Asianet Suvarna News Asianet Suvarna News

ಮೋದಿ ಪ್ರಧಾನಿಯಾದ ಬಳಿಕ ದೊಡ್ಡ ಉಗ್ರ ದಾಳಿ ನಡೆದಿಲ್ಲ; ಭದ್ರತೆಯಲ್ಲಿ ರಾಜಿ ಇಲ್ಲ ಎಂದ ರಾಜನಾಥ್!

  • ಭಾರತದ ಭದ್ರತೆ ವಿಚಾರದಲ್ಲಿ ರಾಜಿ ಇಲ್ಲ, ರಕ್ಷಣಾ ಸಚಿವ ರಾಜನಾಥ್ ಸಿಂಗ್
  • 2014ರ ಬಳಿಕ ಭಾರತದಲ್ಲಿ ದೊಡ್ಡ ಉಗ್ರ ದಾಳಿಗೆ ಅವಕಾಶ ನೀಡಿಲ್ಲ
  • ಭಯೋತ್ಪಾದನೆ ಮಟ್ಟಹಾಕಿ ಶಾಂತಿ ಸ್ಥಾಪನೆ ಬಿಜೆಪಿ ಸರ್ಕಾರದ ಮೊದಲ ಆದ್ಯತೆ
India not wintnessed major terror attack after Narendra modi become PM says Rajnath Singh ckm
Author
Bengaluru, First Published Sep 2, 2021, 8:38 PM IST

ಗುಜರಾತ್(ಸೆ.02): ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಯಾವುದೇ ದೊಡ್ಡ ಭಯೋತ್ಪದನಾ ದಾಳಿ ನಡೆದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ರಾಜನಾಥ್ ಸಿಂಗ್ ಭಾರತದ ಭದ್ರತೆ ಕುರಿತು ಹೇಳಿದ್ದಾರೆ.

'ಡ್ರ್ಯಾಗನ್‌ಗೆ ಒಂದಿಂಚೂ ನೆಲ ಬಿಟ್ಟಿಲ್ಲ: ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಭಾರತ-ಚೀನಾ ಒಪ್ಪಂದ'

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ರಾಜೀಯಾಗಿಲ್ಲ. ಇದಕ್ಕಾಗಿ ಮೋದಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳು ಭಯೋತ್ಪಾದನೆ ಹಾಗೂ ಅದಕ್ಕೆ ಬೆಂಬಲ ನೀಡುವ ಯಾವುದೇ ಶಕ್ತಿಗಳನ್ನು ಮಟ್ಟಹಾಕುವ ಧೈರ್ಯವೇ ಕಾರಣ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

 

ಭಯೋತ್ಪಾದಕರ ಪ್ರತಿ ಹೆಜ್ಜೆಯನ್ನು ಕೇಂದ್ರ ಸರ್ಕಾರ ನಿಷ್ಕ್ರೀಯಗೊಳಿಸಿದೆ. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಸೇರಿದಂತೆ ಸೀಮೆ ದಾಟಿ ನಡೆಸಿದ ಪ್ರತಿದಾಳಿಗಳು ಭಯೋತ್ಪಾದಕರನ್ನು ನಿದ್ದೆಗೆಡಿಸಿದೆ. ಇದು ಮೋದಿ ಸರ್ಕಾರದ ಸಾಧನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಲಡಾ​ಖ್‌​ನಲ್ಲೇ ನಿಂತು ಚೀನಾ​ಕ್ಕೆ ರಾಜ​ನಾಥ್‌ ನೇರ ಎಚ್ಚ​ರಿ​ಕೆ!

ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆಯನ್ನು ಕಾಂಗ್ರೆಸ್ ಜಾರಿಗೆ ತರದೆ ಯೋಧರ ಕುಟುಬದ ಜೊತೆ ಚೆಲ್ಲಾಟವಾಡಿತು. 40 ವರ್ಷಗಳಿಂದ ಕಾಂಗ್ರೆಸ್ ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆ ಜಾರಿಗೆ ತರಲಿಲ್ಲ. ಆದರೆ ಮೋದಿ ಸರ್ಕಾರ ತಕ್ಷಣವೇ ಈ ಸಮಸ್ಯೆ ಬಗೆಹಿಸಿತು. ದೇಶ ಕಾಯುವ ಯೋಧರ ಕಾಳಜಿ ಕುರಿತು ಮೋದಿ ಸರ್ಕಾರ ಹಾಗೂ ಕಾಂಗ್ರೆಸ್ ಸರ್ಕಾರ ವ್ಯತ್ಯಾಸ ಗಮನಿಬಹುದು ಎಂದು ರಾಜನಾಥ್ ಸಿಂಗ್ ಹೇಳಿದರು.

 

ಅಯೋಧ್ಯೆ ರಾಮಮಂದಿರ ಸಮಸ್ಯೆ ಬಗಹರಿಸಿ ಮಂದಿರ ನಿರ್ಮಾಣ ಮಾಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಈ ಕುರಿತು ಆಶ್ವಾಸನೆ ನೀಡಿತ್ತು. ಆ ಅಶ್ವಾಸನೆಯನ್ನು ಬಿಜೆಪಿ ಈಡೇರಿಸಿದೆ. ಪ್ರತಿ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ. ಅಭಿವೃದ್ಧಿ ಪಥದಲ್ಲಿ ದೇಶ ಮುನ್ನಡೆಯುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
 

Follow Us:
Download App:
  • android
  • ios