ನವದೆಹಲಿ(ಸೆ. 05)   ದೇಶದಲ್ಲಿ ಕೊರೋನಾ ಪರಿಸ್ಥಿತಿ ಮಿತಿಮೀರಿ ಹೋಗುತ್ತಿದೆ.  ಶನಿವಾರ ಸಾರ್ವಕಾಲಿಕ ದಾಖಲೆಯ 86,432 ಸೋಂಕಿತರು ಪತ್ತೆಯಾಗಿದ್ದಾರೆ. ಇದು ಕೊರೋನಾ ತವರು ಚೀನಾದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ದಾಖಲಾದ  ಪ್ರಕರಣವನ್ನು ಒಂದೇ ದಿನ ಭಾರತ ಮೀರಿಸಿದೆ.

ಕಳೆದ 24  ಗಂಟೆ ಅವಧಿಯಲ್ಲಿ ಕೊರೋನಾ ಮಾರಿಗೆ ದೇಶದಲ್ಲಿ 1,089 ರೋಗಿಗಳು ಬಲಿಯಾಗಿದ್ದು ಸಾವಿನ ಸಂಖ್ಯೆಯಲ್ಲಿ ಭಾರತ ಅಮೆರಿಕದ ನಂತರದ ಸ್ಥಾನಕ್ಕೆ ಬಂದಿದೆ. ಭಾರತದಲ್ಲಿ ಒಟ್ಟು 69,561 ಜನ ಕೊರೋನಾಕ್ಕೆ ತುತ್ತಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 40 ಲಕ್ಷ ಗಡಿ ದಾಟಿ 40,23,179ಕ್ಕೆ ತಲುಪಿದೆ.

ರಷ್ಯಾದ ಕೊರೋನಾ ಲಸಿಕೆ ಕತೆ ಎಲ್ಲಿವರೆಗೆ ಬಂತು? 

ನಿರಂತರವಾಗಿ ಮೂರನೇ ದಿನ ಭಾರತದಲ್ಲಿ 80,000ಕ್ಕೂ ಅಧಿಕ ಹೊಸ ಪ್ರಕರಣ ಪತ್ತೆಯಾಗಿದ್ದು ಆತಂಕ ಹೆಚ್ಚಿಸಿದೆ.   ದೇಶದಲ್ಲಿ  846,395 ಆಕ್ಟೀವ್ ಕೇಸ್ ಗಳಿವೆ.  ಕಳೆದ 24  ಗಂಟೆ ಅವಧಿಯಲ್ಲಿ 70,072 ಜನ ಡಿಸ್ಚಾರ್ಜ್ ಆಗಿದ್ದಾರೆ.  ಈ ಮೂಲಕ ದೇಶದ ರಿಕವರಿ ಪ್ರಮಾಣ ಶೇ. 77.23ಕ್ಕೆ ತಲುಪಿದ್ದು ಸಮಾಧಾನಕರ ಸಂಗತಿ. 

ಒಂದೇ ದಿನ ದೇಶಾದ್ಯಂತ 10,59,346 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಆ ಮೂಲಕ ದೇಶದಲ್ಲಿ ಈ ವರೆಗೂ ಅಂದರೆ ಸೆ.4ರವರೆಗೂ 4,77,38,491 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ.