ನವದೆಹಲಿ(ಆ.07): ಸ್ವಾತಂತ್ರ್ಯ ನತಂರ ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆದರೆ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನಗಳು ನಡೆಯಲೇ ಇಲ್ಲ. ಎಲ್ಲವೂ ಕಣ್ಣೊರೆಸುವ ತಂತ್ರವಾಗಿತ್ತೇ ಹೊರತು ವಿವಾದ ಬಗೆ ಹರಿಯಲಿಲ್ಲ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ  ನೇತೃತ್ವದ ಸರ್ಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿ ಐತಿಹಾಸಿಕ ನಿರ್ಧಾರ ಘೋಷಣೆ ಮಾಡಿತು. ಇಷ್ಟೇ ಅಲ್ಲ   ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತು. ಇದು ಪಾಕಿಸ್ತಾನಕ್ಕೆ ಆಘಾತ ನೀಡಿತ್ತು. ಇದೀಗ ಆರ್ಟಿಕಲ್ 370 ರದ್ದು ಮಾಡಿ ಒಂದು ವರ್ಷವಾಗುತ್ತಿದ್ದಂತೆ ಟರ್ಕಿ, ಕಾಶ್ಮೀರ ವಿಚಾರದಲ್ಲಿ ಮೂಗುತೂರಿಸಿದೆ. ಆದರೆ ಭಾರತದ ತಿರುಗೇಟಿಗೆ ಟರ್ಕಿ ಸೈಲೆಂಟ್ ಆಗಿದೆ.

71 ವರ್ಷದಲ್ಲಿ ಸಿಗದೇ ಇದ್ದದ್ದು, ಕಳೆದೊಂದು ವರ್ಷದಲ್ಲಿ ಸಿಕ್ಕಿದೆ; ಲಡಾಖ್ ಸಂಸದ ಜಮ್ಯಾಂಗ್!

ಆರ್ಟಿಕಲ್ 370 ರದ್ದ ಘೋಷಣೆಯನ್ನು ಪಾಕಿಸ್ತಾನ ತೀವ್ರವಾಗಿ ವಿರೋಧಿಸಿತ್ತು. ಆದರೆ ಪಾಕ್ ಮಾತಿಗೆ ಭಾರತ ಸೊಪ್ಪು ಹಾಕಿಲ್ಲ. ಇದೀಗ ಆರ್ಟಿಕಲ್ 370 ರದ್ದು ಮಾಡಿ ಒಂದು ವರ್ಷವಾದ ಬೆನ್ನಲ್ಲೇ ಟರ್ಕಿ ವಿದೇಶಾಂಗ ಇಲಾಖೆ ಆರ್ಟಿಕಲ್ 370 ರದ್ದು ತಪ್ಪು ಎಂದಿದೆ. ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ಬದಲು ಭಾರತ ಮತ್ತೆ ಉದ್ವಿಘ್ನ ವಾತಾವರಣ ನಿರ್ಮಾಣ ಮಾಡಿದೆ. ಕಾಶ್ಮೀರ ವಿಚಾರವನ್ನು ಪಾಕಿಸ್ತಾನ ಜೊತೆ ಮಾತುಕತೆ ಮೂಲಕ ಬಗೆಹರಿಸುವ ಬದಲು ಆರ್ಟಿಕಲ್ 370 ರದ್ದು ಮಾಡಿ ತಪ್ಪು ಮಾಡಿದೆ ಎಂದಿತ್ತು.

ಕಾಶ್ಮೀರಕ್ಕಾಗಿ ನಿರಂತರ ಹೋರಾಟ; ಗುಡುಗಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್!

ಟರ್ಕಿ ಹೇಳಿಕೆಯನ್ನು ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯ ಖಂಡಿಸಿದೆ. ಟರ್ಕಿ ವಾಸ್ತವ ಸ್ಥಿತಿಯನ್ನು ಅರಿತು ಮಾತನಾಡಬೇಕು. ಇದು ಭಾರತದ ಆತಂರಿಕ ವಿಚಾರ. ಸರಿಯಾಗಿ ಮಾಹಿತಿ ತಿಳಿದುಕೊಂಡು ಹೇಳಿಕೆ ನೀಡಬೇಕು ಎಂದು ಭಾರತ ಪ್ರತಿಕ್ರಿಯೆ ನೀಡಿದೆ. ಭಾರತದ ತಿರುಗೇಟಿಗೆ ಟರ್ಕಿ ಸೈಲೆಂಟ್ ಆಗಿದೆ.