ನಿನ್ನೆ 16400 ಜನಕ್ಕೆ ಸೋಂಕು| 187 ದಿನಗಳಲ್ಲೇ ಅತಿ ಕಡಿಮೆ| ಕೊರೋನಾ ಕೇಸ್ 187 ದಿನದ ಕನಿಷ್ಠ| ದೇಶದಲ್ಲಿ ಇಳಿಮುಖ ಹಾದಿಯಲ್ಲಿ ಕೊರೋನಾ
ನವದೆಹಲಿ(ಡಿ.30): ಬ್ರಿಟನ್‌ನ ಹೊಸ ಮಾದರಿಯ ರೂಪಾಂತರಿ ಕೊರೋನಾ ವೈರಸ್ ಆತಂಕ ಸೃಷ್ಟಿಸಿದ್ದರೂ, ಭಾರತದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಇಳಿಮುಖ ಹಾದಿಯಲ್ಲಿವೆ. ಮಂಗಳವಾರ 16,432 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು 187 ದಿನಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ.
ಜೂನ್ 23 ರಂದು 15,968 ಹಾಗೂ ಜೂನ್ 24ರಂದು 16922 ಪ್ರಕರಣಗಳು ವರದಿಯಾಗಿದ್ದವು. ಇದಾದ ಬಳಿಕ ಏರುಗತಿಯಲ್ಲಿ ಸಾಗಿದ್ದವು. ಈಗ ಜೂನ್ 24ರ ನಂತರದ ಅತಿ ಕನಿಷ್ಠ ಏಕದಿನದ ಪ್ರಕರಣ ದಾಖಲಾಗಿವೆ.
ಮಂಗಳವಾರ ಬೆಳಗ್ಗೆ 8 ಗಂಟೆಯವರೆಗೆ ಒಂದೇ ದಿನ 24,900 ಜನರು ಗುಣಮುಖರಾಗಿದ್ದಾರೆ. ಈಗ 2,68,581 ಸಕ್ರಿಯ ಕೇಸ್ ಇವೆ. ಈ ಮೂಲಕ ಸತತ 8ನೇ ದಿನವೂ ಈ ಸಂಖ್ಯೆ 3 ಲಕ್ಷಕ್ಕಿಂತ ಕಡಿಮೆ ಉಳಿದುಕೊಂಡಿದೆ. ಇದು ಒಟ್ಟಾರೆ ಕೇಸ್‌ಲೋಡ್‌ನ ಕೇವಲ ಶೇ.2.63ರಷ್ಟಾಗಿದೆ.
ಇನ್ನು ಈವರೆಗೆ ಒಟ್ಟಾರೆ 1,02,24,303 ಮಂದಿಗೆ ಈವರೆಗೆ ಸೋಂಕು ತಗುಲಿದ್ದು, 98 ಲಕ್ಷ ಮಂದಿ ಮಂದಿ ಗುಣಮುಖರಾಗಿದ್ದಾರೆ.
ಇದೇ ವೇಳೆ, 252 ಜನರು ಮಂಗಳವಾರ ಒಂದೇ ದಿನ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1,48,153ಕ್ಕೆ ಏರಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 30, 2020, 7:49 AM IST