Asianet Suvarna News Asianet Suvarna News

5 ವರ್ಷದೊಳಗಿನ ಮಕ್ಕಳಲ್ಲಿ ಟೊಮೆಟೋ ಜ್ವರ, ಭಾರತದಲ್ಲಿ 82 ಕೇಸ್ ಪತ್ತೆ!

ಕೊರೋನಾ, ಮಂಕಿಪಾಕ್ಸ್ ಜ್ವರಗಳಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಭಾರತಕ್ಕೆ ಹೊಸ ಆತಂಕ ಶುರುವಾಗಿದೆ. 5 ವರ್ಷದೊಳಗಿನ ಮಕ್ಕಳಲ್ಲಿ ಟೋಮೋಟೋ ಜ್ವರ ಹೆಚ್ಚಾಗುತ್ತಿದೆ. ಇದೀಗ 82 ಪ್ರಕರಣಗಳು ದಾಖಲಾಗಿದೆ.

India Report 83 Tomato Fever case in children younger than 5 years ckm
Author
Bengaluru, First Published Aug 20, 2022, 7:53 PM IST

ನವದೆಹಲಿ(ಆ.20): ಏರಿಕೆಯಾಗುತ್ತಿದ್ದ ಕೊರೋನಾ ಪ್ರಕರಣ ಸಂಖ್ಯೆ ನಿಧಾನಗತಿಯಲ್ಲಿ ಇಳಿಕೆಯಾಗುತ್ತಿದೆ. ಮಂಕಿಪಾಕ್ಸ್ ಪ್ರಕರಣ ನಿಯಂತ್ರಣದಲ್ಲಿದೆ. ಎಲ್ಲವೂ ಸಹಜಸ್ಥಿತಿಗೆ ಮರಳುತ್ತಿದೆ ಅನ್ನುವಷ್ಟರಲ್ಲೇ ಇದೀಗ  ಟೊಮೆಟೋ ಜ್ವರ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. 5 ವರ್ಷದೊಳಗಿನ ಮಕ್ಕಳಲ್ಲಿ ಈ  ಟೊಮೆಟೋ ಪ್ರಕರಣ ತೀವ್ರವಾಗಿ ಕಾಣಿಸಿಕೊಳ್ಳುತ್ತಿದೆ. ಇದೀಗ ಭಾರತದಲ್ಲಿ ಟೋಮೋಟೋ ಜ್ವರ ಪ್ರಕರಣ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಕೇರಳದಲ್ಲಿ ಪತ್ತೆಯಾಗಿದೆ. ಚಿಕ್ಕ ಮಕ್ಕಳಲ್ಲಿ ತೀವ್ರವಾಗಿ ಜ್ವರ ಕಾಣಿಸಿಕೊಳ್ಳುತ್ತಿದೆ. ಹಲವು ಮಕ್ಕಳ ಮಾದರಿ ಸಂಗ್ರಹಿಸಲಾಗಿದೆ. ಈ ವರದಿಗಳು ಬಂದ ಬಳಿಕ ಭಾರತದಲ್ಲಿನ ಟೋಮೋಟೋ ಜ್ವರ ಪ್ರಕರಣಗಳು ಹೆಚ್ಚಾಗುವ ಆತಂಕ ಹೆಚ್ಚಾಗಿದೆ. 

5 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಟೋಮೋಟೋ ಜ್ವರದಿಂದ ಚರ್ಮದ ತುರಿಕೆ ಕಾಣಿಸಿಕೊಳ್ಳಲಿದೆ. ಮೈಕೈನೋವು, ಸಂಧಿ ಊತ, ನಿರ್ಜಲೀಕರಣ, ಆಯಾಸಗಳು ಕಾಣಿಸಿಕೊಳ್ಳುತ್ತದೆ. ಕೋವಿಡ್‌ 4ನೇ ಅಲೆಯ ಭೀತಿಯ ನಡುವೆಯೇ ಭಾರತದಲ್ಲಿ ಟೊಮೆಟೋ ಜ್ವರ ನಿಧಾನವಾಗಿ ವ್ಯಾಪಿಸುತ್ತಿರುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಮೇ 6ರಂದು ಮೊದಲ ಬಾರಿಗೆ ಕೇರಳದಲ್ಲಿ ಪತ್ತೆಯಾಗಿದ್ದ ಈ ಭಾರೀ ಸಾಂಕ್ರಾಮಿಕ ರೋಗ ಒಡಿಶಾಗೂ ವ್ಯಾಪಿಸಿ ಇದುವರೆಗೂ 82 ಮಕ್ಕಳಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಕೇರಳದ ನೆರೆಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡಲ್ಲಿ ಹೈ ಅಲರ್ಚ್‌ ಘೋಷಿಸಲಾಗಿದೆ ಎಂದು ಲ್ಯಾನ್ಸೆಟ್‌ ಜರ್ನಲ್‌ನ ವರದಿ ಹೇಳಿದೆ.

