ಬ್ರಿಟನ್, ಅಮೆರಿಕ ಮತ್ತು ಇಸ್ರೇಲ್ ರಾಷ್ಟ್ರಗಳಲ್ಲಿ ಕೊರೋನಾ ಲಸಿಕೆ ಆರಂಭ| ಭಾರತದಲ್ಲಿ ಜನವರಿಯಲ್ಲಿ ಮೊದಲ ಲಸಿಕೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸುಳಿವು
ನವದೆಹಲಿ(ಡಿ.21): ಬ್ರಿಟನ್, ಅಮೆರಿಕ ಮತ್ತು ಇಸ್ರೇಲ್ ರಾಷ್ಟ್ರಗಳಲ್ಲಿ ಕೊರೋನಾ ಲಸಿಕೆ ಆರಂಭವಾಗಿರುವ ಬೆನ್ನಲ್ಲೇ, ಹೊಸ ವರ್ಷದ ಮೊದಲ ತಿಂಗಳಲ್ಲೇ ದೇಶದಲ್ಲೂ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಬಹುದಾದ ನಿರೀಕ್ಷೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಲಸಿಕೆ ಕುರಿತಾದ ಜನ ಸಾಮಾನ್ಯರ ಪ್ರಶ್ನೋತ್ತರಗಳನ್ನು ಒಳಗೊಂಡ ವರದಿ ಬಿಡುಗಡೆ ಮಾಡಿತ್ತು.
ಈ ಬಗ್ಗೆ ಭಾನುವಾರ ಮಾತನಾಡಿದ ಅವರು, ‘ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿ ನಮ್ಮ ಮೊದಲ ಆದ್ಯತೆಯಾಗಿದೆ. ಈ ವಿಚಾರಗಳಲ್ಲಿ ಯಾವುದೇ ಕಾರಣಕ್ಕೆ ರಾಜಿಯಾಗಲ್ಲ. ವೈಯಕ್ತಿಕವಾಗಿ 2021ರ ಜನವರಿ ಯಾವುದೇ ವಾರದಲ್ಲಿ ದೇಶದ ಜನತೆಗೆ ಮೊದಲ ಹಂತದ ಕೊರೋನಾ ಲಸಿಕೆ ನೀಡಲಿದ್ದೇವೆ ಎಂಬ ಆಶಾಭಾವನೆ ಇದೆ’ ಎಂದರು.
ದೇಶದಲ್ಲಿ ತುರ್ತು ಬಳಕೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಭಾರತದ ಕೋವ್ಯಾಕ್ಸಿನ್, ಅಮೆರಿಕದ ಫೈಝರ್-ಬಯೋಎನ್‌ಟೆಕ್, ಬ್ರಿಟನ್‌ನ ಕೋವಿಶೀಲ್ಡ್ ಲಸಿಕೆಗಳನ್ನು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಸಿಜಿಐ) ಪರೀಕ್ಷೆಗೊಳಪಡಿಸುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 21, 2020, 8:00 AM IST