Asianet Suvarna News Asianet Suvarna News

ತಲಾ 1 ಕೋಟಿ ತೆತ್ತು ಬ್ರಿಟನ್‌ಗೆ ತೆರಳಿದ ಭಾರತದ ಶ್ರೀಮಂತರು!

ತಲಾ 1 ಕೋಟಿ ತೆತ್ತು ಬ್ರಿಟನ್‌ಗೆ ತೆರಳಿದ ಭಾರತದ ಧನಿಕರು!| ಭಾರತದ ವಿಮಾನಗಳಿಗೆ ಬ್ರಿಟನ್‌ ನಿರ್ಬಂಧ ಹಿನ್ನೆಲೆ| ಭಾರೀ ವೆಚ್ಚದ 8 ಬಾಡಿಗೆ ವಿಮಾನ ಬುಕ್‌| ಏ.23ರ ಗಡುವು ಮುಗಿವುದರೊಳಗೆ ಲಂಡನ್‌ ಸೇರಿಕೊಂಡ್ರು| ಒಟ್ಟಾರೆ 8 ವಿಮಾನದಲ್ಲಿನ ಪ್ರಯಾಣ ವೆಚ್ಚ 8 ಕೋಟಿ!

India super rich beat deadline land in UK in private jets pod
Author
Bangalore, First Published Apr 27, 2021, 7:46 AM IST

ಲಂಡನ್‌(ಏ.27): ಕೊರೋನಾ ಕೇಸುಗಳು ಅಧಿಕವಾಗಿರುವ ಭಾರತವನ್ನು ‘ಕೆಂಪು ಪಟ್ಟಿ’ಗೆ ಸೇರಿಸಿದ್ದ ಬ್ರಿಟನ್‌ ಸರ್ಕಾರ, ಏಪ್ರಿಲ್‌ 23ರ ನಸುಕಿನ 4 ಗಂಟೆಯಿಂದ ಭಾರತದ ವಿಮಾನಗಳ ಆಗಮನ ನಿರ್ಬಂಧಿಸಿತ್ತು.

ಏ.19ರಂದೇ ಈ ಘೋಷಣೆ ಮಾಡಿತ್ತು. ಹೀಗಾಗಿ ಏ.19ರಿಂದ 23ರವರೆಗಿನ 4 ದಿನದ ಅವಧಿಯಲ್ಲಿ ಭಾರತದ ಶ್ರೀಮಂತರು ತಲಾ 1 ಕೋಟಿ ರು. ವೆಚ್ಚ ಮಾಡಿ 8 ಬಾಡಿಗೆ ವಿಮಾನ ಪಡೆದು ಬ್ರಿಟನ್‌ ಸೇರಿಕೊಂಡಿದ್ದಾರೆ ಎಂಬ ಕುತೂಹಲದ ವಿಷಯ ಬೆಳಕಿಗೆ ಬಂದಿದೆ.

ಭಾರತದಿಂದ ಬ್ರಿಟನ್‌ಗೆ 9 ತಾಸಿನ ಪ್ರಯಾಣಾವಧಿ ಇದೆ. ಏ.19ರಂದು ಬ್ರಿಟನ್‌ ಸರ್ಕಾರ ಭಾರತದಿಂದ ವಿಮಾನ ಆಗಮನ ನಿರ್ಬಂಧ ಘೋಷಣೆ ಮಾಡುತ್ತಿದ್ದಂತೆಯೇ ಕೆಲವು ಶ್ರೀಮಂತರು ಎಚ್ಚೆತ್ತಿದ್ದಾರೆ. ಮುಂಬೈ ಸೇರಿ ಕೆಲವು ಮಹಾನಗರಗಳಿಂದ ‘ಬೊಂಬಾರ್ಡಿಯರ್‌ ಗ್ಲೋಬಲ್‌ 6000’ ಬಾಡಿಗೆ ವಿಮಾನ ಸೇರಿ 8 ವಿಮಾನಗಳನ್ನು ತಲಾ 1 ಕೋಟಿ ರು.ಗೆ ಬುಕ್‌ ಮಾಡಿಕೊಂಡಿದ್ದಾರೆ.

ಏ.23ರ ನಸುಕಿನ 4ರ ಗಡುವು ಮುಗಿವ ಮುನ್ನ ಲಂಡನ್‌ ಸೇರಿಕೊಂಡಿದ್ದಾರೆ. ಅದರಲ್ಲಿ ಬೊಂಬಾರ್ಡಿಯರ್‌ ವಿಮಾನವಂತೂ ಗಡುವು ಮುಗಿವ ಕೇವಲ 45 ನಿಮಿಷ ಮುನ್ನ ಲಂಡನ್‌ ತಲುಪಿತು ಎಂದು ವರದಿಯಾಗಿದೆ.

Follow Us:
Download App:
  • android
  • ios