Asianet Suvarna News Asianet Suvarna News

Made In India| ಶತ್ರು ದೇಶದ ರಾಡಾರ್‌ ಕಣ್ಣಿಗೆ ಬೀಳಲ್ಲ: ಭಾರತದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನ!

* ಕೇವಲ 3 ದೇಶಗಳ ಬಳಿ ಇವೆ ಈ ತಂತ್ರಜ್ಞಾನದ ವಿಮಾನಗಳು

* 2022ರಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನ ಯೋಜನೆ ಶುರು

India to get its own 5th Gen fighter AMCA prototype to get approval in 2022 pod
Author
Bangalore, First Published Nov 23, 2021, 6:00 AM IST
  • Facebook
  • Twitter
  • Whatsapp

ನವದೆಹಲಿ(ನ.23): ದೇಶೀಯವಾಗಿಯೇ ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು (5th Generation Fighter Jet) ತಯಾರಿಸುವ ಭಾರತದ ಮಹತ್ವಾಕಾಂಕ್ಷೆಯ ಯೋಜನೆ 2022ರಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಶತ್ರುಗಳ ಕಣ್ತಪ್ಪಿಸುವ ಲಕ್ಷಣಗಳನ್ನು ಹೊಂದಿರುವ ಯುದ್ಧ ವಿಮಾನಗಳು ಇವಾಗಲಿವೆ.

ಈಗ ಸರ್ಕಾರದ ಮಟ್ಟದಲ್ಲಿ ಈ ಪ್ರಸ್ತಾಪ ಇದೆ. ಇದನ್ನು ಭದ್ರತಾ ಸಚಿವಾಲಯದ ಸಂಪುಟ ಸಮಿತಿ ಅನುಮೋದನೆಗೆ ಮುಂದಿನ ವರ್ಷದ ಆರಂಭದಲ್ಲಿ ಕಳಿಸುವ ಸಾಧ್ಯತೆ ಇದೆ. ಬಳಿಕ ಹಣಕಾಸು ಹಾಗೂ ರಕ್ಷಣಾ ಇಲಾಖೆಗಳು (Ministry of Defence & Ministry of Finance) ಚರ್ಚಿಸಿ ಇದಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ವಾಯುಪಡೆ (Indian Air Force) ಬಳಿ ಈಗಿರುವ ಯುದ್ಧವಿಮಾನಗಳ ಸಾಮರ್ಥ್ಯ ಸಾಲದ್ದಾಗಿದ್ದು, ಅದು ಇನ್ನೂ ಹೆಚ್ಚಿನ ಸಾಮರ್ಥ್ಯದ ಯುದ್ಧವಿಮಾನಕ್ಕೆ ಎದುರು ನೋಡುತ್ತಿದೆ. ಆದರೆ, 5ನೇ ತಲೆಮಾರಿನ ಯುದ್ಧ ವಿಮಾನ ಉತ್ಪಾದನೆ ವೆಚ್ಚದಾಯಕ ಹಾಗೂ ಸಂಕೀರ್ಣ ಪ್ರಕ್ರಿಯೆಯಾಗಿದೆ.

ಹಾಲಿ ಅಮೆರಿಕದ ಎಫ್‌/ಎ-22 ರಾಪ್ಟರ್‌, ಎಫ್‌-35, ಚೀನಾದ ಚೆಂಗ್ಡು ಜೆ-20 ಮತ್ತು ರಷ್ಯಾದ ಸುಖೋಯ್‌ -57 ಮಾತ್ರವೇ 5ನೇ ತಲೆಮಾರಿನ ಯುದ್ಧ ವಿಮಾನಗಳು ಎನ್ನಿಸಿಕೊಂಡಿವೆ. ಈ ಪೈಕಿ ಜೆ-20 ಮತ್ತು ಸುಖೋಯ್‌ -57 ಕೂಡಾ ಪೂರ್ಣ ಪ್ರಮಾಣದ 5ನೇ ತಲೆಮಾರಿನ ಯುದ್ಧ ವಿಮಾನಗಳಲ್ಲ ಎಂಬುದು ವಿಜ್ಞಾನಿಗಳ ಹೇಳಿಕೆ. ಈಗ ಭಾರತಕ್ಕೆ ಬರುತ್ತಿರುವ 36 ರಫೇಲ್‌ ಯುದ್ಧವಿಮಾನಗಳು 4.5ನೇ ತಲೆಮಾರಿನ ಯುದ್ಧವಿಮಾಗಳಾಗಿವೆ.

