ಭಾರತದ ಹೊಸ ರೂಪಾಂತರಿ ವೈರಸ್‌ನ ವೇಗ 2.5 ಪಟ್ಟು ಅಧಿಕ| ಒಬ್ಬರಿಂದ ಮೂವರಿಗೆ ಹರಡುತ್ತಿದೆ ಸೋಂಕು

ನವದೆಹಲಿ(ಮೇ.05): ಭಾರತದಲ್ಲಿ ಕೊರೋನಾ 2ನೇ ಅಲೆಗೆ ಕಾರಣವಾಗಿರುವ ರೂಪಾಂತರಿ ಕೊರೊನಾ ವೈರಸ್‌ ಈ ಹಿಂದೆ ಪತ್ತೆ ಆದ ಕೊರೋನಾ ಪ್ರಭೇದಕ್ಕಿಂತ ಎರಡೂವರೆ ಪಟ್ಟು ಅಧಿಕ ವೇಗದಲ್ಲಿ ಸೋಂಕನ್ನು ಹರಡಲು ಕಾರಣವಾಗುತ್ತಿದೆ. ಒಬ್ಬ ವ್ಯಕ್ತಿಯಿಂದ ಮೂವರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.

ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಮತ್ತು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರೀಸಚ್‌ರ್‍ ನಡೆಸಿರುವ ಸಂಖ್ಯಾಶಾಸ್ತ್ರೀಯ ಅಧ್ಯಯನದಿಂದ ಈ ಸಂಗತಿ ಬೆಳಕಿಗೆ ಬಂದಿದೆ.

"

ಕೊರೋನಾ ವೈರಸ್‌ನ ನೂತನ ಪ್ರಭೇದ ಹೆಚ್ಚು ಜನರಿಗೆ ಸೋಂಕು ಹಬ್ಬಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಕೊರೋನಾ 2ನೇ ಅಲೆಯಲ್ಲಿ ಹೆಚ್ಚು ಮಂದಿ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಅಧ್ಯಯನದ ಪ್ರಕಾರ, ಮುಂಬೈನಲ್ಲಿ ಕೊರೋನಾ ಸಂಬಂಧಿತ ಸಾವಿನ ಸಂಖ್ಯೆ ಮೇ ಮೊದಲ ವಾರದಲ್ಲಿ ತುತ್ತತುದಿಯನ್ನು ತಲುಪಲಿದ್ದು, ಜೂ.1ರ ವೇಳೆಗೆ ಸಾವಿನ ಪ್ರಮಾಣ ಗಣನೀಯವಾಗಿ ಇಳಿಕೆ ಆಗುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಲಸಿಕೆ ಅಭಿಯಾನವನ್ನು ವ್ಯಾಪಕವಾಗಿ ಕೈಗೊಂಡರೆ ಕೊರೋನಾ ವೈರಸ್‌ನ ಇನ್ನೊಂದು ಹೊಸ ಪ್ರಭೇದದ ದಾಳಿಯನ್ನು ತಡೆಗಟ್ಟಬಹುದಾಗಿದೆ ಎಂದು ಅಧ್ಯಯನ ತಿಳಿಸಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona