿವೆ.

ವಾಯುಪಡೆಯ ಮೂಲಗಳ ಪ್ರಕಾರ ಮುಂದಿನ 2-3 ದಿನದಲ್ಲಿ 3 ರಫೇಲ್‌ ವಿಮಾನ ಫ್ರಾನ್ಸ್‌ನಿಂದ ನೇರವಾಗಿ ತಡೆರಹಿತ ಹಾರಾಟದ ಮೂಲದ ಭಾರತಕ್ಕೆ ಬರಲಿದೆ. ಈ ವಿಮಾನಗಳಿಗೆ ಮಿತ್ರ ರಾಷ್ಟ್ರವೊಂದು ಆಗಸದಲ್ಲೇ ಇಂಧನ ಭರ್ತಿ ಮಾಡಿಕೊಡಲಿದೆ. ಉಳಿದ 7 ವಿಮಾನಗಳು ಏಪ್ರಿಲ್‌ ತಿಂಗಳ ಕೊನೆಯ ಭಾಗಕ್ಕೆ ಭಾರತಕ್ಕೆ ಆಗಮಿಸಲಿವೆ. ಹೊಸ ವಿಮಾನಗಳ ಆಗಮನದೊಂದಿಗೆ ರಫೇಲ್‌ ಯುದ್ಧ ವಿಮಾನಗಳ ಇನ್ನೊಂದು ಸ್ವಾ$್ಕಡ್ರನ್‌ ರಚನೆ ಸಾಧ್ಯವಾಗಲಿದೆ. ಈಗಾಗಲೇ ರಫೇಲ್‌ ವಿಮಾನಗಳನ್ನು ಒಳಗೊಂಡ ಮೊದಲ ಸ್ವಾ$್ಕಡ್ರನ್‌ ಅಂಬಾಲದಲ್ಲಿ ಕಾರ್ಯಾರಂಭ ಮಾಡಿದೆ.

2016ರಲ್ಲಿ ಭಾರತ ಸರ್ಕಾರ ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಡಬಲ್‌ ಎಂಜಿನ್‌ ಹೊಂದಿರುವ ರಫೇಲ ಯುದ್ಧ ವಿಮಾನಗಳು ಯಾವುದೇ ಸ್ಥಿತಿಯಲ್ಲೂ ಅತ್ಯಂತ ನಿಖರವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿವೆ.