ನವದೆಹಲಿ(ಜು.03): ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಇದೀಗ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಜುಲೈ 31ರ ವರೆಗೆ ರದ್ದು ಮಾಡಿದೆ. ಕೊರೋನಾ ವೈರಸ್ ಕಾರಣ ಮಾರ್ಚ್ ಅಂತಿಮ ವಾರದಲ್ಲಿ ಎಲ್ಲಾ ವಿಮಾನ ಸೇವೆಗಳನ್ನು ರದ್ದು ಮಾಡಲಾಗಿದೆ. ಲಾಕ್‌ಡೌನ್ ಆರಂಭವಾಗುತ್ತಿದ್ದಂತೆ ವಿಮಾನ ಸೇವೆ ಸೇರಿದಂತೆ ಬಹುತೇಕ ಎಲ್ಲಾ ಸೇವೇಗಳು ರದ್ದಾಗಿತ್ತು. ಇದೀಗ ಅಂತಾರಾಷ್ಟ್ರೀ ವಿಮಾನ ಹಾರಾಟದ ಮೇಲಿನ ತಾತ್ಕಾಲಿಕ ಸ್ಥಗಿತವನ್ನು ಮುಂದುವರಿಸಿದೆ.

ಜು.4ರಂದು ಕುವೈಟ್‌ ಕನ್ನ​ಡಿ​ಗ​ರಿಗೆ ಮಂಗಳೂರಿಗೆ ಚಾರ್ಟರ್ಡ್ ವಿಮಾನ..

ಅನ್‌ಲಾಕ್ ಆರಂಭವಾಗುತ್ತಿದ್ದಂತೆ ದೇಸಿ ವಿಮಾನ ಹಾರಾಟ ಆರಂಭಗೊಂಡಿದೆ. ಕೆಲ ಮಾರ್ಗಗಳಲ್ಲಿ ನಿಯಮಿತ ದೇಸಿ ವಿಮಾನ ಹಾರಾಟ ಆರಂಭಗೊಂಡಿದೆ. ಆದರೆ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಜುಲೈ 15ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಹೊಸ ನಾಗರಿಕ ವಿಮಾನಯಾನ ಸಚಿವಾಲಯ ಜುಲೈ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಿದೆ.

23ರಂದು ದುಬೈನಲ್ಲಿ ಸಿಲುಕಿದ 200 ಮಂದಿ ಕನ್ನಡಿಗರು ತವರಿಗೆ..!...

ವಂದೇ ಭಾರತ ಮಿಶನ್ ಅಡಿಯಲ್ಲಿ ಕೆಲ ಅಂತಾರಾಷ್ಟ್ರೀ ವಿಮಾನ ಹಾರಟ ಸೇವೆ ಲಭ್ಯವಿದೆ. ಕೆಲ ಮಾರ್ಗಗಳಲ್ಲಿ ನಿಯಮಿತ ವಿಮಾನ ಸೇವೆ ಲಭ್ಯವಾಗಲಿದೆ. ಇದನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆ ಲಭ್ಯವಿರುವುದಿಲ್ಲ. ಜುಲೈ 31ರ ಬಳಿಕ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.