ನವ​ದೆ​ಹ​ಲಿ[ಮಾ.19]: ಕೊರೋನಾ ವೈರಸ್‌ ನಿಯಂತ್ರಣ​ಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದರೂ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಮಾತ್ರ ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಕೊರೋನಾ ನಿಗ್ರಹದ ವಿಷಯದಲ್ಲಿ ನಿರ್ಣಾ​ಯ​ಕ​ವಾಗಿ ಕಾರ್ಯ​ನಿ​ರ್ವ​ಹಿ​ಸುವ​ಲ್ಲಿ​ನ ಸರ್ಕಾ​ರದ ಅಸ​ಮ​ರ್ಥ​ತೆ​ಯಿಂದಾ​ಗಿ ದೇಶ ಭಾರೀ ಬೆಲೆ ತೆರ​ಬೇ​ಕಾ​ಗು​ತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಎಚ್ಚ​ರಿ​ಕೆ ನೀಡಿ​ದ್ದಾ​ರೆ.

ಕ್ಷಿಪ್ರ ಮತ್ತು ಆಕ್ರ​ಮ​ಣಕಾರಿ ಕ್ರಮ ಕೊರೋನಾ ವೈರ​ಸ್‌ಗೆ ಉತ್ತ​ರ​ವಾ​ಗಿದೆ. ಆದರೆ, ನಮ್ಮ ಸರ್ಕಾ​ರದ ಅಸ​ಮ​ರ್ಥ​ತೆ​ಯಿಂದಾಗಿ ಭಾರ​ತ ಭಾರೀ ದೊಡ್ಡ ಬೆಲೆ​ಯನ್ನು ತೆರ​ಬೇ​ಕಾದೀತು ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ​ದ್ದಾ​ರೆ.

ಇನ್ನು ಎರಡು ದಿನಗಳ ಹಿಂದೆಯಷ್ಟೇ ಸೋಂಕು ತಡೆಗೆ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರ ಶ್ಲಾಘನೀಯ ಎಂದು ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಕೇಂದ್ರ ಸರ್ಕಾರವನ್ನು ಲೋಕಸಭೆಯಲ್ಲಿ ಹಾಡಿ ಹೊಗಳಿದ್ದರು. ಅಲ್ಲದೇ ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದೂ ಹೇಳಿದ್ದರು. ಹೀಗಿರುವಾಗ ಕಾಂಗ್ರೆಸ್ ನಾಯಕನ ಮಾತುಗಳು ಭಾರೀ ವಿವಾದ ಸೃಷ್ಟಿಸಿವೆ.