ನವದೆಹಲಿ(ಜೂ.02): ಕೊರೋನಾ ವೈರಸ್ ತಡೆಗೆ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರೂ ಕೂಡ ಎಚ್ಚರವಹಿಸಬೇಕಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಭಾರತದಲ್ಲಿ ಕೊರೋನಾ ಉಚ್ರಾಯ ಸ್ಥಿತಿ ತಲುಪಿಲ್ಲ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ನಿಯಂತ್ರಣದಲ್ಲಿದೆ. ಇತ್ತ ಗುಣಮುಖರ ಸಂಖ್ಯೆ ಕೂಡ ಇತರೆಲ್ಲಾ ದೇಶಗಳಿಗಿಂತ ಹೆಚ್ಚಿದೆ ಎಂದಿದೆ.

ಒಂದು ತಿಂಗಳ ಹಸುಗೂಸಿನೊಂದಿಗೆ ಮುಂಬೈನಿಂದ ಆಗಮಿಸಿದ ಬಾಣಂತಿ; ಗದಗದಲ್ಲಿ ಕ್ವಾರಂಟೈನ್

ಭಾರತದಲ್ಲಿ ಕೊರೋನಾ ವೈರಸ್‌ನಿಂದ ಗುಣಮುಖರಾದವರ ಸಂಖ್ಯೆ ಶೇಕಡಾ 48.07. ಇಲ್ಲೀವರೆಗೆ 95,527 ಮಂದಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದ್ದಾರೆ. ಭಾರತದಲ್ಲಿ 5,598 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ 1,98,706ಕ್ಕೆ ಏರಿಕೆಯಾಗಿದೆ.

ಡ್ಯೂಟಿ ಮುಗಿದ ಮೇಲೆ ರಿಲ್ಯಾಕ್ಸ್ ಆಗೋಕೆ ವಿಕ್ಟೋರಿಯಾ ಆಸ್ಪತ್ರೆ ವಾರಿಯರ್ಸ್ ಏನ್ಮಾಡ್ತಾರೆ ನೋಡಿ..!...

ಕೊರೋನಾ ಸೋಂಕಿತರ ಸಾವಿನ ಪ್ರಮಾಣ ಶೇಕಡಾ 2.82. ಕೊರೋನಾ ಭೀಕರತೆಗೆ ಗುರಿಯಾಗಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ 7ನೇ ಸ್ಥಾನ. ಆದರೆ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡ ದೇಶಗಳೆಲ್ಲಾ ಕಡಿಮೆ ಜನಸಂಖ್ಯೆ ಹೊಂದಿದೆ. ಈ ದೇಶಗಳ ಜೊತೆ ಭಾರತವನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.

ಲಾಕ್‌ಡೌನ್ ಸೇರಿದಂತೆ ಹಲವು ಆದೇಶದ ಮೂಲಕ ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದೀಗ ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಶುಚಿತ್ವ ಕಾಪಾಡಿಕೊಳ್ಳುವುದು ಸೇರಿದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದಿದೆ.