ನವದೆಹಲಿ(ಏ.25): ಕೊರೋನಾ ವೈರಸ್ 2ನೇ ಅಲೆಗೆ ಭಾರತ ತತ್ತರಿಸಿದೆ. ಎಪ್ರಿಲ್ ತಿಂಗಳಿನಿಂದ ಭಾರತದಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ಸದ್ಯ ಭಾರತದಲ್ಲಿ ಕೊರೋನಾ 2ನೇ ಅಲೆಯ ಆರಂಭವಷ್ಟೆ. ಇದು ಮೇ ತಿಂಗಳ ಮಧ್ಯ ಭಾಗದಲ್ಲಿ ಮತ್ತಷ್ಟು ಸ್ಫೋಟಕಗೊಳ್ಳಲಿದೆ. ಹೀಗಾಗಿ ಕೊರೋನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಈ ಕುರಿತು ಮಿಚಿಗನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಬಯೋಸ್ಟಟಿಸ್ಟಿಯನ್ ಭ್ರಮಾರ್ ಮುಖರ್ಜಿ ಎಚ್ಚರಿಸಿದ್ದಾರೆ.

ಪರಿಸ್ಥಿತಿ ಕೈ ಮೀರಿದೆ, ದೇಶ ಕಾಪಾಡಲು ಏಮ್ಸ್‌ ನಿರ್ದೇಶಕರ ಎಚ್ಚರಿಕೆ!

ಭ್ರಮಾರ್ ಮುಖರ್ಜಿ ಹೇಳುತ್ತಿರುವ ಅಂಕಿ ಅಂಶ ದೇಶದ ಜನತೆಯ ಮತ್ತಷ್ಟು ಆತಂಕ ಹೆಚ್ಚಿಸಿದೆ. ಕೊರೋನಾ 2ನೇ ಅಲೆ ಮೇ ತಿಂಗಳ ಮಧ್ಯಭಾಗದಲ್ಲಿ ಸ್ಫೋಟಗೊಳ್ಳಲಿದೆ. ಪ್ರತಿ ದಿನ 8 ರಿಂದ 10 ಲಕ್ಷ ಕೊರೋನಾ ಕೇಸ್‌ಗಳು ದಾಖಲಾಗಲಿದೆ. ಇಷ್ಟೇ ಅಲ್ಲ ಪ್ರತಿ ದಿನ 4,500 ಸಾವು ಸಂಭವಿಸಲಿದೆ ಎಂದು ಭ್ರಮಾರ್ ಹೇಳಿದ್ದಾರೆ.

ಪ್ರೊಫೆಸರ್ ಮುಖರ್ಜಿ ಹೇಳಿದ ಅಂಕಿ ಅಂಶಗಳು ಈಗಾಗಲೇ ಹಲವು ತಜ್ಞರು ಹೇಳಿದ್ದಾರೆ. ಕಾರಣ ಈಗಲೇ ಭಾರತದಲ್ಲಿ ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಶನಿವಾರ(ಏ.25) ಭಾರತದಲ್ಲಿ 3.46 ಲಕ್ಷ ಕೊರೋನಾ ವೈರಸ್ ಪ್ರಕರಣ ದಾಖಲಾಗಿದೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ವಾರ ಲಾಕ್‌ಡೌನ್!

ಭಾರತ ಈಗಿನಿಂದಲೇ ಕೊರೋನಾ ಪ್ರಕರಣಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲಿ ಸರ್ಕಾರದಷ್ಟೇ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನಿಗೂ ಇದೆ. ಕೊರೋನಾ ವಕ್ಕರಿಸಿದಂತೆ ಎಚ್ಚರಿಸವಹಿಸಿಕೊಳ್ಳಬೇಕಿದೆ. ಮಾರ್ಗಸೂಚಿ ಪಾಲನೆ, ಅಗತ್ಯ ಹಾಗೂ ತುರ್ತು ಕಾರಣ ಹೊರತು ಪಡಿಸಿ ಮನೆಯಿಂದ ಹೊರಬರುವುದು ಸೂಕ್ತವಲ್ಲ. ಕೊರೋನಾ ಸ್ಫೋಟಗೊಂಡರೆ ಭಾರತವನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಿಚಿಗನ್ ವಿಶ್ವವಿದ್ಯಾಲಯ ಎಚ್ಚರಿಸಿದೆ.