ನವದೆಹಲಿ(ಫೆ.25): 30 ಮಿಲಿಯನ್‌ ಡಾಲರ್‌ (217 ಕೋಟಿ ರು.)ಗಿಂತಲೂ ಅಧಿಕ ಸಂಪತ್ತು ಇರುವ ಆಗರ್ಭ ಶ್ರೀಮಂತರ ಸಂಖ್ಯೆ ಭಾರತದಲ್ಲಿ ಮುಂದಿನ 5 ವರ್ಷದಲ್ಲಿ ಶೇ.63ರಷ್ಟುಏರಿಕೆ ಆಗಲಿದ್ದು, 11,198 ಮಂದಿ ಆಗರ್ಭ ಶ್ರೀಮಂತರನ್ನು ಭಾರತ ಹೊಂದಿರಲಿದೆ ಎಂದು ವರದಿಯೊಂದು ತಿಳಿಸಿದೆ.

ಸಲಹಾ ಸಂಸ್ಥೆ ನೈಟ್‌ ಫ್ರಾಂಕ್‌ ಇಂಡಿಯಾ ವರದಿಯ ಪ್ರಕಾರ ಪಸ್ತುತ ವಿಶ್ವದಲ್ಲಿ 5,21,653 ಮಂದಿ 200 ಕೋಟಿಗೂ ಅಧಿಕ ಸಂಪತ್ತಿನ ಒಡೆಯರಾಗಿದ್ದು, ಅವರಲ್ಲಿ 6,884 ಮಂದಿ ಭಾರತೀಯರಾಗಿದ್ದಾರೆ.

2025ರ ವೇಳೆಗೆ ಭಾರತದಲ್ಲಿ ಆಗರ್ಭ ಶ್ರೀಮಂತರ ಸಂಖ್ಯೆ 11,198ಕ್ಕೆ ಏರಿಕೆ ಆಗಲಿದೆ. ಅದೇ ರೀತಿ ಶತ ಕೋಟ್ಯಧೀಶರ ಸಂಖ್ಯೆ ಶೇ.43ರಷ್ಟುಅಂದರೆ 113ರಿಂದ 162ಕ್ಕೆ ಏರಿಕೆ ಆಗಲಿದೆ ಎಂದು ವರದಿ ತಿಳಿಸಿದೆ.