World Happiness Report ದ್ವೇಷದಲ್ಲಿ ಭಾರತ ಶೀಘ್ರದಲ್ಲೇ ಮೊದಲ ಸ್ಥಾನಕ್ಕೆ, ಮೋದಿ ಸರ್ಕಾರ ಕುಟುಕಿದ ರಾಹುಲ್ ಗಾಂಧಿ!

  • ಸಂತುಷ್ಠ ದೇಶಗಳ ಪಟ್ಟಿಯಲ್ಲಿ ಭಾರತ 136ನೇ ಸ್ಥಾನ 
  • ಮೋದಿ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ
  • ದ್ವೇಷ, ಕೋಪದಲ್ಲಿ ಭಾರತ ನಂ.1 ಎಂದ ರಾಹಲ್
     
India may soon top Hate and Anger charts Rahul gandhi hits PM Modi Government on latest World Happiness Report ckm

ನವದೆಹಲಿ(ಮಾ.19): ವಿಶ್ವದ ಸಂತುಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ(world happiness report 2022) ಭಾರತ ಕುಸಿತ ಕಂಡ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದು ನರೇಂದ್ರ ಮೋದಿ (PM Narendra Modi)ಸರ್ಕಾರದಿಂದ ನಿರ್ಮಾಣವಾಗಿರುವ ಸ್ಥಿತಿ ಎಂದು ಟೀಕಿಸಿದ್ದಾರೆ. ಸಂತುಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 136ನೇ ಸ್ಥಾನಕ್ಕೆ ಕುಸಿದಿದೆ. ಭಾರತ ದ್ವೇಷದ, ಕೋಪದ ವಿಚಾರದಲ್ಲಿ ಮೊದಲ ಸ್ಥಾನದಲ್ಲಿರಲಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾವನ್ನು ಕುಟುಕಿಸಿದ್ದಾರೆ.

ಸ್ವಾತಂತ್ರ್ಯದಲ್ಲಿ  119ನೇ ಸ್ಥಾನ, ಹಸಿವಿನಿಂದ ಬಳಲುತ್ತಿರುವ ದೇಶಗಳಲ್ಲಿ ಭಾರತಕ್ಕೆ(India) 10ನೇ ಸ್ಥಾನ, ಸಂತುಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ 136ನೇ ಸ್ಥಾನ ಪಡೆದಿದೆ. ಆದರೆ ಕೋಪ ಹಾಗೂ ದ್ವೇಷದಲ್ಲಿ(Hate and Anger) ಭಾರತ ಶೀಘ್ರದಲ್ಲೇ ಮೊದಲ ಸ್ಥಾನಕ್ಕೇರಲಿದೆ  ಎಂದು ರಾಹುಲ್ ಗಾಂಧಿ(Rahul Gandhi) ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

Worlds Happiest Country ಪಟ್ಟಿಯಲ್ಲಿ ಭಾರತದ ಪ್ರಗತಿ, ಫಿನ್ಲೆಂಡ್ ದೇಶಕ್ಕೆ ನಂ.1 ಸ್ಥಾನ

ಇದಕ್ಕೂ ಮುನ್ನ ರಾಹುಲ್ ಗಾಂಧಿ, ಹಣದುಬ್ಬರ ವಿಚಾರ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಸಾಮಾನ್ಯರು, ಬಡವರ ಮೇಲೆ ತೆರಿಗೆ ಏರಿಸುತ್ತಿರುವ ಮೋದಿ ಸರ್ಕಾರ ಬದುಕು ಸಾಗಿಸುವುದನ್ನೇ ದುಸ್ತರವಾಗಿಸುತ್ತಿದೆ. ರಷ್ಯಾ ಹಾಗೂ ಉಕ್ರೇನ್(Russia Ukraine war) ನಡುವಿನ ಯುದ್ಧಕ್ಕೂ ಮುನ್ನವೇ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಆರ್ಥಿಕ ಹೊರೆಯನ್ನು ತಂದೊಡ್ಡಿದೆ. ಕಚ್ಚಾ ತೈಲ ಬೆಲೆ 100 ಡಾಲರ್‌ಗೂ ಅಧಿಕ, ಆಹಾರಾ ಪದಾರ್ಥಗಳ ಬೆಲೆ ಶೇಕಡಾ 25 ರಷ್ಟು ಹೆಚ್ಚಳ, ಸರ್ಕಾರ ಬಡವರು, ಮಧ್ಯಮ ವರ್ಗದ ಜನರನ್ನು ಕಾಪಾಡಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಫಿನ್ಲೆಂಡ್‌ ಸತತ 5ನೇ ಸಲ ‘ಸಂತೋಷ ದೇಶ’!
ಫಿನ್ಲೆಂಡ್‌ ಮತ್ತೊಮ್ಮೆ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶವಾಗಿ ಹೊರಹೊಮ್ಮಿದೆ. ಜಗತ್ತಿನ ಅತ್ಯಂತ ಸಂತೋಷದಾಯಕ ದೇಶಗಳಲ್ಲಿ ಸತತ ಐದನೇ ಬಾರಿ ಫಿನ್ಲೆಂಡ್‌ ಅಗ್ರಸ್ಥಾನ ಗಳಿಸಿದೆ. ಆದರೆ ತಾಲಿಬಾನ್‌ ಆಡಳಿತದ ಅಷ್ಘಾನಿಸ್ತಾನ ಈ ಬಾರಿ ಕೊನೆಯ (149ನೇ) ಸ್ಥಾನದಲ್ಲಿದೆ.

