ಕೋಲ್ಕತ್ತಾ(ಏ.15): ಮಾಧ್ಯಮಗಳ ಮಧ್ಯೆ ಸೆಲ್ಫಿ ತೆಗೆದುಕೊಳ್ಳುಲು ಪ್ರಯತ್ನಿಸಿದ ತಮ್ಮ ಅಭಿಮಾನಗಳ ಮೇಲೆ ಮಾಜಿ ಬಾಲಿವುಡ್ ನಟಿ ಮತ್ತು ರಾಜಕಾರಣಿ ಜಯಾ ಬಚ್ಚನ್ ಕೋಪಗೊಂಡ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದು ಅವರ ಅಭಿಮಾನಿಗಳು ಸೇರಿದಂತೆ ನೆಟ್ಟಿಗರನ್ನು ಬೇಸರಗೊಳಿಸಿದ್ದವು. ಹೀಗಿರುವಾಗಲೇ ಸದ್ಯ ಸ್ಮೃತಿ ಇರಾನಿಯ ಸರಳ ನಡೆ ಹಾಗೂ ಜನ ಸಾಮಾನ್ಯರೊಂದಿಗೆ ಪ್ರೀತಿಯಿಂದ ಬೆರೆತುಕೊಳ್ಳುವ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಭಾರತಕ್ಕೆ ಸ್ಮೃತಿ ಇರಾನಿಯಂತಹ ನಾಯಕರು ಬೇಕು, ಜಯಾ ಬಚ್ಚನ್‌ರಂತವರಲ್ಲ ಎಂಬ ಸಂದೇಶದೊಂದಿಗೆ ಹರಿದಾಡಲಾರಂಭಿಸಿದೆ.

ಹೌದು ಕಳೆದ ಐದಾರು ದಿನಗಳ ಹಿಂದೆ ಪಶ್ಚಿಮ ಬಂಗಾಳ ಚುನಾವಣೆಯ 4ನೇ ಹಂತದ ಮತದಾನದ ಕೊನೆಯ ದಿನ ತೃಣಮೂಲ ಕಾಂಗ್ರೆಸ್ ಪರವಾಗಿ ಜಯಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಹೀಗಿರುವಾಗ ಜಯಾರವರು ತಮ್ಮನ್ನು ನೋಡಲು ಬಂದ ಸಾವಿರಾರು ಜನರತ್ತ ಕೈ ಬೀಸುತ್ತಾ ಪ್ರಚಾರ ನಡೆಸುತ್ತಿದ್ದರು. ಇದೇ ವೇಳೆ ಅವರ ಅಭಿಮಾನಿಯೊಬ್ಬ ಜಯಾ ಇದ್ದ ವಾಹನವನ್ನು ಹತ್ತಿ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ್ದ. ಇದರಿಂದ ಕೋಪಗೊಂಡ ಜಯಾ ಅಭಿಮಾನಿಯನ್ನು ದೂಡಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ಸದ್ಯ ಮಾಜಿ ನಟಿ ಹಾಗೂ ಬಿಜೆಪಿ ಸಂಸದೆ ಸ್ಮೃತಿ ಇರಾನಿಯ ವಿಡಿಯೋ ಕೂಡಾ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಲಾರಂಭಿಸಿದೆ. ಇದರಲ್ಲಿ ಸ್ಮೃತಿ ಇರಾನಿಯವರು ಸೆಲ್ಫೀ ಕ್ಲಿಕ್ಕಿಸಲು ಬಂದ ಅಭಿಮಾನಿ ಜೊತೆ ನಿಂತು ಪೋಸ್‌ ಕೊಟ್ಟಿದ್ದಾರೆ. ಅಲ್ಲದೇ ಅವರನ್ನು ಭೇಟಿಯಾಘಲು ನಿಂತಿದ್ದ ಹಿರಿಯ ವ್ಯಕ್ತಿಯನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಇರಾನಿಯವರ ಈ ಸರಳತೆ ನೆಟ್ಟಿಗರ ಮನ ಗೆದ್ದಿದೆ.

ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಭಾರತಕ್ಕೆ ಸ್ಮೃತಿ ಇರಾನಿಯಂತಹ ಲೀಡರ್‌ಗಳ ಅಗತ್ಯವಿದೆ, ಜಯಾ ಬಚ್ಚನ್‌ರಂತವರದ್ದಲ್ಲ ಎಂಬ ಸಂದೇಶವೂ ಸೌಂಡ್‌ ಮಾಡುತ್ತಿದೆ.