Asianet Suvarna News Asianet Suvarna News

Floods & Droughts: ದೇಶಕ್ಕೆ ಆತಂಕ: ಮುಂದುವರೆಯಲಿದೆ ಪ್ರವಾಹ, ಬರ, ಚಂಡಮಾರುತ: ತಜ್ಞರ ಎಚ್ಚರಿಕೆ!

* ದೇಶದಲ್ಲಿ ಅಪಾರ ಪ್ರವಾಹ, ಮಳೆ, ಚಂಡಮಾರುತ

* ಇನ್ನೂ ಮುಂದುವರೆಯಲಿದೆ ಈ ಪರಿಸ್ಥಿತಿ ಎಂದ ಹವಾಮಾನ ತಜ್ಞರು

* ಶಾಕ್ ಕೊಟ್ಟಿದೆ ತಜ್ಞರ ವರದಿ, ಹೀಗಾದರೆ ಮುಂದೇನು?

 

India should be prepared for extreme sea level events floods and droughts Meteorologists pod
Author
Bangalore, First Published Nov 24, 2021, 12:19 AM IST

ನವದೆಹಲಿ(ನ.24): ಭಾರತದ ದಕ್ಷಿಣ (South India) ರಾಜ್ಯಗಳು ಮಳೆ ಮತ್ತು ಪ್ರವಾಹದಿಂದ (Rain And Floods) ಬಳಲುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಸಮುದ್ರ ತೀರಕ್ಕೆ ಹೊಂದಿಕೊಂಡಿರುವಂತಹ ಕರಾವಳಿ ರಾಜ್ಯಗಳು (Coastal States) ಮತ್ತು ಪ್ರದೇಶಗಳಲ್ಲಿ ಮಳೆ ಮತ್ತು ಪ್ರವಾಹದ ಘಟನೆಗಳು ಹೆಚ್ಚಿವೆ. ಏತನ್ಮಧ್ಯೆ, ಸಮುದ್ರದಲ್ಲಿನ ಅಸಾಮಾನ್ಯ ಚಲನವಲನಗಳಿಂದ ಮುಂಬರುವ ದಿನಗಳಲ್ಲಿ ದೇಶದಲ್ಲಿ ಚಂಡಮಾರುತ (Cyclone), ಬಿರುಗಾಳಿ, ಪ್ರವಾಹ (Flood) ಮತ್ತು ಅನಾವೃಷ್ಟಿಗಳ (Drought) ಘಟನೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದಾರೆ. ಈ ವರ್ಷ, ಯಾಸ್ ಚಂಡಮಾರುತವು (Yaas Cyclone) ಮೇ 26 ರಂದು ಉತ್ತರ ಒಡಿಶಾ (Odisha)ಕರಾವಳಿಯನ್ನು ಅಪ್ಪಳಿಸಿತು. ಅದೇ ಸಮಯದಲ್ಲಿ, ಟೌಕ್ಟೇ (Cyclone Tauktae) ಚಂಡಮಾರುತವು ಗುಜರಾತ್ (Gujarat) ಕರಾವಳಿಗೆ ಅಪ್ಪಳಿಸಿತ್ತು ಎಂಬುವುದು ಉಲ್ಲೇಖನೀಯ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟ್ರೋಲಜಿಯ (Indian Institute Of Tropical Meteorology) ಹವಾಮಾನ ವಿಜ್ಞಾನಿ ಸ್ವಪ್ನಾ ಪಾನಿಕಲ್ (Swapna Panikal), ಸಾಗರದಲ್ಲಿನ ಉಬ್ಬರವಿಳಿತಗಳು ಮತ್ತು ಇತರ ಚಟುವಟಿಕೆಗಳು ಅಪಾಯದಿಂದ ಕೂಡಿದ ಸಾಗರ ಘಟನೆಗಳ ಹೆಚ್ಚಳದ ಸಾಧ್ಯತೆಯನ್ನು ಸೂಚಿಸುತ್ತವೆ ಎಂದು ಹೇಳಿದರು. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 1870 ರ ಆರಂಭದಿಂದ ಮುಂಬೈ ಕರಾವಳಿಯಲ್ಲಿ ಈ ಸಾಗರ ಸಂಬಂಧಿ ಘಟನೆಗಳು ಹೆಚ್ಚಳಗೊಂಡಿವೆ ಎಂದು ಡೇಟಾ ತೋರಿಸುತ್ತದೆ ಎಂದು ಹೇಳಿದರು.

