Asianet Suvarna News Asianet Suvarna News

ದೇಶದಲ್ಲಿ ಒಂದೆ ದಿನ ದಾಖಲೆಯ 1.31 ಲಕ್ಷ ಮಂದಿಗೆ ಸೋಂಕು!

ನಿನ್ನೆ ದಾಖಲೆಯ 1.31 ಲಕ್ಷ ಮಂದಿಗೆ ಸೋಂಕು| ಇದು ದೇಶದಲ್ಲಿ ದಾಖಲಾದ ಈವರೆಗಿನ ಗರಿಷ್ಠ ದೈನಂದಿನ ಕೇಸ್‌| ನಿನ್ನೆ 780 ಮಂದಿ ಸಾವು| ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷದ ಸನಿಹಕ್ಕೆ

India reports over 1 31 lakh daily Covid cases in new high 780 deaths pod
Author
Bangalore, First Published Apr 10, 2021, 8:40 AM IST

ನವದೆಹಲಿ(ಏ.10): ಕಳೆದ ಕೆಲ ದಿನಗಳಿಂದ ಭಾರೀ ಪ್ರಮಾಣದಲ್ಲಿ ದಾಖಲಾಗುತ್ತಿರುವ ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆ ಶುಕ್ರವಾರ ಮತ್ತೊಂದು ದಾಖಲೆ ಬರೆದಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 1,31,642 ಕೊರೋನಾ ಪ್ರಕರಣಗಳು ವರದಿಯಾಗಿವೆ.

ಇನ್ನು ಒಂದೇ ದಿನ 780 ಮಂದಿ ಬಲಿಯಾಗಿದ್ದು, ದೇಶದಲ್ಲಿ ಕೋವಿಡ್‌ ವೈರಸ್‌ಗೆ ಬಲಿಯಾದವರ ಸಂಖ್ಯೆ 1,67,642 ಮಂದಿಗೆ ಏರಿಕೆಯಾಗಿದೆ.

ಮತ್ತೊಂದೆಡೆ ಕಳೆದ 30 ದಿನಗಳಿಂದ ದೇಶಾದ್ಯಂತ ಕೊರೋನಾ ವೈರಸ್‌ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದೀಗ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 9,79,608ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ ಶೇ.7.5ರಷ್ಟುಮಂದಿ ಸಕ್ರಿಯ ಸೋಂಕಿತರಾಗಿದ್ದಾರೆ. ಏತನ್ಮಧ್ಯೆ, ಕೊರೋನಾ ವೈರಸ್‌ನಿಂದ ಗುಣಮುಖರಾಗುವವರ ಸಂಖ್ಯೆ ಶೇ.91.22ಕ್ಕೆ ಕುಸಿದಿದೆ.

ಇದೇ ವರ್ಷದ ಫೆಬ್ರವರಿ 12ರಂದು ಸಕ್ರಿಯ ಸೋಂಕಿತರ ಸಂಖ್ಯೆ ಅತೀ ಕನಿಷ್ಠ ಅಂದರೆ 1.35 ಲಕ್ಷಕ್ಕೆ ಕುಸಿದಿತ್ತು. ಆದರೆ ಇದೀಗ ಕೊರೋನಾ ವೈರಸ್‌ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.

10 ರಾಜ್ಯದಲ್ಲಿ ಶೇ.80 ಕೇಸು:

ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಶೇ.83.29ರಷ್ಟುಪ್ರಕರಣಗಳು ಶುಕ್ರವಾರ ಬೆಳಗಗ್ಗೆ 8ರವರೆಗೆ ದಾಖಲಾಗಿವೆ.

149 ಜಿಲ್ಲೆಗಳಲ್ಲಿ ಒಂದೂ ಪ್ರಕರಣ ಇಲ್ಲ

ನವದೆಹಲಿ: ದೇಶದಲ್ಲಿ ಒಂದೆಡೆ ಕೊರೋನಾ ಪ್ರಕರಣಗಳು ದಾಖಲೆ ನಿರ್ಮಿಸುತ್ತಿದ್ದರೆ, ಇನ್ನೊಂದೆಡೆ 149 ಜಿಲ್ಲೆಗಳಲ್ಲಿ ಕಳೆದ 1 ವಾರದಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. 8 ಜಿಲ್ಲೆಗಳಲ್ಲಿ ಕಳೆದ 14 ದಿನದಲ್ಲಿ ಒಂದೂ ಪ್ರಕರಣ ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ತಿಳಿಸಿದ್ದಾರೆ.

Follow Us:
Download App:
  • android
  • ios