Rat Bite Fever: ಮಾರಣಾಂತಿಕ ಇಲಿ ಜ್ವರದ ಬಗ್ಗೆ ಎಚ್ಚರವಿರಲಿ

ಸಾಮಾನ್ಯವಾಗಿ 1-5 ವಯೋಮಾನದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಮೊದಲಿಗೆ ಸಣ್ಣ ಗುಳ್ಳೆಯ ರೂಪದಲ್ಲಿದ್ದು ಬಳಿಕ ಟೊಮೆಟೋ ಗಾತ್ರಕ್ಕೆ ತಿರುಗುತ್ತದೆ. ಹೀಗಾಗಿ ಇದನ್ನು ಟೊಮೆಟೋ ಫä್ಯ ಎಂದು ಗುರುತಿಸಲಾಗುತ್ತದೆ. ವಯಸ್ಕರ ದೇಹದಲ್ಲಿ ಈ ಸೋಂಕಿಗೆ ಸೂಕ್ತ ಪ್ರತಿರೋಧ ತೋರುವ ಜೀವರಕ್ಷಕ ವ್ಯವಸ್ಥೆ ಅಭಿವೃದ್ಧಿಯಾಗಿರುತ್ತದೆ ಎಂದು ವರದಿ ಹೇಳಿದೆ. ಮಕ್ಕಳ ಕೈ, ಕಾಲು ಮತ್ತು ಬಾಯಿಯಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಮೊದಲಿಗೆ ಮೇ 6ರಂದು ಕೇರಳದಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಒಡಿಶಾದಲ್ಲೂ ಹಲವು ಪ್ರಕರಣಗಳು ದಾಖಲಾಗಿದ್ದವು. ಇದುವರೆಗೆ ದೇಶದಲ್ಲಿ ಒಟ್ಟು 82 ಪ್ರಕರಣ ದಾಖಲಾಗಿದ್ದು, ಎಲ್ಲಾ 5 ವರ್ಷದೊಳಗಿನ ಮಕ್ಕಳು ಎಂದು ವರದಿ ಹೇಳಿದೆ.

ತೀವ್ರ ಜ್ವರ, ಮೈಕೈ ನೋವು, ಸಂದುಗಳಲ್ಲಿ ಊತ, ಆಯಾಸ, ಮೈಯಲ್ಲಿ ಗುಳ್ಳೆ ರೋಗ ಲಕ್ಷಣಗಳಾಗಿವೆ. ಕೆಲವರಿಗೆ ತಲೆಸುತ್ತು, ವಾಂತಿ, ಅತಿಸಾರ, ನಿರ್ಜಲೀಕರಣದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಸದ್ಯ ಇದಕ್ಕೆ ಯಾವುದೇ ನಿರ್ದಿಷ್ಟಔಷಧವೂ ಇಲ್ಲ ಎಂದು ವರದಿ ಹೇಳಿದೆ.

ಕೊರೋನಾ, ಮಂಕಿಪಾಕ್ಸ್‌ ಆಯ್ತು, ಕರಾವಳಿಯಲ್ಲೀಗ ಇಲಿಜ್ವರದ ಆತಂಕ !

ರಾಜ್ಯದಲ್ಲಿ ಮಂಕಿಪಾಕ್ಸ್‌ ಮೇಲೆ ಹೆಚ್ಚಿನ ನಿಗಾ: ಡಾ.ಸುಧಾಕರ್‌
ರಾಜ್ಯದಲ್ಲಿ ಮಂಕಿಪಾಕ್ಸ್‌ ಸೋಂಕು ತಪಾಸಣೆ, ನಿಗಾ ಹೆಚ್ಚಿಸಿದ್ದು, ಈವರೆಗೆ ಒಬ್ಬರಲ್ಲೂ ಸೋಂಕು ದೃಢಪಟ್ಟಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸ್ಪಷ್ಟಪಡಿಸಿದರು. ವಿಶ್ವ ವ್ಯಾಸ್ಕು್ಯಲರ್‌ ದಿನ ಅಂಗವಾಗಿ ವ್ಯಾಸ್ಕು್ಯಲರ್‌ ಸರ್ಜನ್ಸ್‌ ಅಸೋಸಿಯೇಶನ್‌ ವತಿಯಿಂದ ಆಯೋಜಿಸಿದ್ದ ಜಾಗೃತಿ ವಾಕಥಾನ್‌ನಲ್ಲಿ ಮಾತನಾಡಿದ ಅವರು, ಮಂಕಿ ಪಾಕ್ಸ್‌ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುಖ್ಯವಾಗಿ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು 24 ಗಂಟೆಯೂ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿ​ ದ್ದಾರೆ. ಮೂರು ಬಗೆಯ ಪಾಳಿಯನ್ನು ನಿಗದಿ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲೂ ಈ ಪ್ರಕರಣ ಕಂಡುಬಂದರೂ, ರಾಜ್ಯದಲ್ಲಿ ಈವರೆಗೆ ಪ್ರಕರಣ ಕಂಡುಬಂದಿಲ್ಲ. ಇಥಿಯೋಪಿ​ಯಾದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮಂಕಿ ಪಾಕ್ಸ್‌ ಇರುವ ಅನುಮಾನದ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅದು ಸ್ಮಾಲ್‌ ಪಾಕ್ಸ್‌ ಎಂದು ದೃಢಪಟ್ಟಿದೆ ಎಂದರು.

Follow Us:
Download App:
  • android
  • ios