ಸಮುದ್ರ ಮಟ್ಟದಲ್ಲಿ ತ್ವರಿತ ಏರಿಕೆ

ಭಾರತದ ಕರಾವಳಿ ರಾಜ್ಯಗಳು ಸಮುದ್ರ ಮಟ್ಟದಲ್ಲಿನ (Sea Level) ಏರಿಳಿತಗಳಿಗೆ ಉತ್ತಮ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹವಾಮಾನ ತಜ್ಞೆ ಸ್ವಪ್ನಾ ಪಾನಿಕಲ್ ಎಚ್ಚರಿಸಿದ್ದಾರೆ. 1870 ಮತ್ತು 2000 ರ ನಡುವೆ, ಜಾಗತಿಕ ಸಮುದ್ರ ಮಟ್ಟವು ವರ್ಷಕ್ಕೆ 1.8 ಮಿಮೀ ಹೆಚ್ಚಾಗಿದೆ, ಇದು 1993 ಮತ್ತು 2017 ರ ನಡುವೆ 3.3 ಮಿಮೀ ಆಗುವ ಮೂಲಕ ದ್ವಿಗುಣಗೊಂಡಿದೆ ಎಂದು ಅವರು ಹೇಳಿದರು.

ಹಿಮಬಂಡೆಗಳ ಕರಗುವಿಕೆ ಮತ್ತು ಸಮುದ್ರದ ನೀರಿನ ಮೇಲೆ ಶಾಖದ ಪರಿಣಾಮದಿಂದಾಗಿ, ಸಮುದ್ರ ಮಟ್ಟ ಹೆಚ್ಚಾಗಿದೆ. ಸಾಗರಗಳು ಪರಿಸರದ ಶಾಖದ ಶೇಕಡಾ 91 ಕ್ಕಿಂತ ಹೆಚ್ಚು ಹೀರಿಕೊಳ್ಳುತ್ತವೆ. ಭೂಮಿಯ ಮೇಲಿನ ಇತರ ಘಟಕಗಳಿಗೆ ಹೋಲಿಸಿದರೆ ಅವು ಹೆಚ್ಚಿನ ಶಾಖ ಸಾಮರ್ಥ್ಯವನ್ನು ಹೊಂದಿವೆ. ಜಾಗತಿಕ ಸರಾಸರಿ ಸಮುದ್ರ ಮಟ್ಟ ಏರುತ್ತಿದೆ ಮತ್ತು ಅರಬ್ಬಿ ಸಮುದ್ರ ಸೇರಿದಂತೆ ಹಿಂದೂ ಮಹಾಸಾಗರದಲ್ಲಿ ಸಮುದ್ರ ಮಟ್ಟವು ಹೆಚ್ಚಾಗುವ ನಿರೀಕ್ಷೆಯಿದೆ. 2050 ರ ವೇಳೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಮುದ್ರ ಮಟ್ಟವು 15 ರಿಂದ 20 ಸೆಂ.ಮೀ ವರೆಗೆ ಏರುವ ನಿರೀಕ್ಷೆಯಿದೆ ಮತ್ತು ಇದು ಆತಂಕಕಾರಿ ವಿಷಯವಾಗಿದೆ. ಸಮುದ್ರ ಮಟ್ಟ ತೀವ್ರವಾಗಿ ಏರಿಕೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಹಲವು ಭೀಕರ ಚಂಡಮಾರುತಗಳಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿಜ್ಞಾನಿ ಸ್ವಪ್ನಾ ಪಾನಿಕಲ್ ಹೇಳಿದ್ದಾರೆ.

ಭೂ ವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ, ಎಂ ರಾಜೀವನ್ ಭಾರತದಲ್ಲಿ ಮುಂಗಾರಿನಲ್ಲಿ(Monsoon) ಸಾಗರದ ಪಾತ್ರ ಎಂಬ ವಿಚಾರವಾಗಿ ಮಾತನಾಡುತ್ತಾ, ಈಶಾನ್ಯ ಮುಂಗಾರಿನಲ್ಲಿ ಸುರಿದ ಭಾರೀ ಮಳೆ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಹೆಚ್ಚಲಿವೆ ಎಂಬ ಸಂಕೇತ ಕೊಟ್ಟಿವೆ. ಅಲ್ಲದೇ ಹವಾಮಾನ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಅವಲೋಕನಗಳು ಸೂಚಿಸುತ್ತವೆ. ಮಳೆ ಮತ್ತಷ್ಟು ಹೆಚ್ಚಾಗಲಿದೆ ಎಂದಿದ್ದಾರೆ. ಅದೇ ಸಮಯದಲ್ಲಿ, ಭಾರತೀಯ ಮುಂಗಾರಿನ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ಮೇಲ್ವಿಚಾರಣೆ ಮಾಡುವುದು ಸಂಶೋಧನಾ ಸಮುದಾಯಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಒತ್ತಿ ಹೇಳಿದರು.

Follow Us:
Download App:
  • android
  • ios