5ನೇ ತಲೆಮಾರಿನ, 25 ಟನ್‌ ಭಾರದ ಸುಧಾರಿತ ಮಧ್ಯಮ ಯುದ್ಧ ವಿಮಾನಗಳನ್ನು (Advanced Medium Combat Aircraft) ಸಿದ್ಧಪಡಿಸಬೇಕು ಎಂದರೆ 15 ಸಾವಿರ ಕೋಟಿ ರು. ಬೇಕು. 2025-26ಕ್ಕೆ ಇಂಥ ಮೊದಲ ಯುದ್ಧ ವಿಮಾನದ ಮಾದರಿ ಸೃಷ್ಟಿಆಗಬಹುದು. 2030-31ಕ್ಕೆ ಉತ್ಪಾದನೆ ಆರಂಭ ಆಗಬಹುದು ಎಂದು ವರದಿಯೊಂದು ಹೇಳಿದೆ.

5ನೇ ತಲೆಮಾರಿನ ವಿಶಿಷ್ಠತೆಗಳು

* ರಹಸ್ಯ ಹಾರಾಟ, ಶತ್ರು ದೇಶದ ರಾಡಾರ್‌ ಕಣ್ಣಿಗೆ ಬೀಳಲ್ಲ

* ಯಾವುದೇ ವಾತಾವರಣದಲ್ಲೂ ಹಾರಾಟದ ಸಾಮರ್ಥ್ಯ

* ಶಸ್ತ್ರಾಸ್ತ್ರ ಹೊತ್ತೊಯ್ಯುವ ವೇಳೆಯೇ ಸಾಮಾನ್ಯ ವೇಗ

* ಅತ್ಯಾಧುನಿಕ ವೈಮಾನಿಕ ತಂತ್ರಜ್ಞಾನ ಅಳವಡಿಕೆ

* ಯುದ್ಧದ ವೇಳೆ ಏಕಕಾಲಕ್ಕೆ ಹಲವು ದತ್ತಾಂಶ ವಿಶ್ಲೇಷಣೆ

ಭಾರತಾಂಬೆಯ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್‌ಗೆ  ಇಂದು ವೀರ ಚಕ್ರ ಪ್ರದಾನ!

ಫೆಬ್ರವರಿ 2019 ರಲ್ಲಿ ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್ -16 (F-16) ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ (Wing Commander Abhinandan Varthaman) ಅವರಿಗೆ ಸೋಮವಾರ, ನವೆಂಬರ್ 22 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramanath Kovind) ಅವರು ವೀರ ಚಕ್ರವನ್ನು (Vir Chakra) ಪ್ರದಾನ ಮಾಡಿದ್ದಾರೆ. ಅಭಿನಂದನ್  ಎಫ್ -16 ಯುದ್ಧ ವಿಮಾನ ಹೊಡೆದುರುಳಿಸಿದ ಏಕೈಕ ಮಿಗ್ -21 ಪೈಲಟ್ (Mig-21) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತೀಯ ವಾಯುಪಡೆಯು ಈ ಹಿಂದೆ ಯುದ್ಧ ವೀರ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಿತ್ತು.

ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ F-16 ಅನ್ನು ಹೊಡೆದುರುಳಿಸಿದರು ಆದರೆ ಅವರ ವಿಮಾನವನ್ನು ಶತ್ರು ಪಡೆಗಳು ಹೊಡೆದುರುಳಿಸಿದ ನಂತರ ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಪಡೆಗಳು ವಾಯುದಾಳಿ ನಡೆಸಿದ ಮರುದಿನವೇ, ವಾಯುಪಡೆ ವಿಮಾನದ ಪತನದ ಕಾರಣ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದರು. ಇಂತಹ ಬಂಧನದಿಂದ ಅಭಿನಂದನ್‌ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ಅನ್ವಯ ಅಂದಿನ ಭಾರತೀಯ ಗುಪ್ತಚರ ದಳದ (ರಾ) ಮುಖ್ಯಸ್ಥ ಅನಿಲ್‌ ಧಸ್ಮಾನಾ ನೀಡಿದ ಒಂದು ಖಡಕ್‌ ಸಂದೇಶ.

 

Delhi: Wing Commander (now Group Captain) Abhinandan Varthaman being accorded the Vir Chakra by President Ram Nath Kovind, for shooting down a Pakistani F-16 fighter aircraft during aerial combat on February 27, 2019. pic.twitter.com/CsDC0cYqds

— ANI (@ANI) November 22, 2021
Follow Us:
Download App:
  • android
  • ios