ನವದೆಹಲಿ(ಜ.07): ಭಾರತವು ಬಹುದಿನಗಳಿಂದ ಎದುರು ನೋಡುತ್ತಿರುವ 50 ಸಾವಿರ ಕೋಟಿ ರು. ಮೌಲ್ಯದ 2 ರಕ್ಷಣಾ ಒಪ್ಪಂದಗಳು ಈ ಹೊಸ ವರ್ಷದಲ್ಲಿ ಕೈಗೂಡುವ ನಿರೀಕ್ಷೆಯಿದೆ. 83 ದೇಶೀ ನಿರ್ಮಿತ ತೇಜಸ್‌ ಯುದ್ಧವಿಮಾನಗಳು ಹಾಗೂ 56 ಸರಕು ಸಾಗಣೆ ವಿಮಾನಗಳ ಖರೀದಿಯ ಒಪ್ಪಂದ ಇದಾಗಲಿದೆ.

ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌)ನಿಂದ 83 ತೇಜಸ್‌ ಮಾರ್ಕ್-1ಎ ಯುದ್ಧವಿಮಾನಗಳನ್ನು 37 ಸಾವಿರ ಕೋಟಿ ರು.ಗೆ ಖರೀದಿಸಲಾಗುತ್ತದೆ. ಇದು ಈವರೆಗಿನ ಅತಿ ದೊಡ್ಡ ದೇಶೀ ರಕ್ಷಣಾ ಒಪ್ಪಂದ ಎನ್ನಿಸಿಕೊಳ್ಳಲಿದೆ. ಗುತ್ತಿಗೆಗೆ ಸಹಿ ಹಾಕಿದ 3 ವರ್ಷದ ನಂತರ ಇವುಗಳು ರಕ್ಷಣಾ ಪಡೆಗಳಿಗೆ ಹಸ್ತಾಂತರಗೊಳ್ಳಲಿವೆ. ಈಗ ವಾಯುಪಡೆ ಗುತ್ತಿಗೆ ನೀಡಿರುವ 40 ತೇಜಸ್‌ ಮಾರ್ಕ್-1 ಯುದ್ಧ ವಿಮಾನಗಳಿಗಿಂತ ಹೆಚ್ಚುವರಿ 40 ಸುಧಾರಿತ ಅಂಶಗಳನ್ನು ಇವು ಹೊಂದಲಿವೆ.

ಇನ್ನು ಟಾಟಾ-ಏರ್‌ಬಸ್‌ ಜಂಟಿಯಾಗಿ 56 ಸರಕುಸಾಗಣೆ ‘ಸಿ-295’ ವಿಮಾನಗಳನ್ನು 11,929 ಕೋಟಿ ರು.ಗೆ ಖರೀದಿಸಲು ಉದ್ದೇಶಿಸಲಾಗಿದೆ. ಇವು ಈಗಾಗಲೇ ಇರುವ ‘ಆವ್ರೋ-748’ ಯುದ್ಧವಿಮಾನಗಳ ಸ್ಥಾನವನ್ನು ಅಲಂಕರಿಸಲಿವೆ. ಈ ಊಲಕ ಭಾರತದಲ್ಲಿ ಮೊತ್ತಮೊದಲ ಬಾರಿಗೆ ವಾಯುಯಡೆ ಜತೆ ಖಾಸಗಿ ಕಂಪನಿಯೊಂದು ಒಪ್ಪಂದ ಮಾಡಿಕೊಂಡಂತಾಗುತ್ತದೆ.