ಕಾಂಗ್ರೆಸ್ ಹಿರಿಯ ನಾಯಕರ ಬೇಗುದಿಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತುಪ್ಪ ಸುರಿದ ರಾಹುಲ್ ಗಾಂಧಿ!

ವಿಶ್ವಸಂಸ್ಥೆ ಪ್ರಾಯೋಜಕತ್ವದಲ್ಲಿ ‘ವಿಶ್ವ ಸಂತೋಷ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ. ಭಾರತವು ಈ ಪಟ್ಟಿಯಲ್ಲಿ 136 ನೇ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತ 139 ನೇ ಸ್ಥಾನದಲ್ಲಿತ್ತು. ಅದೇ ಪಾಕಿಸ್ತಾನ ಈ ಪಟ್ಟಿಯಲ್ಲಿ 103ನೇ ಸ್ಥಾನದಲ್ಲಿದ್ದು, ಭಾರತಕ್ಕಿಂತ ಮುಂದಿದೆ. ಯುದ್ಧಪೀಡಿತ ಉಕ್ರೇನ್‌ 108 ನೇ ಸ್ಥಾನದಲ್ಲಿದೆ. ಆದರೆ ರಷ್ಯಾ ಉಕ್ರೇನಿನ ಮೇಲೆ ದಾಳಿ ನಡೆಸಿದಕ್ಕಿಂತ ಮೊದಲು ಈ ಅಂಕಿಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.

ಫಿನ್ಲೆಂಡ್‌, ಡೆನ್ಮಾರ್ಕ್, ಸ್ವಿಜರ್ಲೆಂಡ್‌, ಐಸ್‌ಲ್ಯಾಂಡ್‌, ನೆದರ್ಲೆಂಡ್‌ ಟಾಪ್‌ ಐದು ರಾಷ್ಟ್ರಗಳಾಗಿವೆ. ಈ ರಾಷ್ಟ್ರಗಳಲ್ಲಿನ ಜನರು ಉಳಿದ ದೇಶಗಳಿಗೆ ಹೋಲಿಸಿದರೆ ಹೆಚ್ಚು ಸಂತೋಷದಿಂದ ಜೀವಿಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅಷ್ಘಾನಿಸ್ತಾನನನ್ನು ತಾಲಿಬಾನಿಗಳು ಮರಳಿ ವಶಪಡಿಸಿಕೊಂಡಿದ್ದೇ ಅದು ಪಟ್ಟಿಯಲ್ಲಿ 149 ನೇ ಸ್ಥಾನ ಕುಸಿದಿದೆ. ಇದು ಅಲ್ಲಿಯ ಜನರು ಎಷ್ಟುಅಸಂತೋಷವಾಗಿದ್ದಾರೆ ಎಂಬುದರ ಸೂಚಕ. ಅಷ್ಘಾನಿಸ್ತಾನ, ಜಿಂಬಾಬ್ವೆ, ರ್ವಾಂಡಾ, ಬೋಟ್ಸಾ$್ವನಾ, ಲೆಸೊಥೋ ರಾಷ್ಟ್ರಗಳ ಪಟ್ಟಿಯಲ್ಲಿ ಅಂತಿಮ ಸ್ಥಾನ ಪಡೆದ ಐದು ರಾಷ್ಟ್ರಗಳಾಗಿವೆ.

ಮಾನದಂಡ ಏನು?:
ಕಳೆದ 10 ವರ್ಷಗಳಿಂದ ಪ್ರತಿವರ್ಷವೂ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶಗಳ ಪಟ್ಟಿಬಿಡುಗಡೆ ಮಾಡಲಾಗುತ್ತದೆ. ದೇಶೀಯ ತಲಾ ಉತ್ಪನ್ನ, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಸ್ವಂತ ಜೀವನ ಆಯ್ಕೆಗಳನ್ನು ಮಾಡುವ ಸ್ವಾತಂತ್ರ್ಯ, ಸಾಮಾನ್ಯ ಜನಸಂಖ್ಯೆಯ ಉದಾರತೆ ಮತ್ತು ಆಂತರಿಕ ಮತ್ತು ಬಾಹ್ಯ ಭ್ರಷ್ಟಾಚಾರದ ಮಟ್ಟದ ಆಧಾರದ ಮೇಲೆ ಒಟ್ಟು 149 ದೇಶಗಳಿಗೆ ರಾರ‍ಯಂಕ್‌ ನೀಡಲಾಗುತ್ತದೆ.

Latest Videos
Follow Us:
Download App:
  • android
  • ios